ad

ಎತ್ತಿನಗಾಡಿ ಓಡಿಸಿದ ಶಾಸಕ ಚನ್ನಬಸಪ್ಪ ಮತ್ತು ಪ್ರಗತಿಪರ ರೈತರು-MLA Channabasappa and progressive farmers who drove a bullock cart

SUDDILIVE || SHIVAMOGGA

ಎತ್ತಿನಗಾಡಿ ಓಡಿಸಿದ ಶಾಸಕ ಚನ್ನಬಸಪ್ಪ ಮತ್ತು ಪ್ರಗತಿಪರ ರೈತರು-MLA Channabasappa and progressive farmers who drove a bullock cart

MLA, Channabasappa

ಅಲಂಕೃತ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಜಾಥಾ ಕಾರ್ಯಕ್ರಮ ಶಿವಮೊಗ್ಗದಲ್ಲಿ ಈ ದಿನ ನಡೆಯಿತು. ರೈತ ದಸರಾ ಅಂಗವಾಗಿ ಶಿವಮೊಗ್ಗದ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದ ವರೆಗೆ ಮೆರವಣಿಗೆ ನಡೆಸಲಾಯಿತು. 

ಬಿಹೆಚ್ ರಸ್ತೆಯ ಮೂಲಕ ರೈತರ ಜಾಥಾ ಸಾಗಿತು. ಪ್ರಗತಿಪರ ರೈತರು ಹಾಗೂ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಕಮಲಮ್ಮ ಮತ್ತು ಶಾಸಕ ಚನ್ನಬಸಪ್ಪ ಜಾಥಾಗೆ ಚಾಲನೆಯನ್ನು ನೀಡಿದರು. ಶಾಸಕ ಚನ್ನಬಸಪ್ಪ ಎತ್ತಿನಗಾಡಿ ಓಡಿಸುವ ಮೂಲಕ ಗಮನಸೆಳೆದರು. 



ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸೇರಿದಂತೆ ಹಲವು ರೈತ ಮುಖಂಡರು ಸಹ ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಬಳಿಕ ಕುವೆಂಪು ರಂಗಮಂದಿರದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಗತಿ ಪರ ರೈತರು ಹಾಗೂ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಈರಪ್ಪ ನಾಯ್ಕ ಅವರು ಉದ್ಘಾಟನೆ ಮಾಡಿದರು.

MLA Channabasappa and progressive farmers who drove a bullock cart

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close