SUDDILIVE || SHIVAMOGGA
ಶ್ರಾವಣದಲ್ಲಿ ಶಾಲೆ ಮಕ್ಕಳು ಮೊಟ್ಟೆ ಮುಟ್ಟಲ್ಲ-ಡಿಡಿಪಿಐ ಹೇಳಿದ್ದೇನು-School children should not touch eggs during Shravan - what did DDPI say?
ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಿದೆ ಸಾಗರ ಮತ್ತು ಹೊಸನಗರ ಚೆನ್ನಾಗಿದೆ ಮಳೆ,ಕೃಷಿಗೆ ಅನುಕೂಲವಾಗಿದೆ. ಮೇ 15 ರಿಂದಲೇ ಜಿಲ್ಲೆಯಲ್ಲಿ ಮಳೆ ಆರಂಭವಾಗಿರುವುದರಿಂದ. 76 ಸಾವಿರ ಹೆಕ್ಟರ್ ಭತ್ತ ಬೆಳೆಯಾಗಿದೆ. ಸೆಪ್ಟಂಬರ್ ಮತ್ತುಆಗಸ್ಟ್ ನಲ್ಲಿ ಮಳೆ ಕಡಿಮೆಯಾಗಿದೆ ಎಂದು ಜಿಲ್ಲಾ ಕೃಷಿ ಅಧಿಕಾರಿ ಕಿರಣ್ ಕುಮಾರ್ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಇಂದು ಜಿಪಂನ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ ಕಾವೇರಿ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ 4800 ಮೆ.ಟನ್ ಯೂರಿಯಾ ದಾಸ್ತಾನಾಗಿದೆ. ಒಟ್ಟು 28 ಸಾವಿರ ಮೆಟ್ರಿಕ್ ಟನ್ ರಸಗೊಬ್ವರವನ್ನ ದಾಸ್ತಾನಾಗಿದೆ. 137 ಲಕ್ಷ ಹೆಕ್ಟರ್ ಅಡಿಕೆ ಬೆಳೆಯಿದೆ ಎಂದರು. ಜಿಲ್ಲೆಯಲ್ಲಿ 253 ಮಳೆಮಾಪನದಲ್ಲಿ 53 ರಿಪೇರಿಯಿದೆ. ಜೇನುಕೃಷಿಗೆ ಬೇಡಿಕೆ ಹೆಚ್ಚಿಗೆಯಿದೆ. ನಿಸ್ರಾಣಿ ಮತ್ತು ಜೈಂಕಾರದಲ್ಲಿ ಮಾರಾಟಮಾಡಲಾಗುತ್ತಿದೆ ಎಂದರು.
ಪಶು ಸಂಗೋಪನ ಅಧಿಕಾರಿ ಮಾತನಾಡಿ, 524 ಹಸು ಸಾವಿಗಿದ್ದು ಪರಿಹಾರ ನೀಡಲಾಗಿದೆ. ಸಣ್ಣ ಸಾಕುಪ್ರಾಣಿ 5000 ಸಾವಿನ ಪ್ರಕರಣಗಳು ದಾಖಲಾಗಿದ್ದು ಇವೆಲ್ಲವುದಕ್ಕೂ ಪರಿಹಾರ ನೀಡಲಾಗಿದೆ ಎಂದರು. ಡಿಡಿಪಿಐ ಮಂಜುನಾಥ್ ಮಾತನಾಡಿ, 10 ಜನ ಮಕ್ಕಳು ಇರುವ ಶಾಲೆಯೇ ಜಿಲ್ಲೆಯಲ್ಲಿ 160 ಶಾಲೆಗಳಿವೆ. 171 ಶಾಲೆಗಳಲ್ಲಿ ಧ್ವಿಭಾಷ ಕಲಿಕೆ ಶಾಲೆಯಿದೆ. ಯಾರೂ ಶಾಲೆಯನ್ನ ಮಧ್ಯದಲ್ಲಿಯೇ ಬಿಟ್ಟುಹೋಗಿರುವ ಪ್ರಕರಣ ದಾಖಲಾಗಿಲ್ಲ. ಕನ್ನಡ ಮೀಡಿಯಂ ಶಾಲೆಗಿಂತ ಇಂಗ್ಲೀಷ್ ಶಾಲೆಗೆ ಬೇಡಿಕೆ ಹೆಚ್ಚು ಇದೆ ಎಂದು ತಿಳಿಸಿದರು. ಮಕ್ಕಳು ಶಾಲೆಯಿಂದ ಡ್ರಾಪೌಟ್ ಆಗಲು ಬಿಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಳಿದರು.
ಶಾಲೆಯಲ್ಲಿ ಸರ್ಕಾರಿ ಮಕ್ಕಳಿಗೆ ನೀಡುವ ಮೊಟ್ಟೆಯನ್ನ ಶ್ರಾವಣದಲ್ಲಿ, ಪ್ರತಿಸೋಮವಾರ ಮತ್ತು ಪ್ರತಿ ಶನಿವಾರ ತಿನ್ನಲ್ಲ. ಕಾರಣ ಮೊಟ್ಟೆಗಳ ಬಳಕೆ ಈ ವೇಳೆ ಜಡಿಮೆಯಾಗಲಿದೆ ಎಂದ ಡಿಡಿಪಿಐಗೆ ಸರಿಯಾಗಿ ಮೊಟ್ಟೆ ಹಂಚುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು. 1500 ಕೋಟಿ ಮೊಟ್ಟೆ ಖರೀದಿಗೆ ಅಜೀಂ ಪ್ರೇಮ್ ಜಿ ಪೌಂಡೇಷನ್ ನೀಡಿದೆ ಸರಿಯಾಗಿ ಬಳಸಿ ಎಂದು ತಿಳಿಸಿದರು.
ಭದ್ರಾವತಿ ಮತ್ತು ತೀರ್ಥಹಳ್ಳಿ MCH 100 ಬೆಡ್ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಆಗಿದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆ ಆಗಬೇಕಿದೆ ಎಂದು ಡಿಹೆಚ್ ಒಗಳು ಸಭೆಗೆ ತಿಳಿಸಿದರು.
School children should not touch eggs during Shravan - what did DDPI say?