SUDDILIVE || SHIVAMOGGA
ನ್ಯೂ ಮಂಡ್ಲಿ ಗಣಪತಿ ವಿಸರ್ಜನಾ ಮೆರವಣಿಗೆಗೆ ಕಟ್ಟಲಾದ ಕಟೌಟ್ ಗೆ ಆಕ್ಷೇಪ, ಮನವಿ-Objection, appeal against cutout erected for New Mandli Ganpati Visarjana procession
ಶಿವಮೊಗ್ಗದ ನ್ಯೂ ಮಂಡ್ಲಿ ಗಣಪತಿ ವಿಸರ್ಜನ ಮೆರವಣಿಗೆಗೆ ಕಟ್ಟಲಾಗಿದ್ದ ಕಟೌಟ್ ವಿಚಾರದಲ್ಲಿ ಸರ್ಕಲ್ ನಲ್ಲಿ ಮುಸ್ಲೀಂ ಮುಖಂಡರು ಸೇರಿ ಕಟೌಟ್ ತೆಗೆಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ನ್ಯೂ ಮಂಡ್ಲಿ ಸರ್ಕಲ್ ನಲ್ಲಿ ವಿಶ್ವದ ಕಟೌಟ್ ನಿರ್ಮಿಸಿ ಹಳೇ ಭಾರತದ ಭೂಪಟಕ್ಕೆ ಕೇಸರಿ ಬಣ್ಣ ಬಳಿದು ಅದರ ಎದುರು ನಿಂತ ವ್ಯಕ್ತಿಯ ಕೈಯಲ್ಲಿ ಹಿಂದೂ ರಾಷ್ಟ್ರವೆಂದು ಬರೆದ ಕಟೌಟ್ ಗೆ ಆಕ್ಷಣೇಪಣೆ ಎತ್ತಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಕಟೌಟ್ ಕುರಿತು ರೆಪ್ರಸೆಂಟೇಷನ್ ನೀಡಿದ್ದಾರೆ. ಇಲಾಖೆ ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನ್ಯೂ ಮಂಡ್ಲಿ ಗಣಪತಿ ಪ್ರತಿಷ್ಠಾಪಿಸಿ ಇಂದಿಗೆ 25 ದಿನ ಕಳೆದಿದ್ದು ಗಣಪತಿ ವಿಸರ್ಜನಾ ಮೆರವಣಿಗೆ ಇಂದು ವಿಜೃಂಭಣೆಯಿಂದ ನಡೆಯಲಿದೆ. ನ್ಯೂ ಮಂಡ್ಲಿ ಸರ್ಕಲ್ ಬಳಿ ಈ ಕಟೌಟ್ ಸೇರಿದಂತೆ ಶಿವಾಜಿ ಮಹಾರಾಜರ ಪ್ರತಿಮೆಯನ್ನೂ ಸಹ ನಿರ್ಮಿಸಲಾಗಿದೆ.
Objection, appeal against cutout erected for New Mandli Ganpati Visarjana procession
