ad

ಮಹಿಳಾ ದಸರಾ 2025 ಕುರಿತು ಪೂರ್ವಭಾವಿ ಸಭೆ-Preparatory meeting on Women's Dussehra 2025

SUDDILIVE || SHIVAMOGGA

ಮಹಿಳಾ ದಸರಾ 2025 ಕುರಿತು ಪೂರ್ವಭಾವಿ ಸಭೆ-Preparatory meeting on Women's Dussehra 2025

Women, Dussehra


ಶಿವಮೊಗ್ಗ ಮಹಾನಗರ ಪಾಲಿಕೆ ಮಹಿಳಾ ದಸರಾ ಸಮಿತಿ ವತಿಯಿಂದ ಮಹಿಳಾ ದಸರಾ -2025 ರ ಅಂಗವಾಗಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಕುರಿತು ಚರ್ಚೆಸಲು ಇಂದು  ಪಾಲಿಕೆಯ ಪರಿಷತ್ ಸಭಾಗಣದಲ್ಲಿ ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಜೊತೆ ಪೂರ್ವ ಭಾವಿಸಭೆ ನಡೆದಿದೆ. 

ಅದರಂತೆ ದಿನಾಂಕ:10/09/2025 ರಂದು ವೀರಶೈವ ಕಲ್ಯಾಣ ಮಂದಿರ ಮತ್ತು ನಿಜಲಿಂಗಪ್ಪ ಸಭಾ ಭವನ ಆವರಣದಲ್ಲಿ ಮಹಿಳೆಯರಿಗಾಗಿ ವೈಯಕ್ತಿಕ ಸ್ಪರ್ಧೆ, ಕಡ್ಡಿಯಲ್ಲಿ ಬಾಳೆ ತೆಗೆದು ಹಾಕುವುದು, ಬೆಂಕಿಪೊಟ್ಟನದಲ್ಲಿ  ABCD ಜೋಡಿಸುವುದು, ಮೊಗ್ಗಿನ ಜಡೆ, ಊರಾಗ ನಡಿಗೆ, ಸ್ಪರ್ಧೆ ಗಳು ಮತ್ತು ಗುಂಪು ಸ್ಪರ್ಧೆಗಳಾದ ದುರ್ಗಾದೇವಿ ಅಲಂಕಾರ, ಬಾಲ್ ಪಾಸ್ ಮಾಡುವುದು, 

ಅಂತ್ಯಕ್ಷರಿ ಸ್ಪರ್ಧೆ ಗಳು ದಿನಾಂಕ:11/09/2025 ರಂದ್ದು ಕುಟುಂಬದ 5 ಸದಸ್ಯರಿಂದ ಸಂಸಾರವೇ ಸ್ವರ್ಗ ಎಂಬಾ ವಿಶೇಷ ಸ್ಪರ್ಧೆ, ದಿನಾಂಕ:16/09/2025 ರಂದು ಸಂಜೆ 4-00 ಗೆ ದೈವಾಜ್ಞ ಕಲ್ಯಾಣ ಮಂದಿರದಿಂದ್ದ ಡಾ|| B.R. ಅಂಬೇಡ್ಕರ್ ಭಾವನದ ವರೆಗೆ ಮಹಿಳಾ ದಸರಾ ಬೃಹತ್ ಜಾಥಾ ಕಾರ್ಯಕ್ರಮ ಜಾಥಾದಲ್ಲಿ ಉತ್ತಮ ಉಡುಗೆ ತೊಟ್ಟು ಬಂದ್ದಲ್ಲಿ ನಗದು ಬಹುಮಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. 


ದಿನಾಂಕ :24/09/2025 ರಂದ್ದು ಮಹಿಳಾ ದಸರಾ ಸಮಾರೋಪ ಸಮಾರಂಭ ಕುವೆಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದು ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘ ದಿಂದ್ದ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. 

Preparatory meeting on Women's Dussehra 2025

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close