SUDDILIVE || SHIVAMOGGA
ವಿಚಾರಣಾಧೀನ ಕೈದಿ ಅನಾರೋಗ್ಯ ಹಿನ್ನಲೆಯಲ್ಲಿ ಸಾವು-Undertrial prisoner dies due to illness
ವಿಚಾರಣಾಧೀನ ಕೈದಿಯಾಗಿ ಶಿವಮೊಗ್ಗ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಮೂರೇ ದಿನಕ್ಕೆ ಮೃತಪಟ್ಟಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದು ಬಳಗ್ಗೆ ಆತ ಸಾವನ್ನಪ್ಪಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಟಿಪ್ಪುನಗರದ ನಿವಾಸಿ ಮನ್ಸೂರ್ (43) ಮೃತ ವಿಚಾರಣಾಧೀನ ಕೈದಿ. ಸೆ.15ರಂದು ಮನ್ಸೂರ್ ಶಿವಮೊಗ್ಗ ಜೈಲು ಸೇರಿದ್ದ. ಅನಾರೋಗ್ಯದ ಹಿನ್ನೆಲೆ ಸೆ.17ರ ಮಧ್ಯರಾತ್ರಿ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಸೆ.14ರಂದು ಮನ್ಸೂರ್ ತನ್ನ ತಂದೆಯ ಜೊತೆಗೆ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಗಲಾಟೆ ಮಾಡಿದ್ದ. ಕತ್ತರಿಯಿಂದ ತಂದೆಯ ಎದೆ, ಕುತ್ತಿಗೆ ಸೇರಿದಂತೆ ಹಲವೆಡೆ ಮಾರಣಾಂತಿಕವಾಗಿ ಚುಚ್ಚಿದ್ದ. ಈ ಹಿನ್ನೆಲೆ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿದ್ದ ಪೊಲೀಸರು ಶಿವಮೊಗ್ಗ ಜೈಲಿಗೆ ರವಾನಿಸಿದ್ದರು.
Undertrial prisoner dies due to illness