SUDDILIVE || SHIVAMOGGA
ನಿಮ್ಮ ಜೀನ್ಸ್ ನಿಮ್ಮಮನೆಯಲ್ಲಿರಲಿ-ಶಾಸಕ ಚೆನ್ನಿ-Leave your jeans at home-MLA Chenni
ಭದ್ರಾವತಿಯಲ್ಲಿ ಪಾಕಿಸ್ತಾನ್ ಜಿಂದಾಬಾದ ಕೂಗಿದವರ ಧರ್ಮದಲ್ಲಿ ಮುಂದಿನ ಹುಟ್ಟು ಇರಲಿ ಎಂದು ಹೇಳುವ ಸಂಗಮೇಶ್ವರ್ ಮತ್ತು ಕಾಂಗ್ರೆಸ್ ವಿರುದ್ಧ ಶಾಸಕ ಚೆನ್ನಬಸಪ್ಪ ಅಬ್ವರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ರೋಗ ಮತ್ತೆ ಆರಂಭವಾಗಿದೆ ರಕ್ಷಣ ಇಲಾಖೆ ಕ್ರಮ ಜರುಗಿಸಬೇಕು. ವೈರಲ್ ವಿಡಿಯೋ ಮಾಡುವವರ ಬಗ್ಗೆ ಕ್ರಮ ಜರುಗಿಸಲಾಗುತ್ತಿದೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಇಲಾಖೆ ಪರಿಶೀಲಿಸುವುದಾಗಿ ಹೇಳುತ್ತೆ. ಬಿಜೆಪಿ ರಾಜಕಾರಣ ಮಾಡುತ್ತಾರೆ ಎನ್ನುವರು ಸರಿಯಾಗಿ ಕೇಳಿಸೊಕೊಳ್ಳಿ ನಾವು ಇರುವುದೇ ಹಿಂದೂ ರಕ್ಷಣೆಗೆ ರಕ್ಷಣೆಗೆ ಅಡ್ಡಬಂದರೆ ರಾಜಕಾರಣನೇ ಮಾಡೋದು ಎಂದಿದ್ದಾರೆ.
ಭದ್ರಾವತಿ ವಿಷಯದಲ್ಲಿ ಪರಿಶೀಲನೆ ನಡೆಸುತ್ತೇವೆ ಎನ್ನುವ ಎಸ್ಪಿ ಅವರು ಇನ್ನೂ ಯಾಕೆ ಇನ್ನೂ ಪರಿಶೀಲನೆ ಯಾಕೆ? ಕ್ರಮ ಯಾಕೆಯಿಲ್ಲ. ಪಾಕ್ ಪರ ಘೋಷಿಸುವವರನ್ನ ಬಂಧಿಸಲು ನಿಮಗೆ ಆಗೊಲ್ವಾ? ಇದುವರೆಗೂ ಒಳ್ಳೆ ಕೆಲಸ ಮಾಡಿದ ನೀವು ಇಲ್ಲಿಯಾಕೆ ಮುಂದುವರೆಯುತ್ತಿಲ್ಲ ಎಂದರು.
ಸಂಗಮೇಶ್ವರ್ ಮುಂದಿನ ಜನ್ಮದಲ್ಲಿ ಸಾಬನಾಗಿ ಹುಟ್ಟುವುದಾಗಿ ಹೇಳುವ ನೀಮಗೆ ಭಾರತ ಮಾತೆ ಅವಕಾಶನೇ ನೀಡಲ್ಲ. ಯಾರು ಶಾಂತಿಯನ್ನ ನೆಲುಸುವಂತೆ ಮಾಡಬೇಕು. ಗಣಪತಿಯ ಮೆರವಣಿಗೆಯಿಂದ ಗಲಭೆಯಾಗುತ್ತೆ ಎನ್ನ ಕಾಂಗ್ರೆಸ್ ಗೆ ಟಕ್ಕರ್ ನೀಡದ ಶಾಸಕರು ಮೆರವಣಿಗೆ ಇಲ್ಲದಾಗಲೂ ಗಲಾಟೆಯಾಗಿದೆ. ಮಸ್ಲೀಂ ಮಾನಸಿಕತೆ ಅರ್ಥ ಮಾಡಿಕೊಂಡು ಕ್ರಮ ಜರುಗಿಸಿ ಸರಿದಾರಿಗೆ ತಾರದೆ ಇದ್ದರೆ ಶಾಂತಿ ನೆಲಸುತ್ತಾ ಎಂದು ಕೇಳಿದರು.
ಒಂದಕ್ಕೊಂದು ಜೋಡಿಸುತ್ತಾ ಗಲಭೆ ಸೃಷ್ಠಿಸುವ ನೀವು ಕೆಟ್ಟ ರಾಜಕೀಯ ಪರಂಪರೆಗೆ ನಾಂದಿ ಹಾಕುತ್ತಿದ್ದೀರಿ. ನ್ಯಾಯ ಕೇಳುದ್ರೆ ಲಾಠಿ ಚಾರ್ಜ್ ಮಾಡುತ್ತೀರ? ಕಾಂಗ್ರೆಸ್ ಸರ್ಕಾರದ ಮೂಲಕ ನಿಮ್ಮ ಜೀನ್ಸ್ ಹರಡಬೇಡಿ. ನಿಮ್ಮ ಜೀನ್ಸ್ ಮನೆಯಲ್ಲಿ ಇಟ್ಟುಕೊಳ್ಳಿ ತುಷ್ಠೀಕರಣಕ್ಕಾಗಿ ಹಿಂದೂಗಳ ಮೇಲೆ ಲಾಠಿ ಚಾರ್ಚ್ ಮಾಡಬೇಡಿ. ತಹಬದಿಗೆ ತಂದರೆ ಸಂತೋಷ ಇಲ್ಲವಾದರೆ ನೀವೇಕಾರಣ ಎಂದರು.
