ad

ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮುದಾಯದಿಂದ ವಿನೂತನ ಪ್ರತಿಭಟನೆ-Innovative protest by Banjara community against internal reservation classification

SUDDILIVE || SHIVAMOGGA

ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮುದಾಯದಿಂದ ವಿನೂತನ ಪ್ರತಿಭಟನೆ-Innovative protest by Banjara community against internal reservation classification

Protest, banjara



ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ. 12 ರಿಂದ ಪ್ರತಿದಿನ  ಪ್ರತಿಭಟನೆ ನಡೆಸಲು ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆದಿದೆ.

ಈ ಪ್ರತಿಭಟನೆಯನ್ನ 10 ದಿನಗಳ ವರೆಗೆ ಅನಿರ್ದಿಷ್ಟಾವಧಿಯ ವರೆಗೆ ನಡೆಸಲಾಗುತ್ತಿದೆ. ಒಂದೊಂದು ದಿನ ಒಂದೊಂದು ರೀತಿಯಲ್ಲಿ ಪ್ರತಿಭಟನೆ ನಡೆಯಲಿದೆ.  ಸಾಂಸ್ಕೃತಿಕ, ಅರೆಬೆತ್ತಲೆ, ಬಂಜಾರ ಕಸೂಬುಗಳನ್ನ ಪ್ರದರ್ಶಿಸಿ ಪ್ರತಿದಿನ ಹೋರಾಟ ನಡೆಸಲಾಗುತ್ತದೆ.  ಬೆಳಿಗ್ಗೆಯಿಂದ ಸಾಂಕಾಲದ ವರೆಗೆ ಮಾತ್ರ ಪ್ರತಿಭಟನೆ ನಡೆಯಲಿದೆ. 

ರಾಜ್ಯ ಸರ್ಕಾರ ಬಂಜಾರ ಸಮುದಾಯದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿತ್ತು. ವಿಶ್ವಾಸ ಬಿದ್ದು ಹೋಗಿದೆ, ಮೀಸಲಾತಿ ನಮ್ಮ ಹಕ್ಕು ಭಿಕ್ಷೆಯಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಸ್ಪರ್ಶ, ಅಸ್ಪೃಶ್ಯ ಎಂದು ಅಸಂವಿಧಾನಿಕ ಪದ ಬಳಕೆ ಮಾಡಿರುವುದರ ಹಿಂದೆ ಯಾವ ತಂತ್ರಗಾರಿಕೆಯಿದೆ. ಪರಿಶಿಷ್ಠ ಜಾತಿಗಳಲ್ಲಿ ಬರುವ ಎಲ್ಲಾ ಜಾತಿಗಳು ಶೋಷಿತ ಹಾಗೂ ದಮನಿತ ಸಮುದಾಯಗಳೇ ಆಗಿರುವಾಗ ಸ್ಪೃಶ್ಯ ಅಸ್ಪೃಶ್ಯ ಎಂದು ವಿಂಗಡಿಸುವ ಅಗತ್ಯವೇನಿತ್ತು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಬಂಜಾರ ಸಂಘದ ಹನುಮ ನಾಯ್ಕ್, ಬಂಜಾರ ವಿದ್ಯಾರ್ಥಿ ಸಂಘಟನೆಯ ಗಿರೀಶ್, ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close