ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ತೆಗೆಯುವ ಕುರಿತು ಉಪಸಮಿತಿ ರಚನೆ-ಶರಣಪ್ರಕಾಶ್ ಪಾಟೀಲ್-Sub-committee formed to remove Christians from caste list - Sharanaprakash Patil

 SUDDILIVE || SHIVAMOGGA

ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ತೆಗೆಯುವ ಕುರಿತು ಉಪಸಮಿತಿ ರಚನೆ-ಶರಣಪ್ರಕಾಶ್ ಪಾಟೀಲ್-Sub-committee formed to remove Christians from caste list - Sharanaprakash Patil

Sharan, prakash patil



ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನ ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆಯಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಅವರು ಇಂದು ಶಿವಮೊಗ್ಗದ ಸಿಮ್ಸ್ ನಲ್ಲಿ ಅಧಿಕಾರಿಗಳ ಜೊತೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ 2013 ರಲ್ಲೇ ಮೆಗ್ಗಾನ್ ಆಸ್ಪತ್ರೆಯನ್ನ ಪ್ರತ್ಯೇಕವಾಗಿಸಬೇಕಿತ್ತು. 2007 ರಲ್ಲಿ ಆರಂಭವಾದ ಆಸ್ಪತ್ರೆಯನ್ನ 2013 ಕ್ಕೆ ಜಿಲ್ಲಾ ಆಸ್ಪತ್ರೆಗೆ ಬಿಟ್ಟುಕೊಡಬೇಕಿತ್ತು. ಅದು ಎಲ್ಲೂ ಆಗಿಲ್ಲ. ಹಾಗಾಗಿ ಮುಂದುವರೆದಿದೆ. ಈಗಲೂ ಅವರಿಗೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ಒಳಗುತ್ತಿಗೆ ನೌಕರರ 7 ನೇ ವೇತನ ಕುರಿತು ಹೈಕೋರ್ಟ್  ಆದೇಶ ಮಾಡಿದರೂ ಸಹ ಸರ್ಕಾರ ಇನ್ನೂ ಯೋಜಬೆ ಜಾರಿ ಮಾಡದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಫೈನಾನ್ಸ್ ಇಲಾಖೆ ಕಳುಹಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಕಳೆದ ಒಂದುವರೆ ವರ್ಷದಿಂದ ಫೈನಾನ್ಸ್ ಇಲಾಖೆಯಲ್ಲೇ ಕಡತ ಇರುವುದು ಸಹ ಸರ್ಕಾರದ ನಿರ್ಲಕ್ಷತನ ಎದ್ದುಕಾಣುತ್ತಿದೆ. 

ಸಚಿವ ಸಂಪುಟದಲ್ಲಿ ಜಾತಿ ಗಣತಿಯ ಕುರಿತು ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಜಾರಿಗಣತಿ ಎಂದಿನಂತೆ ನಡೆಯುತ್ತೆ. ಕ್ರಿಶ್ಚಿಯನ್ ಉಪಜಾತಿ ಕುರಿತು ಹಿಂದೆ ಸರ್ವೆ ನಡೆದಾಗ ನಮೂದಾಗಿತ್ತು.‌ಅದನ್ನೇ ಅಧಿಕಾರಿಗಳು ಸೇಋ್ಪಡಿಸಿದ್ದಾರೆ. ಈ ಕುರಿತು ತೆಗೆಯಲು ಸಹ ಉಪಸಮಿತಿ ರಚಿಸಲಾಗಿದೆ. ಜಾತಿ ಜನಗಣತಿ ನಡೆಯುವಾಗ ಇದು ಸರಿಯಾಗಲಿದೆ ಎಂದರು. 

ತುರ್ತು ಮೆಡಿಸಿನ್ ವಿಭಾಗ ಯಾವ ವೈದ್ಯಕೀಯ ಕಾಲೇಜಿನಲ್ಲೂ ಇಲ್ಲದ ಕಾರಣ ಶಿವಮೊಗ್ಗದಲೂ ಇಲ್ಲವಾಗಿದೆ. ಆರಂಭಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.

Sub-committee formed to remove Christians from caste list - Sharanaprakash Patil

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close