SUDDILIVE || SHIVAMOGGA
ಸೆ. 13 ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ-Power outages in various parts of the city on Sept. 13
ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1 ರ ವ್ಯಾಪ್ತಿಯಲ್ಲಿ ಶಂಕರಮಠ ಮಾರ್ಗದಲ್ಲಿ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿದ್ದು, ಸೆ. 13 ರಂದು ಬೆಳಗ್ಗೆ 10.00 ರಿಂದ ಮ.02 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯಾನಗರ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಇಂದಿರಾ ಬಡಾವಣೆ, ಗುರುಗಪುರ, ಮಂಜುನಾಥ ಬಡಾವಣೆ, ವೆಂಕಟೇಶನಗರ, ಪುರಲೆ, ಅಪೂರ್ವ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶ ಮತ್ತು ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನ ಸುತ್ತಮುತ್ತ, ಬಾಪೂಜಿನಗರ, ಟಿ.ಜಿ.ಎನ್.ಲೇಔಟ್, ಜೋಸೆಫ್ ನಗರ, ಚರ್ಚ್ ಕಾಂಪೌಂಡ್, ಕಾನ್ವೆಂಟ್ ರಸ್ತೆ, ಲೂರ್ದ್ನಗರ, ಸರ್.ಎಂ.ವಿ.ರಸ್ತೆ, ವೀರಭದ್ರೇಶ್ವರ ಚಿತ್ರಮಂದಿರ ಸುತ್ತಮುತ್ತ, ಡಿವಿ.ಎಸ್. ಮತ್ತು ಎನ್‌ಇಎಸ್, ಕುವೆಂಪು ರಂಗಮಂದಿರ,
ಗಾಂಧಿ ಪಾರ್ಕ್, ಮಹಾನಗರ ಪಾಲಿಕೆ, ನೆಹರು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಹಾಗೂ ಅಂದು ಮ. 3.00 ರಿಂದ ಸಂ. 5.00 ರವರೆಗೆ ಊರುಗಡೂರು 11 ಕೆವಿ ಮಾರ್ಗದಲ್ಲಿ ಕಾಮಗಾರಿ ಹಮ್ಮಿಕೊಂಡಿದ್ದು, ವಾದಿ ಎ ಹುದಾ, ಮೆಹಬೂಬ್ ನಗರ, ಮದಾರಿಪಾಳ್ಯ, ರತ್ನಮ್ಮ ಲೇಔಟ್, ಸೂಳೆಬೈಲು, ನಿಸರ್ಗ ಲೇಔಟ್, ಬೈಪಾಸ್ ರಸ್ತೆ, ಇಂದಿರಾನಗರ, ಮಳಲಿಕೊಪ್ಪ, ಪುಟ್ಟಪ್ಪ ಕ್ಯಾಂಪ್, ಕ್ರಷರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outages in various parts of the city on Sept. 13