SUDDILIVE || SHIVAMOGGA
ಶಿವಮೊಗ್ಗದಲ್ಲಿ ಮಳೆ-Rain in shimoga
ಮೂರ್ನಾಲ್ಕು ದಿನದ ಬಿಸಿಲಿನ ಅಬ್ಬರ ಬಳಿಕ ಶಿವಮೊಗ್ಗದಲ್ಲಿ ಮತ್ತೆ ಮಳೆಯಾಗುತ್ತಿದೆ. ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರವಿತ್ತು. ಮಧ್ಯಾಹ್ನದ ವೇಳೆಗೆ ಮಳೆ ಶುರುವಾಗಿದ್ದು, ಹಲವೆಡೆ ಜೋರಾಗಿ ಸುರಿಯುತ್ತಿದೆ.
ನೈಋತ್ಯ ಮುಂಗಾರು ಮತ್ತೆ ಪ್ರಬಲವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಶಿವಮೊಗ್ಗದಲ್ಲಿ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ.
ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಮಳೆ ಮರೆಯಾಗಿತ್ತು. ಭಾರಿ ಬಿಸಿಲು ಆವರಿಸಿತ್ತು. ಇದರಿಂದ ಜನ ಹೈರಾಣಾಗಿದ್ದರು. ಈಗ ದಿಢೀರ್ ಮಳೆ ಸುರಿಯುತ್ತಿದ್ದಂತೆ ವಾತಾವರಣ ತಂಪಾಗಿದೆ.
Rain in shimoga