ಸಿಎಂ ಆಗಿ ನಡೆದುಕೊಳ್ಳಿ ಯಾವುದೇ ಬಾಯಿಬಡಕನ ತರ ನಡೆದುಕೊಳ್ಳಬೇಡಿ. ಚಾಮುಂಡಿ ಬೆಟ್ಟಕ್ಕೆ ಹೋಗುವ ಮೈಸೂರು ಶಾಸಕರನ್ನ ಸಂಗೊಳ್ಳಿ ರಾಯಣ್ಣನ ಬಳಿ ಬಂಧಿಸುತ್ತೀರ? ಗೃಹಸಚಿವರಿಗೆ ಕ್ರಮಕೈಗೊಂಡರೆ ನಿಮ್ಮ ಜಾಗಕ್ಕೆ ಕುತ್ತು ಬರುತ್ತಾ? ನೀವು ಏನು ಬೇಕಾದರೂ ನಡೆದುಕೊಳ್ಳುತ್ತೇನೆ ಎಂದರೆ ಬಿಡಕ್ಕಾಗುತ್ತಾ? ಎಚ್ಚರಿಕೆಯಿಂದ ರಾಜ್ಯ ಸರ್ಕಾರ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಎಸ್ಪಿ ಅವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಹೇಳಲಾಗುವುದಿಲ್ಲ. ಮುಸ್ಲೀಂ ಮಾನಸಿಕತೆಯನ್ನ ಮರೆಮಾಚುವ ಕೆಲಸ ಮಾಡಬಾರದು ಎಂದ ಶಾಸಕರು 2010 ರಲ್ಲಿ ಗಾಂಧಿಬಜಾರ್ ನಲ್ಲಿ ನಡೆದ ದೊಂಬಿಯಲ್ಲಿ ಮುಸ್ಲೀಂ ಸಮುದಾಯ ರಕ್ಷಣ ಇಲಾಖೆಗೆ ತಲ್ವಾರ್ ತೋರಿಸುತ್ತಾರೆ. ಈ ಮಾನಸಿಕತೆ ಬಗ್ಗೆ ಕ್ರಮ ಜರುಗಿಸೊಲ್ಲ. ಡಿಜೆ ಹಾಕಿದವರ ವಿರುದ್ಧ 16 ನೋಟೀಸ್ ನೀಡಲಾಗಿದೆ ಎಂದರು.
ನಿಮ್ಮ ಹತ್ತಿರ ತಲ್ವಾರ್ ಗಳನ್ನ ಸರೆಂಡರ್ ಮಾಡಿ ಎಂದು ಹೇಳುವ ಬಗ್ಗೆ ನೋಟೀಸ್ ನ್ನ ಪೊಲೀಸ್ ಕೊಡಲೇ ಇಲ್ಲ. ಮದರಸಾದಲ್ಲಿ ದೇಶ ಭಕ್ತಿ ಶಿಕ್ಷಣ ನೀಡುವಂತಾಗಬೇಕು. ಶಿವಮೊಗ್ಗ ಜಿಲ್ಲೆಯ ಎಸ್ಪಿ ಎಚ್ಚರಿಕೆಯ ಕೆಲಸ ಮಾಡುತ್ತಿದ್ದಾರೆ. ಅಲ್ಲಲ್ಲಿ ಕೆಲ ಅಧಿಕಾರಿಗಳು ಹಾಗೆ ಇದ್ದಾರೆ ಅವರ ಬಗ್ಗೆ ಕ್ರಮ ಆಗಬೇಕು. ಸಾಗರದಲ್ಲಿ ಸಣ್ಣ ಮಗುವಿನ ಬಾಯಿಯಲ್ಲಿ ಉಗುಳಿಸುತ್ತಾರೆ ಆ ಬಗ್ಗೆ ಕಠಿಣ ಕ್ರಮವಿಲ್ಲ. ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಅವರ ವಿರುದ್ಧ ಪ್ರತಿಭಟನೆಗೆ ಇಳಿದರೆ ಹಿಂದೂಗಳನ್ನ ಬಂಧಿಸುತ್ತಾರೆ ಎಂದರು.
ಮಂಡ್ಯ ಮದ್ದೂರು, ನಾಗಮಂಗಲ ದಲ್ಲಿ ನಡೆದ ಗಲಭೆಯಲ್ಲಿ ರಾಜ್ಯಸರ್ಕಾರ ಬುಡಕ್ಕೆ ಹೋಗಬೇಕು. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ನಡೆದ ಬಿಗಿ ಕ್ರಮ ಅಲ್ಲೂ ನಡೆಯಬೇಕು ಎಂದರು.
Leave your jeans at home-MLA Chenni
