ad

ಹೊಸನಗರದ ಪ್ರಸಿದ್ದ ಜಲಪಾತಗಳು ಬೇರೆ ತಾಲೂಕಿನ ಪಟ್ಟಿಗೆ ಸೇರ್ಪಡೆ-ನಗರದ ನಿತಿನ್ ಆಕ್ಷೇಪ- Addition of famous waterfalls of taluk to other taluk's list-Nagara Nitin Objection

SUDDILIVE || HOSANAGARA

ಹೊಸನಗರದ ಪ್ರಸಿದ್ದ ಜಲಪಾತಗಳು ಬೇರೆ ತಾಲೂಕಿನ ಪಟ್ಟಿಗೆ ಸೇರ್ಪಡೆ-ನಗರದ ನಿತಿನ್ ಆಕ್ಷೇಪ-Addition of famous waterfalls of taluk to other taluk's list-Nagara Nitin Objection


ರಾಜ್ಯದಲ್ಲೆ ಅತೀ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಹೊಸನಗರ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸಂಕಷ್ಟು ಅವಕಾಶವಿದ್ದು ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದೆ  ಎಂದು ಬಿಜೆಪಿ ಯುವಮೋರ್ಚಾದ ಮುಖಙಡ ನಗರದ ನಿತಿನ್ ದೂರಿದ್ದಾರೆ. 

ಈ ನಡುವೆ ಇತ್ತಿಚೆಗೆ ಇಲಾಖೆ ಪ್ರವಾಸಿ ತಾಣಗಳ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಹೊಸನಗರ ತಾಲ್ಲೂಕಿನ ಪ್ರವಾಸಿ ತಾಣಗಳಾದ ಹಿಡ್ಲುಮನೆ ಜಲಪಾತ, ಕುಂಚಿಕಲ್ ಜಲಪಾತ, ತಲಾಸಿ ಅಬ್ಬಿ ಜಲಪಾತ ಹಾಗೂ ಇತರೆ ಪ್ರವಾಸಿ ತಾಣಗಳನ್ನು ಬೇರೆ ಬೇರೆ ತಾಲ್ಲೂಕಿನ ಪಟ್ಟಿಯಲ್ಲಿ ದಾಖಲಿಸಿರುವುದು ಖಂಡನೀಯ ಎಂದರು. 

Waterfalls, Nitin

ಹಾಗೂ ಈ ಪಟ್ಟಿಯಲ್ಲಿ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣಗಳಾದ ನಿತ್ಯ ಸಾವಿರಾರು ಜನ ಪ್ರವಾಸಿಗರು ಬೇಟಿ ನೀಡುವ ದೇವಗಂಗೆ ಸಪ್ತಕೊಳಗಳು, ಚಕ್ರಾ ಡ್ಯಾಂ ಮತ್ತು ಜಲಪಾತ, ಬಾಳೆಬರೆ ಹಾಗೂ ಇತರ ಸ್ಥಳಗಳನ್ನು ಬಿಟ್ಟಿರುವುದು ಸರಿಯಲ್ಲ. ಪ್ರವಾಸೋದ್ಯಮ ಇಲಾಖೆಗೆ ಪ್ರದೇಶವಾರು ಪ್ರವಾಸಿ ತಾಣಗಳ ಮಾಹಿತಿಯೇ ಇಲ್ಲದಿರುವುದು ಪ್ರವಾಸಿ ತಾಣಗಳ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಅನ್ನುವುದು ಸ್ಪಷ್ಟವಾಗುತ್ತೆ  ಎಂದಿದ್ದಾರೆ. 

Addition of famous waterfalls of taluk to other taluk's list-Nagara Nitin Objection

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close