ad

ಡಾ.ಯುವರಾಜ್ ನಕಲಿ ಅಲ್ಲ ಅಸಲಿ ಪತ್ರಕರ್ತರು-Dr.Yuvaraj not a Fake journalist, He is a real Hero

SORABA || SORABA

ಡಾ.ಯುವರಾಜ್ ನಕಲಿ ಅಲ್ಲ ಅಸಲಿ ಪತ್ರಕರ್ತರು-Dr.Yuvaraj not a Fake journalist, He is a real Hero

Dr.Yuvaraj, Journalist


ಮೊನ್ನೆ ಸೊರಬದ ಪಡಿತರ ಚೀಟಿಯ ಅಕ್ಕಿ ಕಳ್ಳ ದಂದೆಯ ವಿಚಾರದಲ್ಲಿ ಒಂಬತ್ತು ಮಂದಿ ನಕಲಿ ಪತ್ರಕರ್ತರನ್ನು ಅರೆಸ್ಟ್ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿ ಶಿವಮೊಗ್ಗದ ಸುದ್ದಿ ಲೈವ ವೆಬ್ ಪೇಜಲ್ಲಿ ಪ್ರಕಟವಾಗಿತ್ತು .

ವಿಚಾರದ ತನಿಖೆ ಆಧಾರದ ಮೇಲೆ ಹಾಗೂ ದಾಖಲಾತಿಗಳ ಆಧಾರದ ಮೇಲೆ  ಪ್ರತಿಷ್ಠಿತ ಡಾ||ಯುವರಾಜ ಕೆ .ಎಸ್ (ಜರ್ನಲಿಸ್ಟ) ಮೇಲೆ ಮಾಡಿದ ಆರೋಪದ ಸುದ್ದಿ ಸುಳ್ಳು ಎಂದು ಸಾಬೀತಾಗಿದೆ. ಪತ್ರಕರ್ತರಾಗಿರುವ ಡಾ// ಯುವರಾಜ್ ಕೆ.ಎಸ್ ರವರು ಕರ್ನಾಟಕ ಪ್ರೆಸ್ ಕ್ಲಬ್ ನ  ರಾಜ್ಯ ಉಪಾಧ್ಯಕ್ಷರಾಗಿ, ಸಕ್ರಿಯವಾಗಿ  ಕಾರ್ಯ ನಿರ್ವಹಿಸುತ್ತಿದ್ದು, ಹಾಗೂ ಪಬ್ಲಿಕ್ 24  ನ್ಯೂಸ್ ಕನ್ನಡ  ಖಾಸಗಿ ವಾಹಿನಿಯ ಸಂಸ್ಥಾಪಕ ಮುಖ್ಯಸ್ಥರಾಗಿದ್ದು, ಏಳು ವರ್ಷಗಳಿಂದ ಖಾಸಗಿ ವಾಹಿನಿಯನ್ನು ನಡೆಸುತ್ತಾ ಬಂದಿರುತ್ತಾರೆ, 

ಈ ಹಿಂದೆ ಸುಮಾರು 13 ವರ್ಷಗಳಿಂದ ಪತ್ರಿಕಾ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ, ಹೊಸದಿಗಂತ, ಕೌರವ, ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಸಂಪಾದಕರು, ಎಡಿಟರ್, ರಿಪೋರ್ಟರ್, ಆಗಿ ಕಾರ್ಯನಿರ್ವಹಿಸುತ್ತಾ ಒಂದು ವಾಹಿನಿಯ ಮುಖ್ಯಸ್ಥರಾಗಿ ತಮ್ಮ ತೀಕ್ಷವಾದ ಬರವಣಿಗೆಗಳಿಂದ  ಸಮಾಜಕ್ಕೆ ಕೊಟ್ಟ ಕೊಡುಗೆ ಅದ್ಭುತವಾಗಿದೆ. ಹಾಗಿದ್ದರೂ ಕೂಡ, ಸೊರಬದ  ಬಂಗರೇಶ  ಪಡಿತರ  ಚೀಟಿಯ ಅಕ್ಕಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಇಲಾಖೆಗೆ ನಷ್ಟ ಉಂಟುಮಾಡುವ ಪ್ರಯತ್ನದಲ್ಲಿದ್ದರು. 

