SUDDILIVE || SHIVAMOGGA
ಸಂಗಮೇಶ್ವರ್ ಮುಂದಿನ ಜನ್ಮದ ವರೆಗೆ ಕಾಯೋದು ಬೇಡ, ಈಗಲೇ ಖತ್ನ ಮಾಡಿಕೊಂಡು ಮತಾತಂತರಾಗಲಿ-ಕಾಂತೇಶ್-Sangameshwar should not wait until his next birth, he should get circumcised now and become a convert - Kantesh
ಮದ್ದೂರು ಘಟನೆ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಸುದ್ದಿಗೋಷ್ಠಿ ನಡೆಸಿ, ಮಸೀದಿಯಲ್ಲಿ ನಿಂತು ಕಲ್ಲು ತೂರಲಾಗಿದೆ. ಮಸೀದಿಯನ್ನೂ ತಪಾಸಣೆ ಮಾಡಬೇಕು. ಮುಸ್ಲೀಂ ಗೂಂಡಾಗಳು ಕಲ್ಲುತೂರಿದವರನ್ನ ಬಂಧಿಸಬೇಕು ಎಂದು ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಯಲಿದೆ ಎಂದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಳೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟಿಸಲಾಗುತ್ತಿದೆ. ಹಿಂದೂಗಳ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದೆಂದರೆ ಮಸೀದಿಗಳು ಪಾಕಿಸ್ತಾನದಲ್ಲಿವೆಯೋ ಅಥವಾ ಭಾರತದಲ್ಲಿವೆಯೋ ಎಂದು ಪ್ರಶ್ಬಿಸಿದರು.
ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ಎಸೆದು ಗಲಭೆ ಸೃಷ್ಠಿಸಲು ಕುಮ್ಮಕ್ಕುಕೊಟ್ಟವರು ಯಾರು? ಸಿಎಂ ಮತ್ತು ಗೃಹಸಚಿವರು ಇದೊಂದು ಸಣ್ಣಘಟನೆ ಎಂದು ಹಗೂರವಾಗಿ ತೆಗೆದುಕೊಂಡಿದ್ದಾರೆ. ಹಾಗಾದರೆ ಇವರಿಗೆ ಹಿಂದೂಗಳ ಹೆಣ ಬೀಳಬೇಕಾ ಎಂದು ಪ್ರಶ್ನಿಸಿದರು.
ಭದ್ರಾವತಿಯಲ್ಲಿ ಶಾಸಕರು ನಾನು ಮುಂದಿನ ಜನ್ಮ ಎಂಬುದಿದ್ದರೆ ಮುಸ್ಲೀಂರಾಗಿ ಬದುಕುತ್ತೇನೆ ಎನ್ನುತ್ತಾರೆ. ಮುಂದಿನ ಜನ್ಮತನಕ ಯಾಕೆ ಕಾಯುತ್ತೀರಿ ಈಗಲೇ ಖತ್ನ(ಮುಂಜಿ) ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
Sangameshwar should not wait until his next birth, he should get circumcised now and become a convert - Kantesh
