SUDDILIVE || SHIVAMOGGA
ಜಾತಿ ಜನಗಣತಿ ಕೈಬಿಡಿ ಇಲ್ಲ ಸಿಎಂ ಸ್ಥಾನ ಕಳೆದುಕೊಳ್ಳುತ್ತೀರಿ-ಈಶ್ವರಪ್ಪ ಎಚ್ಚರಿಕೆ-If you don't give up the caste census, you will lose the CM's post - Eshwarappa warns
ಹಿಂದೂ ಸಮಾಜವನ್ನ ಯಾರೂ ಒಡೆಯಲು ಸಾಧ್ಯವಿಲ್ಲ. ಅದು ನಿನ್ನೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿಯಲ್ಲಿ 330 ಹೊಸ ಜಾತಿ ಸೃಷ್ಠಿಯಾಗಿದೆ. ಜಾತಿ ಜನಗಣತಿ ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳ ಚಾಂಪಿಯನ್ ಆಗಲು ಹೊರಟಿದ್ದ ಸಿಂಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಹೈಕಮಾಂಡೇ ಇವರ ಮಾತು ಕೇಳುವಂತೆ ಮಾಡಿದ್ದರು. ಈಗ ಶಕ್ತಿಹೀನರಾದಂತೆ ಕಾಣುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೆ ಹೈಕಮಾಂಡ್ ಬಗ್ಗಿತ್ತು. ಕಾಂತರಾಜು ವರದಿಯನ್ನ ಜಾರಿಗೆ ತರುವುದಾಗಿ ಹೇಳಿದ್ದ ಸಿಎಂ ದೆಹಲಿಗೆ ಹೋದ ಮೇಲೆ ಕಾಂತರಾಜು ವರದಿಜಾರಿಗೆ 10 ವರ್ಷವಾಗಿದೆ. ಹೊಸದಾಗಿ ಮಾಡುವುದಾಗಿ ಹೇಳಿದರು. ಅಹಿಂದದ ಬಗ್ಗೆ ಕಾಳಜಿ ಏನಾಯಿತು? ಎಂದು ಪ್ರಶ್ನಿಸಿದರು.
158 ಕೋಟಿಗೆ ಮತ್ತು ಕಾಂತರಾಜು ವರದಿಗೆ ಬೆಂಕಿಹಾಕಿರುವ ಸಿದ್ದರಾಮಯ್ಯ. ಅದರ ಮುಂದಿನ ಹೆಜ್ಜೆ ಯಾಗಿ 420 ಕೋಟಿ ತರಲು ಹೊರಟಿದ್ದಾರೆ. ಸಚಿವ ಸಂಪುಟದಲ್ಲಿ ಸಿಎಂ ಅವರ ಜಾತಜನಗಣತಿಗೆ ನಾಲ್ಕೈದು ಜನ ಸಚಿವರು ಅವರ ಬೆನ್ನಿಗೆ ನಿಂತಿದ್ದಾರೆ. ಉಳಿದವರು ಜಾತಿಗಣತಿ ಬೇಡ ಮುಂದು ಹಾಕಿ ಅಥವಾ ಕೈಬಿಡಿ ಎನ್ನುತ್ತಿದ್ದಾರೆ. ಇದು ರಾಜ್ಯ ಸಂಪುಟದಲ್ಲಿ ನಡೆದ ಐತಿಹಾಸಿಕ ಘಟನೆಯಾಗಿದೆ. ಜಾತಿ ಜನಗಣಿ ನಡೆದರೆ ಸಿಎಂ ಸ್ಥಾನ ಕಳೆದುಕೊಳ್ಳುವ ಅಪಾಯವೂ ಇದೆ ಎಂದರು.
