ಮಿ.ಫೆಡ್ನಾವಿಸ್.., ಇದರ ಮೇಲೆ ಚುನಾವಣೆ ನಡೆಯುತ್ತೆ... 2028 ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ, ಬಿಜೆಪಿಗೆ ಹೇಳಿ-ಡಿಕೆಶಿ-Mr. Fednavis... We will come to power again in 2028, tell BJP - DK

SUDDILIVE || BHADRAVATI

ಮಿ.ಫೆಡ್ನಾವಿಸ್... ಇದರ ಮೇಲೆ ಚುನಾವಣೆ ನಡೆಯುತ್ತೆ...  2028 ಕ್ಕೆ ನಾವೇ ಮತ್ತೆ ಅಧಿಕಾರಕ್ಕೆ, ಬಿಜೆಪಿಗೆ ಹೇಳಿ-ಡಿಕೆಶಿ-Mr. Fednavis... We will come to power again in 2028, tell BJP - DK

Fednavis, Bjp

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರ ಎಙದು ಟೀಕಿಸಲಾಗುತ್ತಿತ್ತು ಟೀಕೆಗಳು ಸಾಯುತ್ತೆ ಕೆಲಸ ಗೆಲ್ಲುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 

ಬಿಆರ್ ಪಿಯಲ್ಲಿ ಭದ್ರೆಗೆ ಬಾಗಿನ ನೀಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 60 ವರ್ಷದ ಹಿಂದೆ ಭದ್ರೆ ಜಲಾಶಯ ನಿರ್ಮಿಸಲಾಗಿದೆ. ಪಶ್ಚಿಮಘಟ್ಟದಿಂದ ಹುಟ್ಟುವ ನದಿಗೆ 1945  ರಲ್ಲಿ ಸರ್ವೆ ನಡೆಸಿ 1965, ರಲ್ಲಿ ಜಲಾಶಯ ನಿರ್ಮಾಣವಾಗಿದೆ.
ರೈತನಿಗೆ ಸಂಬಳ, ಪ್ರಮೋಷನ್ ಇಲ್ಲ, ಲಂಚ ಇಲ್ಲ ರಜೆ ಇಲ್ಲ ಇಂತಹ ರೈತನನ್ನ‌ ಬದುಕಿಸುವುದೇ ಸರ್ಕಾರ ಉದ್ದೇಶವಾಗಿದೆ ಎಂದರು. 

ಜುಲೈನಲ್ಲಿ ಮೂರು ಬಾಲ್ಕು ಬಾರಿ ಭರ್ತಿಯಾಗಿದೆ. ಕನ್ನಂಬಾಡಿ ಕಟ್ಟೆಗೆ ಅನ್ನದ ಕಟ್ಟೆ ಆಗಿದೆ 92 ವರ್ಷದ ನಂತರಜುಲೈನಲ್ಲಿ ತುಂಬಿದ್ದು. ಈಗ ಮತ್ತೆ ಭರ್ತಿಯಾಗಿದೆ. ಸಂಸದ ಪ್ದಭಾರವರು 100 ಕೋಟಿ ಯೋಜನೆ ನೀಡಿದ್ದಾರೆ. ಹಂತ ಹಂತವಾಗಿ ಅನುಮೋದಿಸಲಿದ್ದೇನೆ. ಭದ್ರಾವತಿ ಶಾಸಕ, ಎಂಎಲ್ ಸಿ ಬಲ್ಕಿಷ್ ಭಾನು ಎಲ್ಲರೂ ಗ್ರ್ಯಾಂಟ್ ಪಡೆದುಕೊಂಡಿದ್ದಾರೆ.

ಜ ನ ರ ಪರ ಮತ್ತು ರೈತರ ಪರ ನಮ್ಮ ಶಾಸಕರು ಕೆಲಸ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗ ಪುಣ್ಯ ಕೆಲಸ ಮಾಡಬೇಕಿದೆ. ಮರಕ್ಕೆ ಬೇರು ಎಷ್ಟು ಮುಖ್ಯನೋ ಅದೇ ರೀತಿ ನಂಬಿಕೆಯೂ ಮುಖ್ಯವಾಗಿದೆ. ನಂಬಿಕೆಯಿಲ್ಲವೆಂದರೆ ಕೆಲಸಗಳು ನಡೆಯೊಲ್ಲ. ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು. ಅವಕಾಶವನ್ನ ಸರಿಯಾದ ರೀತಿ ಬಳಿಕೊಳ್ಳಬೇಕು ಎಂದರು.

