SUDDILIVE || SHIVAMOGGA
ಘಾಟಿಯಲ್ಲಿ ಧರೆ ಕುಸಿತ-ವಾಹನ ಸಂಚಾರ ಬಂದ್-Landslide at Ghati- Vehicular traffic stopped
ಆಗುಂಬೆ ಘಾಟಿಯಲ್ಲಿ ಗುಡ್ಡಕುಸಿತದಿಂದಾಗಿ ಸಂಚಾರ ಅಸ್ಥವ್ಯಸ್ಥಗೊಂಡಿದೆ. ರಸ್ತೆಗೆ ಅಡ್ಡಲಾಗಿ ಮರಗಳು ಮತ್ತು ಮಣ್ಣುಗಳು ಉರುಳಿದ್ದು, ಧರೆ ಕುಸಿತ ಉಂಟಾಗಿದೆ. ಇದರಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಆಗುಂಬೆ ಘಾಟಿಯ 6ನೇ ತಿರುವಿನಲ್ಲಿ ಸಂಜೆ ವೇಳೆಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿದೆ. ಮರ ಮತ್ತು ಮಣ್ಣು ತೆರವಿಗೆ ಸಮಯ ಹಿಡಿಯಲಿದೆ. ಆದ್ದರಿಂದ ಇವತ್ತು ರಾತ್ರಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಗೂಡ್ಸ್ ವಾಹನದ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಗಾಯಾಳುವನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.
Landslide at Ghati- Vehicular traffic stopped
