SUDDILIVE || SHIVAMOGGA
ಗಮನ ಸೆಳೆಯುತ್ತಿದೆ ಕಾಶಿಪುರ ಮತ್ತು ಟ್ಯಾಂಕ್ ಮೊಹಲ್ಲಾ ಗಣಪತಿ-Kashipur and Tank Mohalla Ganpati are attracting attention
![]() |
ಟ್ಯಾಂಕ್ ಮೊಹಲ್ಲಾ ಗಣಪ ಕಾಶೀಪುರ ಗಣಪತಿ |
ಶಿವಮೊಗ್ಗದ ಕಾಶಿಪುರದ ಗಣಪತಿ ಈ ಬಾರಿ ಸದ್ದು ಮಾಡ್ತಾಯಿದೆ. ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ 11 ದಿನಕ್ಕೆ ರಾಜಬೀದಿ ಉತ್ಸವ ನಡೆದರೆ, ನ್ಯೂ ಮಂಡ್ಲಿ 23 ದಿನಕ್ಕೆ ನಡೆಯಲಿದೆ. ಅದೇ ಕಾಶಿಪುರದ ಗಣಪತಿ ಸಹ 25 ದಿನಕ್ಕೆ ವಿಸರ್ಜಿಸಲಾಗುತ್ತಿದೆ.
ಕಾಶೀಪುರದ ಗಣಪತಿಯ ವಿಶೇಷ ಏನೆಂದರೆ ನಿಂತಿರುವ ಗಣಪತಿ. ನರಸಿಂಹ ಅವತಾರ ತಾಳಿರುವ ಗಣಪತಿ ಕಂಬ ಹೊಡೆದುಕೊಂಡು ನಿಂತ ನರಸಿಂಹ ಅವತಾರದ ಗಣಪತಿ ಭಾರಿ ಸದ್ದು ಮಾಡುತ್ತಿದೆ. ಎಪಿಎಂಸಿ, ಕಾಶಿಪುರ, ನ್ಯೂಮಂಡ್ಲಿ, ಕೆಆರ್ ಪುರಂ, ಹಾಗೂ ಹಿಂದೂ ಮಹಾಸಭಾ ಗಣಪತಿ ಈ ಬಾರಿಯ ಹೆಚ್ಚು ಚರ್ಚೆಯಲ್ಲಿದೆ.
ಕಾಶಿಪುರದ ಗಣಪತಿ 6 ಅಡಿಯಿದ್ದರೆ, ಅದರ ಮೇಲೆ ಎರಡು ಅಡಿ ಎತ್ತರದ ಹಾವಿದೆ. ಒಟ್ಟು ಸರಿಸುಮಾರು 8 ಅಡಿ ಎತ್ತರದ ಗಣಪತಿಯಿದೆ. ಉತ್ತರ ಭಾರತದಲ್ಲಿ ಹೆಚ್ಚು ಈ ರೀತಿಯ ನಿಂತಿರುವ ಗಣಪತಿಯಿರುತ್ತದೆ. ಆದರೆ ದಕ್ಷಿಣದಲ್ಲಿ ಬಹುತೇಕ ಸಿಂಹಾಸನಾರೂಢ ಗಣಪತಿಯೇ ಹೆಚ್ಚಾಗಿ ಕೂರಿಸಲಾಗುತ್ತದೆ. ಹಾಗಾಗಿ ನಿಂತಿರುವ ಗಣಪತಿ ವಿಶೇಷವೂ ಹೌದು.
ಕಾಶೀಪುರದಲ್ಲಿ ವಿನಾಯಕ ಸೇವಾಸಮಿತಿಯ 18 ನೇ ವರ್ಷದ ಗಣಪತಿಯಿದಾಗಿದೆ. ಹಬ್ಬದಿಂದ 25 ದಿನಗಳವರೆಗೆ ಈ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ. 25 ನೇ ದಿನಕ್ಕೆ ವಿಸರ್ಜಿಸಲಾಗಿದೆ. ಅದರ ಆಕರ್ಷಣೆಯಂತೆ ಕಾಶೀಪುರದ ದ್ವಾರ ಬಾಗಿಲಿನಲ್ಲೂ ಪರಶುರಾಮಯನ್ನ ನಿಲ್ಲಿಸಿರುವುದು ಗಮನಸೆಳೆಯುತ್ತಿದೆ.
ಟ್ಯಾಂಕ್ ಮೊಹಲ್ಲಾದ ಗಣಪತಿ
ಟ್ಯಾಂಕ್ ಮೊಹಲ್ಲ ಗಣಪತಿಯೂ ಸಹ ಇಂದು ವಿಸರ್ಜನೆಯಾಗುತ್ತಿದೆ. ಇದೂ ಸಹ ನಿಂತಿರುವ ಗಣಪತಿಯಾಗಿದೆ. ಕೇಸರಿ ಪಡೆಯ ಸಮಿತಿಯ ಗಣಪತಿಯನ್ನ ಇಂದು ವಿಸರ್ಜಿಸಲಾಗುತ್ತಿದೆ. ಗರುಡನ ಮೇಲೆ ನಿಂತಿರುವ ಗಣಪತಿ ಇಂದು ಸಂಜೆ 6 ಗಂಟೆಯಿಂದ ರಾಜಬೀದಿ ಉತ್ಸವ ಮಾಡಲಾಗುತ್ತಿದೆ.
Kashipur and Tank Mohalla Ganpati are attracting attention