ad

ಸೆ.22 ರಿಂದ ನಂದಿನಿ ಉತ್ಪನ್ನಗಳ ದರ ಇಳಿಕೆ ನಿರೀಕ್ಷೆ-ಇಂದು ಮಹತ್ವ ಸಭೆ-Prices of daily Nandini commodities expected to fall from September 22nd - Important meeting today

 SUDDILIVE 

ಸೆ.22 ರಿಂದ ನಂದಿನ ಉತ್ಪನ್ನಗಳ ದರ ಇಳಿಕೆ ನಿರೀಕ್ಷೆ-ಇಂದು ಮಹತ್ವ ಸಭೆ-Prices of daily Nandini commodities expected to fall from September 22nd - Important meeting today

Nandini, price

ಆಹಾರ ಉತ್ಪನ್ನಗಳ ಮೇಲಿನ ಜಿಎಸ್ ಟಿಯನ್ನ ಶೇ.12 ರಿಂದ 5ಗೆ ಇಳಿಕೆ ಮಾಡಿರುವುದರಿಂದ ಸೆ.22 ರಿಂದ ಹಾಲು, ಮೊಸರು, ತುಪ್ಪ, ಬೆಣ್ಣೆ ಲಸ್ಸಿ, ಮಜ್ಜಿಗೆ ಹೀಗೆ ನಂದಿನಿಯ ವಿವಿಧ ಉತ್ಪನ್ನಗಳ ದರವೂಕಡ ಕಡಿಮೆಯಾಗಲಿದೆ. 

ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ  (KMF) ಜಿಎಸ್ಟಿ ಕಡಿಮೆ ಮಾಡಲು ಮುಂದಾಗಿದ್ದು, ಮೊಸರಿನ ದರ ಲೀಟರ್ ಗೆ 4 ರೂ. ರವರೆಗೆ ಕಡಿಮೆ ಆಗುವ ನಿರೀಕ್ಷೆಯಿದೆ.  

ದರ ಇಳಿಕೆ ಸಂಬಂಧ ಇಂದು ಕೆಎಂಎಫ್ ನ ಹಿರಿಯ ಅಧಿಕಾರಿಗಳ ಸಭೆ ಶುಕ್ರವಾರ ನಡೆಯಲಿದೆ. ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೊಳ್ಳುವಂತೆ ಮಾರಾಟಗಾರರಿಗೆ ಸೂಚಿಸಲಾಗುತ್ತಿದೆ. ಜಿಎಸ್ ಟಿ ಸಂಬಂಧ ಸೂಚಬೆ ಬಂದಿದೆ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಆದೇಶ ಜಾರಿ ಮಾಡಲಾಗುವುದು ಎಂದು ಮಹಾಮಂಡಳಿ ತಿಳಿಸಿದೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ಪ್ರಕಟಿಸಿದೆ.

2017 ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022 ರಲ್ಲಿ ಜಿಎಸ್ ಟಿ ಯನ್ನ ಶೇ.12 ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ಕಡಿಮೆ ಮಾಡುವುದರಿಂದ ಗ್ರಾಹಕರ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ. 

Prices of daily Nandini commodities expected to fall from September 22nd - Important meeting today

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close