SUDDILIVE || BHADRAVATHI
ಉದ್ಯಾನವನ ಜಾಗದಲ್ಲಿ ಅಕ್ರಮ ಗಣಿಗಾರಿಕೆ, ಕೇಸು ದಾಖಲು-ಮರೆಯಾದ ಕ್ರಮ-Illegal mining in park land, case registered - hidden action
ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 143 ರಲ್ಲಿರುವ 20 ಗುಂಟೆ ಜಮೀನಿನಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲನ್ನ ತೆಗೆದಿರುವ ಬಗ್ಗೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ಜಾಗದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಆದೇಶವಾಗಿದ್ದು ಈ ಜಾಗದ ಮಣ್ಣನೇ ಕಳುವು ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಇಲ್ಲಿ ದೂರು ದಾಖಲಾಗುತ್ತಿದೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ.
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ದೇವನರಸೀಪುರ ಗ್ರಾಮದಲ್ಲಿ ಅಕ್ರಮ ಮಣ್ಣು ಮತ್ತು ಕಲ್ಲುಗಳನ್ನ ತೆಗೆದು ಸಾಗಿಸಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಜೆಸಿಬಿ ಬಳಿ ನಿಂತಿದ್ದ ವ್ಯಕ್ತಿ ಮತ್ತು ಚಾಲಕ ಪರಾರಿಯಾಗಿದ್ದಾರೆ.
ಕೆಎ 19 ಎಂಬಿ 8654 ಕ್ರಮ ಸಂಖ್ಯೆಯ ಜೆಸಿಬಿ ವಾಹನವನ್ನ ವಸಕ್ಕೆ ಪಡೆದು ಹೊಸಮನೆ ಪೊಲೀಸ್ ಠಾಣೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಜೆಸಿಬಿ ಮಾಲೀಕನ ಮೇಲೆ ಹಣ ಮಾಡುವ ಉದ್ದೇಶದಿಂದ ಅಕ್ರಮ ಗಣಿಗಾರಿಕೆ ಮಾಡುತ್ತುರುವ ಆರೋಪದ ಅಡಿ ದೂರು ದಾಖಲಿಸಲಾಗಿದೆ.
ಇದೇ ದೇವರನರಸೀಪುರ ಗ್ರಾಮದಲ್ಲಿ ಸರ್ವೆ ನಂಬರ್ 143 ರ 20 ಗುಂಟೆ ಜಮೀನಿನಲ್ಲಿ ತಾಲೂಕು ಪಂಚಾಯತ್ ಆದೇಶದ ಮೇರೆಗೆ ಉದ್ಯಾನವನ ಮಾಡಲು ಆದೇಶ ನೀಡಲಾಗಿದ್ದು ಇಲ್ಲಿ ತೆಗೆದ 3 ಲಕ್ಷದ 16 ಸಾವಿರ 4000 ರೂ ಮೌಲ್ಯದ 100 ಮೆಟ್ರಿಕ್ ಟನ್ ಮಣ್ಣನ್ನ ತೆಗೆದು 115 ರಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಇಲ್ಲಿ ಸಂಗ್ರಹಿಸಿದ 100 ಮೆಟ್ರಿಕ್ ಟನ್ ಮಣ್ಣನ್ನ ಕಳವು ಮಾಡಲಾಗಿತ್ತು. ಮತ್ತೆ ಇದೇ ಜಾಗದಲ್ಲಿ ಅಕ್ರಮ ಮಣ್ಣು ಸಾಗಿಸಲು ಯತ್ನಿಸಲಾಗಿದೆ. ಕೇವಲ ಕೇಸ್ ದಾಖಲಾಗುತ್ತಿದೆ ಹೊರತು ಯಾವುದೇ ಕ್ರಮ ಜರುಗದೆ ಇರಯವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ.
Illegal mining in park land
