ad

ಮಾದರ ಚೆನ್ನಯ್ಯ ಶ್ರೀಗಳಿಂದ ಸಚಿವ ಮಧು ಬಂಗಾರಪ್ಪನವರಿಗೆ ವೇದಿಕೆಯಲ್ಲೇ ಮನವಿ-Madara Chennaiyya Sri's appeal to Minister Madhu Bangarappa

 SUDDILIVE || SHIVAMOGGA

ಮಾದರ ಚೆನ್ನಯ್ಯ ಶ್ರೀಗಳಿಂದ ಸಚಿವ ಮಧು ಬಂಗಾರಪ್ಪನವರಿಗೆ ವೇದಿಕೆಯಲ್ಲೇ ಮನವಿ  Madara Chennaiyya Sri's appeal to Minister Madhubangarappa    Madara, Chennaiyya


ಜಾತಿ ಸಮೀಕ್ಷೆಯ ಅರ್ಜಿಯಲ್ಲಿ ಮಾದರ ಚೆನ್ನಯ್ಯ ಅಂತ ಬರೆಸಬೇಕಿತ್ತು ಎಂದು ವೇದಿಕೆ ಮೇಲಿದ್ದ ಸಚಿವ ಮಧು ಬಂಗಾರಪ್ಪ ಅವರನ್ನ ಉದ್ದೇಶಿಸಿ ಚಿತ್ರದುರ್ಗದ ಮಾದರ ಬಸವಮೂರ್ತಿ ಚೆನ್ನಯ್ಯ ಮನವಿ ಮಾಡಿಕೊಂಡರು. 

ಅವರು ಕುವೆಂಪು ರಂಗ ಮಂದಿರದಲ್ಲಿ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಬಸವ ಸಂಸ್ಕೃತಿ ಅಭಿಯಾನದಲ್ಲಿ ಮಾತನಾಡಿದರು. ಅರ್ಜಿಯಲ್ಲಿ  ಮಾದಿಗ ಚೆನ್ನಯ್ಯ ಎಂದಿದ್ದರೂ ಪರವಾಗಿರಲಿಲ್ಲ. ಆದರೆ ಮಾದಿಗ ಕ್ರಿಶ್ಚಿಯನ್ ಎಂದು ಬರೆಯಿಸಿದ್ದೀರಿ ಅದೇ ಬೇಸರ ಎಂದು ಹೇಳಿದರು. 

ಜಾಗತಿಕ ಮಟ್ಟದಲ್ಲಿ ಲಿಂಗಾಯಿತ ಕಟ್ಟುಪಾಡುವಿನಿಂದ ಬೆಳೆಯಲಿಲ್ಲ. ಈ ಅಭಿಯಾನದ ಮೂಲಕ ಬಸವಣ್ಣನವರ ಕನಸ್ಸನ್ನ ನನಸಾಗಿಸೋಣ. ನಾವು ಕೈಜೋಡಿಸುತ್ತೇವೆ. ಬಸವಣ್ಣನವರ ಸದುದ್ದೇಶ ಉದ್ದೇಶಕ್ಕೆ ತಡೆಗೋಡೆ ಹೆಚ್ಚಿದೆ. ಬಸವತತ್ವವನ್ನ ಚಿಂತಿಸೋಣ, ಬಸವಣ್ಣ ನಿಮಗೋಸ್ಕರ ಬಂದವನು ಎಂದು ಶೋಷಿತ ವರ್ಗಕ್ಕೆ ಅನಿಸುವಂತಹ ಕೆಲಸ ಆಗಬೇಕಿದೆ. ಅಲ್ಲಿಯವರೆಗೆ ಅವರ ಉದ್ದೇಶ ಈಡೇರಲ್ಲ. ಬಸವಣ್ಣನನ್ನ ಹಟ್ಟಿಗೆ ಕರೆದೊಯ್ಯದಿದ್ದರೆ ಭಾಷಣಕ್ಕೆ ಅವರ ಆಲೋಚನೆ ಸೀಮಿತವಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.


