SUDDILIVE || SHIVAMOGGA
ಸೆ.21 ರಂದು ನಮೋ ಯುವ ರನ್-Namo Yuva Run on September 21st
ನರೇಂದ್ರ ಮೋದಿಯ 75 ವರ್ಷದ ಹುಟ್ಟುಹಬ್ವದ ಪ್ರಯುಕ್ತ ರಾಜ್ಯದಲ್ಲಿ ಎರಡು ಕಡೆ ಮ್ಯಾರಥಾನ್ ಹಮ್ಮಿಕೊಳ್ಳಲಿದೆ. ನಮೋ ಯುವ ರನ್ ಎಂಬ ಹೆಸರಿನಲ್ಲಿ ಈ ಮ್ಯಾರಥಾನ್ ನಡೆಸಯಲಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಶಾಂತ್ ಕುಕ್ಕೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ. 21 ರಂದು ಬೆಳಿಗ್ಗೆ ಶಿವಮೂರ್ತಿ ಸರ್ಕಲ್ ನಿಂದ 3.5 ಕಿಮಿ ಮ್ಯಾರಥಾನ್ ನಡೆಯಲಿದೆ. ಶಿವಮೂರ್ತಿ ವೃತ್ತ, ಮಹಾವೀರ, ಡಿವಿಎಸ್, ಬಿಹೆಚ್ ರಸ್ತೆ, ಸಾವರ್ಕರ್ ವೃತ್ತ, ಗೋಪಿವೃತ್ತ, ಜೈಲ್ ವೃತ್ತ, ಕುವೆಂಪು ರಸ್ತೆ ಮೂಲಕ ಶಿವಮೂರ್ತಿ ವೃತ್ತಕ್ಕೆ ತಲುಪಲಿದೆ. ಆನ್ ಲೈನ್ ನಲ್ಲಿ 4 ಸಾವಿರ 700 ಜನ ಈಗಾಗಲೇ ನೋಂದಣಿಯಾಗಿದೆ.
ಸ್ಥಳದಲ್ಲಿಯೇ ಭಾಯಾಗಬಹುದಾಗಿದೆ. ಆಸಕ್ತರು 9611312971 ದೃವಕುಮಾರ್ ಅವರನ್ನ, 9980299905ಗೆ ಸಂಜಯ್ ಕುಮಾರ್ ಅವರನ್ನ, ಹಾಗೂ ರಾಹುಲ್ ಬಿದರೆ -8095337876 ಸಂಪರ್ಕಿಸಬಹುದಾಗಿದೆ. ಸ್ಪರ್ಧಿಗಳಿಗೆ ಉಚಿತ ಟಿ-ಶರ್ಟ್ ಕೊಡಲಾಗುವುದು. 6 ವಿಭಾಗದಲ್ಲಿ ಈ ಮ್ಯಾರಥಾನ್ ನಡೆಯಲಿದೆ ಎಂದರು.
ದೇಶದಲ್ಲಿ 100 ನಗರದಲ್ಲಿ ನಮೋ ಯುವ ರನ್ ನಡೆಯಲಿದೆ. ರಾಜ್ಯದಲ್ಲಿ ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಮ್ಯಾರಥಾನ್ 5000 3000 ಎರಡು ಸಾವಿರ ರೂ ಬಹುಮಾನವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೇಂದ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಸಂಸದರು ಶಾಸಕರು ಮತ್ತು ಇತರರು ಭಾಗಿಯಾಗಲಿದ್ದಾರೆ ಎಂದರು.
ಸಿನಿಮಾ ನಟಿ ಕಾರುಣ್ಯ ರಾಮ್, ಸಿನಿಮಾ ನಟ ಗೌರಿಶಂಕರ್ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಅಥ್ಲೆಟಿಕ್, ಸೌಮ್ಯ ಸಾವಂತ್ ಮತ್ತು ಸ್ಟ್ಯಾನಿ ಎಂಬುವರು ಭಾಗಿಯಾಗಲುದ್ದಾರೆ. ನಶೆಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಧೃವ ಕುಮಾರ್, ದರ್ಶನ್, ರಾಹುಲ್ ಬಿದರೆ, ಅನಿಲ್ ಲಕ್ಕಿನ್ ಕೊಪ್ಪ, ಸಂತೋಷ್, ಜಯರಾಮ್ ಮೊದಲಾದವರು ಉಪಸ್ಥಿತರಿದ್ದರು.
Namo Yuva Run on September 21st