ಅಲ್ಲಿರುವ ಕೆಲವು ಸ್ಥಳೀಯ ಪತ್ರಕರ್ತರಿಂದ ಹಾಗೂ ರಾಜಕೀಯ  ಲೀಡರ್ ಗಳಿಂದ ಹಾಗೂ ಪೊಲೀಸ್  ಸಿಬ್ಬಂದಿಗಳಿಗೆ ಸ್ಥಳೀಯ ಅಕ್ಕಿ ಸರಬರಾಜು ಮಾಡುವ ವ್ಯಕ್ತಿ ಕೊಟ್ಟ ಎಂಜಲು ಕಾಸಿಗೆ ಬಲಿಯಾಗಿ ನಕಲಿ ಪತ್ರಕರ್ತ ಎಂಬ ಬಿರುದು ಕೊಟ್ಟು ಸುಳ್ಳು ಕೇಸ್ ದಾಖಲಿಸಿ  ಅವಮಾನಿಸಿರುತ್ತಾರೆ, ಇವರ ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ ಇವರು ನಕಲಿಯಲ್ಲ ಅಸಲಿ ಪತ್ರಕರ್ತರು ಎಂಬುದು ಸಾಬೀತಾಗಿರುವ  ಈ ಹಿನ್ನೆಲೆಯಲ್ಲಿ ಡಾ// ಯುವರಾಜ್ ಕೆಎಸ್ (ಜರ್ನಲಿಸ್ಟ್ )ಅವರಿಗೆ ಬಹಿರಂಗವಾಗಿ  ಕ್ಷಮೆ ಯಾಚಿಸಿದ ಘಟನೆ ನಡೆದಿದೆ. 

ಈ ರೀತಿ ಆಗಿರುವುದಕ್ಕೆ ಡಾ. ಯುವರಾಜ ಕೆಎಸ್ ರವರು  ಪತ್ರಿಕಾಗೋಷ್ಠಿಯಲ್ಲಿ  ನಾನು ತುಂಬಾ ನೊಂದಿದ್ದೇನೆ ಪತ್ರಕರ್ತರಿಗೆ ಆದಂತಹ ಅವಮಾನ ಮತ್ತೆ ಬೇರೆ ಯಾರಿಗೂ ಆಗಬಾರದು , ಒಂದು ಜಿಲ್ಲೆಯನ್ನು ಮತ್ತೊಂದು ಜಿಲ್ಲೆಗೆ ಹೋಗಿ ಪತ್ರಿಕಾವರದಿ ಮಾಡುವುದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ ಪತ್ರಿಕಾ ರಂಗದವರಿಗೆ ಹಾಗೂ ಅನ್ಯಾಯದ ವಿರುದ್ಧ ಬರೆಯುವ ಪತ್ರಕರ್ತ ನಿಜವಾದ ಪತ್ರಕರ್ತ ಅನಿಸಿಕೊಳ್ಳುತ್ತಾನೆ, ಇಲ್ಲಿ ನಡೆದಿದ್ದೇ ಬೇರೆ.

 ನನಗೆ ಸೊರಬದಲ್ಲಿ ಸನ್ಮಾನಕ್ಕಿಂತ ಅವಮಾನವೇ ಜಾಸ್ತಿ ಆಯ್ತು ಆದ್ದರಿಂದ ನಾನು ಮಾನಸಿಕವಾಗಿ ಕುಗ್ಗಿ ನೊಂದಿದ್ದೇನೆ. ಮುಂದಿನ ದಿನಮಾನಗಳಲ್ಲಿ ಕರ್ನಾಟಕ ಸರ್ಕಾರ ವೆಬ್ ಪೇಜ್, ಯೌಟ್ಯೂಬ್ ,ಕೇಬಲ್ ಟಿವಿ, ಡಿಜಿಟಲ್ ಟಿವಿ, ವರದಿಗಾರರು ಹೀಗೆ ಹತ್ತು ಹಲವಾರು ಪತ್ರಕರ್ತರು ಸಮಾಜಕ್ಕೆ ಒಂದು ಒಳ್ಳೆಯ ಉತ್ತಮ ಕೊಡುಗೆ ಕೊಡುತ್ತಾ ಕಾರ್ಯನಿರ್ವಹಿಸುತ್ತಿರುತ್ತಾರೆ ಅವರನ್ನು ಅವಮಾನಿಸುವ ಬದಲು ಗೌರವಿಸುವ ಕೆಲಸ ಆಗಬೇಕು ಎಲ್ಲರೂ ಸಮಾನರು ಎಂಬ ಸದ್ಭಾವನೆ ಎಲ್ಲರಲ್ಲೂ   ಮೂಡಬೇಕು . ಪತ್ರಕರ್ತರಿಗೆ ಅವಮಾನವಾದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.

Dr.Yuvaraj not a Fake journalist, He is a real Hero

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close