SUDDILIVE || SHIVAMOGGA
ರಸ್ತೆ ಅಪಘಾತ-ರಾಯರ ಮಠದ ಅರ್ಚಕರಿಗೆ ತೀವ್ರಗಾಯ-Road accident- Priest of Rayara Mutt seriously injured
ಕಮಲಾ ನರಸಿಂಗ್ ಹೋಂ ಬಳಿ ಆಟೋ ಮತ್ತು ದ್ವಿಚಕ್ರವಾಹನದ ನಡುವೆ ಡಿಕ್ಕಿ ಉಂಟಾಗಿದ್ದು ದ್ವಿಚಕ್ರವಾಹನ ಸವಾರನ ಸ್ಥಿತಿ ಗಂಭೀರವಾಗಿದೆ.
ಕಮಲಾ ನರಸಿಂಗ್ ಹೋಂ ಪಕ್ಕದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಜಯಸಿಂಹ ಎಂಬುವರಿಗೆ ಆಟೋವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಪಜ್ಞಾಹೀನ ಸ್ಥಿತಿಗೆ ಜಯಸಿಂಹರನ್ನ ಆಟೋದವರೆ ಮೆಗ್ಗಾನ್ ಗೆ ಕರೆದೊಯ್ದಿದ್ದಾರೆ.
ಅಪಘಾತದಿಂದ ಭಯಗೊಂಡ ಆಟೋ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನರಸಿಂಹರನ್ನ ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದರು. ಆಸ್ಪತ್ರೆಯ ಸಿಬ್ಬಂದಿಗಳೆ ಗಾಯಾಳುವನ್ನ ಉಪಚರಿಸಿದ್ದಾರೆ. ಈ ವೇಳೆ ಜಯಸಿಂಹರ ಜೇಬಿನಲ್ಲಿ ರಾಯರ ಮಠದಲ್ಲಿ ಪಂಚಾಮೃತ ಮಾಡಿಸಿದ ಚೀಟಿ ಲಭ್ಯವಾಗಿದೆ. ಈ ಚೀಟಿಯಿಂದ ರಾಯರ ಮಠಕ್ಕೆ ಕರೆ ಮಾಡಲಾಗಿದೆ. ಆದರೆ ಕರೆಯನ್ನ ಸ್ವೀಕರಿಸಲಾಗಿಲ್ಲ.
ನಂತರ ಕಾರ್ಪರೇಟರ್ ಒಬ್ಬರಿಗೆ ಕರೆಮಾಡಿ ಅವರ ಮೂಲಕ ಅವರ ಸ್ನೇಹಿತರನ್ನ ಕರೆಯಿಸಿದ ನಂತರ ಜಯಸಿಂಹರ ಪತ್ತೆಯಾಗಿದೆ. ಅಷ್ಟುಹೊತ್ತಿಗೆ ಆಟೋ ಚಾಲಕ ತಮ್ಮ ಸ್ನೇಹಿತರೊಂದಿಗೆ ಆಸ್ಪತ್ರೆಗೆ ವಾಪಾಸಾಗಿದ್ದಾರೆ. ಜಯಸಿಂಹ ರಾಯರಮಠದಲ್ಲಿ ಅರ್ಚಕರಾಗಿ ಕೆಲಸಮಾಡಿಕೊಂಡಿದ್ದಾರೆ. ಮೊದಲು ಪೋಸ್ಟ್ ಆಫೀಸ್ ನಲ್ಲಿ ಸೇವೆ ಮಾಡಿಕೊಂಡು ನಿವೃತ್ತಿ ಪಡೆದಿದ್ದ ಜಯಸಿಂಹ ಅವರಿಗೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ.
ತಲೆಗೆ ಹೊಡೆತಬಿದ್ದಿದೆ. ಅವರನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಿರುವುದಾಗಿ ಆಪ್ತವಲಯದಿಂದ ತಿಳಿದುಬಂದಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Road accident- Priest of Rayara Mutt seriously injured