ಸಚಿವ ಮಧು ಬಂಗಾರಪ್ಪನವರು ಮಾತನಾಡಿ ಸ್ವಾಮೀಜಿಗಳು ಹೇಳಿದಂತೆ ಕ್ರಿಶ್ಚಿಯನ್ ಈಡಿಗ ಎಂದು ನಮ್ಮ‌ಜಾತಿಯಲ್ಲೂ ಅರ್ಜಿಯಲ್ಲಿ ನಮೂದಿಸಲಾಗಿದೆ. ಇದನ್ನ ಸಿಎಂ ಅವರ ಗಮನಕ್ಕೆ ತರಲಿದ್ದೇನೆ ಎಂದು ಹೇಳಿದರು. 

ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಉಸ್ತುವಾರಿ ಸಚಿವರಾದ ಮೇಲೆ ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರನ್ನ ಇಡಲಾಗಿದೆ. ಸಿಎಂ ಕ್ಯಾಬಿನೆಟ್ ನಲ್ಲಿ ಅನುಮೋದನೆ ನೀಡಿದರು ಎಂದರು. 

ಗದಗಿನ ತೋಂಟದಾರ್ಯ ಮಠದ ನಿಜಗುಣಾನಂದ ಶ್ರೀಗಳು ಮಾತನಾಡಿ, ವೈದಿಕ ಧರ್ಮವನ್ನ‌ಬಿಟ್ಟು ಬಂದ ಬಸವಣ್ಣ ಹೊಸಧರ್ಮವನ್ನ‌ ಯಾಕೆ ಸ್ಥಾಪಿಸಿದನ್ನ‌ಅರ್ಥೈಸಿಕೊಳ್ಳಬೇಕು. ಇದು ಅಭಿಯಾನವಲ್ಲ ಇದು. ಜೈಕಾರ ವೇದಿಕೆಯೂ ಅಲ್ಲ. ಮಾದರ ಚೆನ್ನಯ್ಯ ಅವರ ಭಾಷಣದಲ್ಲಿ ಎಚ್ಚರಿಕೆಯಿತ್ತು. ಬೇರೆ ದೇಶದಿಂದ ಬರುವ ಧರ್ಮದಿಂದ ದೇಶದ ಸಂಸ್ಕೃತಿಯೇ ಹೋಗುವ ಆತಂಕದಿಂದ ಲಿಂಗಾಯತ ಧರ್ಮ ಸ್ಥಾಪಿಸಕಾಗಿದೆ. ಮನುಷ್ಯರ ಬಗ್ಗೆ ಮಾತನಾಡಿದ್ದು ಬಸವಣ್ಣರಾಗಿದ್ದಾರೆ. ಜಾತಿ ಸಮೀಕ್ಷೆಯಲ್ಲಿ ಲಿಂಗಾಯಿತ ಉಪಧರ್ಮ ಎಂದು ನಮೂದಿಸಿ ಎಂದರು.‌

ಸಂಸದರು ಕಾರ್ಯಕ್ರಮವನ್ನ ಉದ್ಘಾಟಿಸಿದರು. ಮಾಜಿ ಎಂಎಲ್ ಸಿ ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಣೆಹಳ್ಳಿ ಶ್ರೀಗಳು, ಬೆಕ್ಕಿನಕಲ್ಮಠದ ಡಾ.ಮಲ್ಲಿಜಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು, ಬಸವ ಕೇಂದ್ತದ ಶ್ರೀಗಳು,   ಎಂಎಲ್ ಸಿ ಡಾ.ಧನಂಜಯ ಸರ್ಜಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ, ಹೆಚ್ ಸಿ ಯೋಗೀಶ್, ಪತ್ರಕರ್ತ ಶಿವಕುಮಾರ್ ಉಪಸ್ಥಿತರಿದ್ದರು.

Madara Chennaiyya Sri's appeal to Minister Madhubangarappa 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close