ರಾಜ್ಯ ಮಟ್ಟದ ವುಷು ಸ್ಪರ್ಧೆಗೆ ನಗರದ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆ ಆಯ್ಕೆ-Swami Vivekananda Inter School has been selected for the state-level Wushu competition

 SUDDILIVE || SHIVAMOGGA

ರಾಜ್ಯ ಮಟ್ಟದ ವುಷು ಸ್ಪರ್ಧೆಗೆ ನಗರದ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆ ಆಯ್ಕೆ-Swami Vivekananda Inter School has been selected for the state-level Wushu competition

Swami, vivekananda


ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ ಆರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ವುಷು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 

ಸೆಪ್ಟೆಂಬರ್ 10 ರಂದು ಚಿತ್ರದುರ್ಗದ ಒನಕೆ  ಓಬವ್ವ  ಒಳಾಂಗಣ  ಕ್ರೀಡಾಂಗಣದಲ್ಲಿ ಅಲ್ಲಿನ ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ  ವಿಭಾಗ ಮಟ್ಟದ ದಸರಾ  ವುಷು ಆಯ್ಕೆಯಲ್ಲಿ ಭಾಗವಹಿಸಿದ್ದ ಶಿವಮೊಗ್ಗ ಜಿಲ್ಲೆಯ  ರವೀಂದ್ರ ನಗರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ  ಕ್ರೀಡಾಪಟುಗಳು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ರಾಜ್ಯಮಟ್ಟದ ದಸರಾ ಪಂದ್ಯಾವಳಿ ಗೆ ಆಯ್ಕೆಯಾಗಿರುತ್ತಾರೆ. 

ಕ್ರೀಡಾಪಟುಗಳಾದ -  ಚಾರ್ವಿ ಟಿ - 52 ಕೆಜಿ ,ದಾಕ್ಷಾಯಿಣಿ -42 ಕೆಜಿ,ಭುವನ -39 ಕೆಜಿ,  ತೇಜಸ್ -45 ಕೆಜಿ, ಚಂದನ -46 ಕೆಜಿ ,ಅಮೃತ -48 ಕೆಜಿ  ವಿಭಾಗಗಳಲ್ಲಿ ಆಯ್ಕೆಯಾಗಿ ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದು ,ಆಯ್ಕೆಯಾದ ಕ್ರೀಡಾಪಟುಗಳಿಗೆ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಅನೂಪ್ ಎನ್ ಪಟೇಲ್, ಉಪಾಧ್ಯಕ್ಷರಾದ ಶ್ರೀಮತಿ ರಾಗಿನಿ ಸಿಂಗ್, ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪಶ್ರೀ , ಶ್ರೀಮತಿ ಪೂರ್ಣಿಮಾ ಹಾಗೂ ಶಿಕ್ಷಕ ವೃಂದ ಆಯ್ಕೆಯಾದಂತಹ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. 

ಜೊತೆಗೆ ಶಿವಮೊಗ್ಗ ಜಿಲ್ಲಾ ವುಷು ಸಂಸ್ಥೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಮ್ಮ ಶಾಲಾ ವುಷು ತರಬೇತುದಾರರಾದಂತಹ  ಮುಕೆಬ್ ಅಹಮದ್ ದರ್ವೇಶ್  ಅವರು ವಿಜೇತರಿಗೆ ಶುಭಕೋರಿದ್ದಾರೆ. ವಿಜೇತ ಕ್ರೀಡಾಪಟುಗಳು  ಶಿವಮೊಗ್ಗ ನಗರದ  

ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದು ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ಆಯ್ಕೆಯಲ್ಲಿ ಪಾಲ್ಗೊಂಡು, ಮುಂದಿನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವುದು  ಶಾಲೆಗೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. 

Swami Vivekananda Inter School has been selected for the state-level Wushu competition

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close