50 ಜಾತಿಗಳಿಗೆ ಕ್ರಿಶ್ಚಿಯನ್ ಜೊತೆ ಸೇರಿಸಲಾಗಿದೆ. ಸಿಎಂನ ಬಂಟರು ಕೂಡ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಅವರ ಬೆನ್ನಿಗೆ ನಿಲ್ಲದ ಸಚಿವರಿಗೆ ಅಭಿನಂದಿಸುವೆ. ದೇವರಾಜ್ ಅರಸ್ ಅವರು ಮತ್ತು ಹಿಂದುಳಿದವರ ಬೆನ್ನಿಗೆ ಯಾರೂ ಇಲ್ಲದಿದ್ದರೂ ಗಟ್ಟಿಯಾಗಿ ನಿಂತು ಯೋಜನೆಗಳನ್ನ ಜಾರಿಗೆ ತಂದರು. ಸಿದ್ದರಾನಯ್ಯ ಅವರು ಬೆನ್ನಿಗೆ ನಿಂತರೆ ಅಹಿಂದ ಪರ ಇಲ್ಲವಾದರೆ ಕುರ್ಚಿಪರ ಎಂಬ ಅಲಿಖಿತ ನಿಯಮವನ್ನ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಸಿಎಂ ಸ್ಥಾನ ಕಳೆದುಕೊಳ್ಳುತ್ತೀರಿ
ಹಠ ಮಾಡಿ ಸೆ.22 ರಿಂದ ಜಾತಿ ಗಣತಿ ಮಾಡಿದರೆ ಸಿಎಂ ಸ್ಥಾನ ಕಳೆದುಕೊಳ್ಳುತ್ತೀರಿ. ಅನೇಕ ಸ್ವಾಮೀಜಿ ಅವರ ಸಲಹೆಯನ್ನೂ ಕೈಬಿಟ್ಟರು. ಸಿಎಂ ಅವರ ಮಾತನ್ನ ಸಚಿವ ಸಂಪುಟ ಕೇಳಿಲ್ಲ. ಹಿಂದೂಗಳನ್ನ ಚಿದ್ರ ಮಾಡಲು ಹೊರಟವರಿಗೆ ಹಿನ್ನಡೆಯಾಗಲಿದೆ. ಜಾತಿ ಜನಗಣತಿಯನ್ನ ಮಾಡಬೇಡಿ. ಯಾರನ್ನ ಕೇಳಿ ಸಿದ್ದತೆ ಮಾಡಿಕೊಂಡಿದ್ದಾರೆ. ಇದು ಮೊದಲ ಹೆಜ್ಜೆಯಾಗಿದೆ ಹಠ ಮಾಡಿದರೆ ಸಿಎಂ ಸ್ಥಾನಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು.
ಮಂತ್ರಿಗಳು ಧೈರ್ಯಕ್ಕೆ ಮೆಚ್ಚುವೆ. ಕ್ರಿಶ್ಚಿಯನ್ ಜೊತೆ ಹಿಂದೂ ಜಾತಿಯನ್ನ ಸೇರಿಸಿದ್ದನ್ನ ಯಾವ ಧರ್ಮವೂ ಸ್ವಾಗತಿಸಿಲ್ಲ. ಜಾತಿ ಜನಗಣತಿಗೆ ಮನೆ ಮಬೆಗೆ ಸ್ಟಿಕ್ಕರ್ ಹಾಕುವ ಸಿದ್ದತೆ ನಡೆಸಿಕೊಂಡಿರುವುದು ಸರ್ಕಾರ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಸೆ.22 ರಂದು ಸರ್ವೆ ನಡೆದರೆ ಬೆಂಕಿ ಸುರುದುಕೊಂಡಂತೆ. ಹಿಂದುತ್ವದ ಜಯವಿದು. ಹಿಂದುತ್ವ ಬಿಜೆಪಿ ಸ್ವತ್ತಲ್ಲ. ಕಾಂಗ್ರೆಸ್ ನಲ್ಲೂ ಹಿಂದೂಗಳಿದ್ದಾರೆ. ಅದನ್ನ ಹೊಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ವೋಟ್ ಚೋರಿಯಲ್ಲಿ ಕಾಂಗ್ರೆಸ್ ಗೆದ್ದಿರುವ ಕಡೆ ಇವಿಎಂ ಸರಿಯಿದೆ ಸೋತಿರುವ ಕೊಡುವ ಇವಿಎಂ ಸರಿಯಲ್ಲ. ಅಷ್ಟುಕಡೆ ಚುನಾವಣೆ ಮಾಡಲಿ ಆಗ ಗೊತ್ತಾಗುತ್ತದೆ. ಎಲ್ಲೆಲ್ಲಿ ಹಿಂದುತ್ವವಿದೆ. ಅಲ್ಲಿ ಮೋದಿ ಅಲೆ ಗೆದ್ದಿದೆ ಎಂದರು.
ಏರ್ಪೋರ್ಟ್-ಸಚಿವರಿಗೆ ಸಂಸದರು ಸಹಕಾರ ನೀಡಲಿ
ಶಿವಮೊಗ್ಗದ ಏರ್ ಪೋರ್ಟ್ ಬಗ್ಗೆ ಹಣ ಬಿಡುಗಡೆ ಬಗ್ಗೆ ಸಚಿವರು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. 6.50 ಕೋಟಿ ಬಿಡುಗಡೆಯಾಗಿದೆ ಎಂದಿದ್ದಾರೆ. ಸಚಿವರಿಗೆ ಆಸಕ್ತಿಯಿದೆ. ಸಂಸದರು ಸಹಕಾರಕೊಡಲಿ. ರಾಜಕಾರಣ ಬೇಡ ಅನೇಕ ಫ್ಲೈಟ್ ಗಳು ಕ್ಯಾನ್ಸಲ್ ಆಗ್ತಾಯಿದೆ. ಪೇಪರ್ ನಲ್ಲಿದೆ. ಅದು ಕಾರ್ಯಗತವಾಗಲಿ. ಅಭಿವೃದ್ಧಿ ಕೆಲಸ ಕೇವಲ ಪೇಪರ್ ಸ್ಟೇಟ್ ಮೆಂಟ್ ಗೆ ಸೀಮಿತ ಬೇಡ ಎಂದರು.
