ad

ಡಿಜೆ ವಿರುದ್ಧದ ವಿವಿಧ ಠಾಣೆಯಲ್ಲಿ ದಾಖಲಾದ ದೂರುಗಳು-Complaint lodged in various police station against dj

 SUDDILIVE || SHIVAMOGGA

ಡಿಜೆ ವಿರುದ್ಧದ ವಿವಿಧ ಠಾಣೆಯಲ್ಲಿ ದಾಖಲಾದ ದೂರುಗಳು-Complaint lodged in various police station against dj

Complaint, dj

Complaint dj


ಗಣಪತಿ ವಿಸರ್ಜನಾ ಮತ್ತು ಈದ್ ಮಿಲಾದ್ ಮೆರವಣಿಗೆಯಲ್ಲಿ ಬಳಕೆಯಾದ ಡಿಜೆ ವಿರುದ್ಧ ಜಿಲ್ಲೆಯಲ್ಲಿ 55 ಪ್ರಕರಣಗಳು ದಾಖಲಾಗಿರುವುದಾಗಿ ಈಗಾಗಲೇ ಪೊಲೀಸ್ ಇಲಾಖೆ ತಿಳಿಸಿದೆ. ಅವುಗಳಲ್ಲಿ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿರುವ ಕೆಲ ಎಫ್ಐಆರ್ ಗಳು ಲಭ್ಯವಾಗಿದೆ. 

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸೆ.6 ರಂದು ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿಯು ಗೋಪಿ ವೃತ್ತದಲ್ಲಿ ಸಮರ್ಪಣಾ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಡಿಜೆ ಬಳಸಿ ಜಿಲ್ಲಾಧಿಕಾರಿಗಳ ಆದೇಶವನ್ನ ಉಲ್ಲಂಘಿಸಲಾಗಿದೆ. ಇದರ ಶಬ್ದ ಮಾಲಿನ್ಯ ಎಷ್ಟಿದೆ ಎಂದು ಅಳತೆ ಮಾಡಲು ಶಬ್ದ ಮಾಲಿನ್ಯ ಅಧಿಕಾರಿಗಳನ್ನ‌ಸ್ಥಳಕ್ಕೆ ಕರೆಯಿಸಿಕೊಂಡು ಪರಿಶೀಲಿಸಲಾಗಿದೆ. 

ಡಿಜೆ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿರುವುದರಿಂದ ಹಿಂದೂ ಕೇಸರಿ ಅಲಂಕಾರ ಸಮಿತಿಯ ಸಮರ್ಪಣಾ ಅಸೋಸಿಯೇಷನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.  ಅದರಂತೆ ದುರ್ಗಿಗುಡಿಯಲ್ಲಿ ಗಣಪತಿ ಹಾರಹಾಕಲು ಸಹನಾ ಸೆಲೂಲರ್ಸ್ ನಿಂದ ಡಿಜೆ ಬಳಕೆ, ಜೈಲ್ ಸರ್ಕಲ್ ನಲ್ಲಿ ಗೆಳೆಯರ ಆಟೋ ನಿಲ್ದಾಣದ ಗೆಳೆಯರ ಬಳಗ ಮತ್ತು ಡಿಜೆ ಮಾಲೀಕರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈದ್ ಮೆರವಣಿಗೆಯಲ್ಲಿ ಡಿಜೆ ಬಳಸಲಾಗಿದೆ ಎಂದು ರಾಗಿಗುಡ್ಡದ ನೂರ್ ಮಸೀದಿ ಅಧ್ಯಕ್ಷರು ಮತ್ತು KA-14TB3651 ಕ್ರಮ ಸಂಖ್ಯೆಯ ಟ್ರ್ಯಾಕ್ಟರ್ ವಿರುದ್ಧ, ಮದಾರಿಪಾಳ್ಯದಲ್ಲಿ KA-15A-5752 ಕ್ರಮಸಂಖ್ಯೆಯ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ 6 ಡಿಜೆ ಬಾಕ್ಸ್ ಮತ್ತು 8 ಲೇಜರ್ ಲೈಟ್ ಬಳಸಿ ಜಿಲ್ಲಾಧಿಕಾರಿಗಳ ಆದೇಶವನ್ನ ಉಲ್ಲಂಘಿಸಿದಕ್ಕೆ ತುಂಗ ನಗರದಲ್ಲಿ ದೂರುದಾಖಲಾಗಿದೆ. 

ಜೆಪಿನಗರದಲ್ಲಿ ಮಿಲಾದ್ ಮೆರವಣಿಗೆ ನೇತೃತ್ವವನ್ನ ವಹಿಸಿಕೊಂಡ ಜಬೀ ಮೊಹಮದ್ ಬಿನ್ ಮುಕ್ಮಲ್ ಅಹಮದ್ ಮತ್ತು ಡಿಜೆ ಮಾಲೀಕ ಮೊಹಮದ್ ಫೈರೋಜ್ ವಿರುದ್ಧ, ಸೂಳೆಬೈಲಿನಲ್ಲಿ ಮೆರವಣಿಗೆಯ ಅಧ್ಯಕ್ಷತೆ ವಹಿಸಿದ್ದ ಸಲೀಂ ಮತ್ತು ಡಿಜೆ ಮಾಲೀಕ ಅಕ್ಬರ್ ಬಿನ್ ಜಾಫರ್ ಸಾಬ್ ವಿರುದ್ಧ, ಬಾಪೂಜಿ ನಗರದಲ್ಲಿ ನವೀದ್ ಸೇಠ್ ವಿರುದ್ಧ ರಾಜೀವ್ ಗಾಂಧಿ ಬಡಾವಣೆಯಲ್ಲಿ ಮಿಲಾದ್ ಮೆರವಣಿಗೆಯ ಆಯೋಜಕ ನ್ಯಾಮತ್ ಮತ್ತು ಇತರರ ವಿರುದ್ಧ, ಬಾಪೂಜಿ ನಗರದ 7 ನೇ ತಿರುವಿನಲ್ಲಿ ಈದ್ ಮೆರವಣಿಗೆಯ ನೇತೃತ್ವ ವಹಿಸಿಕೊಂಡ ರಾಹಿಲ್ ಮತ್ತು ಡಿಜೆ ಬಳಸಿದ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೂ ಎಫ್ಐಆರ್ ಲಭ್ಯವಾಗಬೇಕಿದೆ.

Complaint lodged in various police station against dj


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close