SUDDILIVE || SHIVAMOGGA
ಹಿಂದೂ ಬ್ರಾಹ್ಮಣ ಎಂದು, ಉಪಜಾತಿಯ ಕಾಲಂನ್ನ ಖಾಲಿ, ಸಮೀಕ್ಷೆಯ ಪ್ರತಿಯನ್ನ ಮೊಬೈಲ್ ನಲ್ಲಿ ಸೆರೆಹಿಡಿಯಿರಿ-ಬ್ರಾಹ್ಮಣ ಆರ್ಗನೈಜೇಷನ್ ಕರೆ-Leave the sub-caste column blank if you are a Hindu Brahmin, capture a copy of the survey on your mobile - Brahmin organization calls
ಕರ್ನಾಟಕ ಸರ್ಕಾರ ಸೆ.22 ರಿಂದ ಪ್ರಾರಂಭಿಸಿರುವ ಹಿಂದುಳಿದ ಆಯೋಗಗಳ ವತಿಯಿಂದ ನಡೆಸಲಿರುವ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ವಿಪ್ರ ಬಾಂಧವರು ಸರಿಯಾದ ಮಾಹಿತಿ ನೀಡಬೇಕೆಂದು ಬ್ರಾಡ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಕೋರಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಗನೈಜೇಷನ್ ಜಿಲ್ಲಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ರಾವ್ ಮಾಧ್ಯಮಗಳ ಮೂಲಕ 93 ಸಾವಿರ ಜನರನ್ನ ಸರ್ವೆ ಮಾಡಲಾಗಿದೆ. ಧರ್ಮದಲ್ಲಿ ಹಿಂದೂ ಎಂದು ಮತ್ತು ಜಾತಿಯ ಕಾಲಂನಲ್ಲಿ ಹಿಂದೂ ಬ್ರಾಹ್ಮಣ ಎಂದು ನಮೂದಿಸಬೇಕು. ಉಪಜಾತಿ ಯಾವುದೂ ಇಲ್ಲ ಎಂದು ಹೇಳಬೇಕು ಎಂದರು.
ಬ್ರಾಹ್ಮಣ ಸಮುದಾಯವನ್ನ ತುಳಿತಕ್ಕೆ ಒಳಗಾಗಿದೆ. ಬ್ರಾಹ್ಮಣ ಸಮೀಕ್ಷೆಯನ್ನ ಬಿಕೆ ಎಂಎಸ್ ನಡೆಸಿದೆ 65 ಲಕ್ಷ ಬ್ರಾಹ್ಮಣ ಸಮುದಾಯವಿದೆ ಕಾಂತರಾಜು ಮತ್ತು ನಾಗಮೋಹನ್ ದಾಸ್ ಸರ್ವೆಯಲ್ಲಿ 14 ಲಕ್ಷವೂ ದಾಟಿಲ್ಲ. 35 ಉಪಜಾತಿಯಿದೆ. ಸ್ಮಾರ್ಥ, ಮಾಧ್ವ ಶ್ರೀವೈಶ್ಣವದಲ್ಲಿ 35 ಉಪಜಾತಿ ಇದೆ. ಉಪಜಾತಿ ಬರೆದರೆ ಇತರೆ ಕಾಲಂನಲ್ಲಿ ಹಾಕಲಾಗುತ್ತದೆ ಹಾಗಾಗಿ ಉಪಜಾತಿ ಬರೆಯಬಾರದು ಎಂದರು.