ನೀರಾವರಿ  ಯೋಜನೆಗೆ 11 ಸಾವಿರ ಕೋಟಿ ಕರ್ಚು ಮಾಡಿದ್ದೇವೆ. ಬೊಮ್ಮಾಯಿ ಸರ್ಕಾರವಿದ್ದಾಗ ಭದ್ರ ಜಲಾಶಯಕ್ಕೆ 5300 ಕೋಟಿ ಕರ್ಚು ಮಾಡುವುದಾಗಿ ಹೇಳಿದ್ದರು. ಒಂದು ರೂ. ಬರಲಿಲ್ಲ. ಪಿಎಂ ನ್ನ ಸಂಸದರು ಭೇಟಿ ಮಾಡಲು ಹೇಳಿದ್ದೆ ಒಬ್ಬರೂ ಬಾಯಿಬಿಡಲಿಲ್ಲ. ಶಾಸಕರು ಹಣ ಬಿಡುಗಡೆ ಮಾಡಿ ಎಂದು ಕೇಳಿದಂತೆ. ನಮ್ಮ ರಾಜ್ಯದ ಬಿಜೆಪಿ ಸಂಸದರು ಕೇಂದ್ರದ ಮುಂದೆ ಕೇಳಬೇಕಿತ್ತು. ಆ ಕೆಲಸ ಮಾಡದ ಬಿಜೆಪಿ ಮೌನಕ್ಕೆ ಶರಣಾಗಿದೆ ಎಂದರು.  362 ಕೋಟಿ ಚನ್ನಗಿರಿ ಕೆರೆ ಅಭಿವೃದ್ಧಿಗೆ ಹಣ ನೀಡುವ ಬಗ್ಗೆ ಕ್ರಮ‌ಕೈಗೊಂಡಿರುವೆ. ಇದು ಮುಂದಿನ ಚುನಾವಣೆಗೆ ಅನುಕೂಲವಾಗಲಿದೆ ಎಂದರು.

ತಾಲೂಕ, ಚಿತ್ರದುರ್ಗ, ಶಿವಮೊಗ್ಗದವರು ಎಂದು ಜಗಳ ಆಡಬೇಡಿ, ಕೃಷ್ಣ ನದಿ ಎರಿಸಲು ಮಹಾರಾಷ್ಟದ ಸಿಎಂ ಬಿಡಲ್ಲವ್ಯಾಪ್ತಿಯಲ್ಲ. ಮಿ.ಫೆಡ್ನಾವಿಸ್  ಇದು ನಿಮ್ಮ ವ್ಯಾಪ್ತಿಯಲ್ಲ. ಇದು ನ್ಯಾಯಲಯದ ಆದೇಶವಾಗಿದೆ. 519 ರದ 524 ಮೀಟರ್ ಎತ್ತರಿಸಬೇಂದು ಆದೇಶಿಸಲಾಗಿದೆ. ಇದರ ಮೇಲೆ ನಾವು ಮುಂದಿನ ಚುನಾವಣೆ ಎದುರಿಸಲಿದ್ದೇವೆ. ಇದು ರಾಜ್ಯದ ರೈತರ ಹಕ್ಕು. ಇದನ್ನ ಸಂಸದರು ನೋಟಿಫಿಕೇಶನ್ ಹೊರಡಿಸಲು ಕ್ರಮ ಕೂಳ್ಳಬೇಕು ಇಲ್ಲ ರಾಜೀನಾಮೆ ನೀಡಿ ಎಂದು ಸಲಹೆ ನೀಡಿದರು.

ಬೇಡ್ತಾಯಿಲ್ಲ. ನಮ್ಮ ಸರ್ಕಾರ ಐದು ಗ್ಯಾರೆಂಟಿಗಳನ್ನ 1 ಲಕ್ಷ ಕೋಟಿ ಗೃಹಲಕ್ಷ್ಮಿಗೆ ಹಾಕಲಾಗಿದೆ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆಂದ ಕೈ ಅಧಿಕಾರದಲ್ಲಿದ್ದರೆ ಚೆಂದ ಹಾಗಾಗಿ 2028 ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ. ಇದನ್ನ ಬಿಜೆಪಿಗೆ ನೀವು ಹೇಳಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು. 

Mr. Fednavis... We will come to power again in 2028, tell BJP - DK     

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close