SUDDILIVE || BHADRAVATHI
ಶವವಾಗಿ ಯುವತಿ ಪತ್ತೆ, ಕುತೂಹಲ ಮೂಡಿಸಿದ ಪ್ರಕರಣ-Young woman found dead, intriguing case
ಲವ್ ವಿಚಾರಕ್ಕೆ ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು ಎರಡು ದಿನಗಳ ಹಿಂದೆ ಯುವತಿ ನೀರುಪಾಲಾಗಿದ್ದರೆ ಯುವಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಆದರೆ ಇಂದು ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.
ಕಳೆದ ಮೂರು ವರ್ಷದಿಂದ ಭದ್ರಾವತಿಯ ಅಂತರಗಂಗೆ ಭೋವಿ ಕಾಲೋನಿಯ ನಿವಾಸಿಗಳಾದ ಸ್ವಾತಿ (19) ಮತ್ತು ಯುವಕ ಸೂರ್ಯ (20) ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಗೆ ಯುವತಿ ಮನೆಯಲ್ಲಿ ಒಪ್ಪಿಗೆ ಇದ್ದರೂ ಯುವಕ ಆಕೆಯೊಂದಿಗೆ ಚಾನೆಲ್ ಹಾರಿದ್ದೇಕೆ ಎಂಬುದೇ ಕುತೂಹಲ ಮೂಡಿಸಿದೆ.
ಎರಡು ದಿನಗಳ ಹಿಂದೆ ಯುವತಿ ನೀರುಪಾಲಾಗಿದ್ದಳು ಇಂದು ಆಕೆಯ ಶವ ಮೇಲೆ ಬಂದಿದೆ. ಗ್ರಾಮಸ್ಥರೇ ಯುವತಿಯ ಶವವನ್ನ ಎತ್ತಿದ್ದಾರೆ. ಯುವಕ ಮೇಲೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಯುವತಿ ಸ್ವಾತಿಗಾಗಿ ತೀವ್ರ ಹುಡುಕಾಟನಡೆಸಿದರೂ ನಿನ್ನೆ ಸಂಜೆಯಿಂದಲೇ ಅಗ್ನಿಶಾಮಕದಳದ ಬೋಟ್ ಹಾಳಾಗಿ ಕಾರ್ಯಾಚರಣೆ ನಡೆಸಿರಲಿಲ್ಲ.
ಯುವಕ ಸೂರ್ಯ ಮತ್ತು ಸ್ವಾತಿ ಮನೆ ನೆರೆಹೊರೆಯರಾಗಿದ್ದಾರೆ. ಸ್ವಾತಿ ಪ್ರಥಮ ಪದವಿಯಲ್ಲಿ ಅಭ್ಯಾಸಿಸುತ್ತಿದ್ದಳು ಯುವಕ ಸೂರ್ಯನ ಮನೆಯವರು ಬಲವಂತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ವರ ಪ್ರೀತಿಗೆ ಯುವತಿ ಮನೆಯವರ ಒಪ್ಪಿಗೆ ಇದ್ದರೂ ಚಾನೆಲ್ ಗೆ ಯುವಕ ಯುವತಿಯೊಂದಿಗೆ ಹಾರಿದ್ದೇಕೆ ಎಂಬುದು ಕುತೂಹಲ ಮೂಡಿಸಿದೆ. ಘಟನೆ ಭದ್ರಾವತಿ ಗ್ರಾಮಾಂತರ ಪೊಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಈಗ ಪ್ರಕರಣ ಏನಾಗಲಿದೆ ಕಾದು ನೋಡಬೇಕಿದೆ. ಪ್ರಕರಣ ಯುಡಿಆರ್ ಆಗುತ್ತಾ ಅಥವಾ ಕೊಲೆ ಎಂದಾಗುತ್ತಾ ಕಾದು ನೋಡಬೇಕಿದೆ.
Young woman found dead, intriguing case