ಸರ್ಕಾರ ಸೂಚಿಸಿದ ಅರವತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸಿದ್ಧಪಡಿಸಿ ನಿಖರವಾಗಿ ಧರ್ಮದ ಕಾಲಮಿನಲ್ಲಿ ನಂಬರ್ 01 ಹಿಂದೂ ಧರ್ಮ ಹಾಗೂ ಜಾತಿ ಕಾಲಮಿನಲ್ಲಿ No.218 ಹಿಂದೂ ಬ್ರಾಹ್ಮಣ ಎಂದು ನಮೂದಿಸಬೇಕಾಗಿ ಕೋರಿಕೆ ಉಪಜಾತಿಯನ್ನು ಬರೆಯುವ ಅವಶ್ಯಕತೆ ಇಲ್ಲ ಬ್ರಾಹ್ಮಣ ಎಂದು ನಮೂದಿಸಿದರೆ ಮಾತ್ರ ಸಾಕು. ಹಾಗೂ ಮಾತೃಭಾಷೆ ಕಾಲಮಿನಲ್ಲಿ ಕನ್ನಡ ಎಂದು ನಮೂದಿಸಬೇಕು ಇತರ ಭಾಷೆ ಕಾಲಂ ಸಂಸ್ಕೃತವನ್ನು ಬರೆಯಬೇಕು. ಸಂಸ್ಕೃತ ಭಾಷೆ ಸನಾತನ ಧರ್ಮದ ಸಂಕೇತ ಹಾಗೂ ವೇದ ಪುರಾಣ ಉಪನಿಷತ್ ಎಲ್ಲವೂ ಸಂಸ್ಕೃತದಲ್ಲಿ ಇರುವುದು ಎಂದು ತಿಳಿಸಿದರು.
60 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಕೊಡಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ವೋಟರ್ ಐಡಿ ರೇಷನ್ ಕಾರ್ಡ್ ಸಿದ್ಧಪಡಿಸಿಕೊಂಡಿರಬೇಕು. ಸಮೀಕ್ಷೆಗೆ ಬಂದ ಅಧಿಕಾರಿಗಳ ಜೊತೆ ಸಂಯಮವಾಗಿ ವರ್ತಿಸಿ ಅವರು ತುಂಬಿದ ಫಾರಂ ಅನ್ನು ಪರಿಶೀಲಿಸಿ ಸಹಿ ಮಾಡಬೇಕಾಗಿ ವಿನಂತಿ ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ವಿಪ್ರ ಸಮಾಜದ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯವೂ ಹಾಕುತ್ತಿರುತ್ತೇವೆ ಅದನ್ನು ಗಮನಿಸಬೇಕಾಗಿ ಅವರು ಕೋರಿದರು.
ಹಿಂದೂ ಎಂದು ಬರೆಯಿಸಿದರು ಬರೆಯುತ್ತಿಲ್ಲ ಎಂಬ ದೂರಿದೆ. ಸಮೀಕ್ಷೆ ನಂತರ ನಕಲನ್ನ ನಿಮ್ಮ ಮೊಬೈಲನ್ನ ತೆಗೆದುಕೊಳ್ಳಬೇಕು. ಈ ಮೂರನ್ನ ತಾಳೆ ಮಾಡಿ ಪರಿಶೀಲಿಸುವಂತೆ ಕೋರಿದರು. 93 ಸಾವಿರ ಸಮೀಕ್ಷೆಯಲ್ಲಿ ಲೋಪದೋಷದ ಆರೋಪಬಂದಿದೆ. ಸಮೀಕ್ಷೆದಾರರು ಸರಿಯಾಗಿ ಬರೆದಿದ್ದಾರೆ ಎಂದು ಮನವಿ ಮಾಡಿದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಮಾಲ್ತೇಶ್ ಮಾಡನಾಡಿ, ಜನಗಣತಿಯಲ್ಲ ಸಮೀಕ್ಷೆಯಷ್ಟೆ, ಇದು ಪ್ರಿಪ್ರೇಟರಿ ಇದ್ದಂತೆ ಫೈನಲ್ ಅಲ್ಲ. ಗೊಂದಲಕ್ಕೆ ರಾಜ್ಯ ಸರ್ಕಾರ ನಿಯಂತ್ರಿಸಬೇಕು. ಜವಬ್ದಾರೊಯಿಂದ ಪ್ರತಿಯೊಬ್ಬರೂ ಮಾಹಿತಿ ನೀಡಬೇಕು. 60 ಪ್ರಶ್ನೆಗೆಲ್ಲಾ ಉತ್ತರಿಸಬೇಕೆಂದು ಇಲ್ಲ. ಪ್ರಮುಖ ಅಂಶಗಳಿಗೆ ಉತ್ತರಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೇಶವಮೂರ್ತಿ, ಬಿಜೆಪಿಯ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
Leave the sub-caste column blank if you are a Hindu Brahmin
