SUDDILIVE || SHIVAMOGGA
ಹಿಂದುತ್ವ ಉಳಿಸಲು ಸಿಟಿ ರವಿ ತಮ್ಮ ಮಕ್ಕಳನ್ನ ಬಳಸಿಕೊಳ್ಳಲಿ-ದೇವೇಂದ್ರಪ್ಪ ಸಲಹೆ-Devendrappa suggests that C.T. Ravi should use his children to save Hindutva
ಹಿರಿಯ ಕಾಂಗ್ರೆಸ್ ಮುಖಂಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟ ಎಂಎಲ್ ಸಿ ಸಿಟಿ ರವಿಗೆ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ. ಸಿಟಿ ರವಿ ನಾಲಿಗೆಯನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಂಗಳೂರಿನ ಮಾಜಿ ಶಾಸಕ ಹಾಲಿ ವಿಧಾನ ಪರಿಷತ್ ರವಿ ಅವರು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ನಡೆ ದಂತಹ ಅಹಿತಕರ ಘಟನೆ ನಂತರ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಹಿಂದುಗಳ ವಿಚಾರಕ್ಕೆ ಬಂದರೆ ಕೈ ಕಾಲು ಕಡಿಯುತ್ತೇವೆ ಎಂದು ಹೇಳಿಕೆ ಕೊಟ್ಟ ನೀವು ಅಮಾಯಕ ಹಿಂದೂ ಯುವಕರ ಮಾನಸಿಕತೆಯಿಂದ ತಪ್ಪು ದಾರಿ ಹಿಡಿಯುವಂತಹ ಕೆಲಸಕೆ ನೀವೇ ಕಾರಣರಾಗಿದ್ದಿರಿ ಇದನ್ನು ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ಸಿಟಿ ರವಿ ಅವರಿಗೆ ಈ ರೀತಿ ಹೇಳಿಕೆ ಕೊಡುವುದು ತಪ್ಪು ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಅಳ ನೋಡುವ ಬದಲು ಮೊದಲು ನಿಮ್ಮ ಮಕ್ಕಳನ್ನು ಹಿಂದುತ್ವ ಕಾಪಡಲು ಬಳಸಿಕೊಳ್ಳಲಿ ಎಂದು ಹೇಳುವ ಮೂಲಕ ಸಿಟಿ ರವಿ ಅವರಿಗೆ ಸಲಹೆ ನೀಡಿದ್ದಾರೆ.
ಆದರೆ ಇದನ್ನು ಸಿಟಿ ರವಿ ತಪ್ಪು ಅರ್ಥ ಮಾಡಿಕೊಂಡು ಕಾಂಗ್ರೆಸ್ ಮುಖಂಡರಿಗೆ ಮನಸ್ಸಿಗೆ ಬಂದಂತೆ ಅಶ್ಲೀಲ ವಾದಂತಹ ಪದ ಬಳಸುತ್ತಿದ್ದು ಸಿಟಿ ರವಿಯವರು ತನ್ನ ನಾಲಿಗೆಯ ಮೇಲೆ ಇಟ್ಟುಕೊಂಡು ಮಾತನಾಡಿದರೆ ನಿಮಗೂ ಒಳ್ಳೆಯದು ಹಾಗೂ ನಿಮ್ಮ ಪಕ್ಷಕ್ಕೂ ಒಳ್ಳೆಯದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಎಚ್ಚರಿಸುತ್ತದೆ ಎಂದು ದೇವೇಂದ್ರಪ್ಪ ಹೇಳಿದ್ದಾರೆ.
ಸಿಟಿ ರವಿ ಅವರಿಗೆ ಮಾತನಾಡುವ ಬಾಯಿಚಪಲ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀವಿಜಯೇಂದ್ರರವರು ಮಾತನಾಡುತ್ತಿದ್ದಾರೆ ಅವರು ಹೈಲೈಟ್ ಆಗುತ್ತಿದ್ದಾರೆ. ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡುತ್ತಿದ್ದಾರೆ ವಿಜಯಪುರ ಶಾಸಕ ಯತ್ನಾಲ್ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮಾತನಾಡುತ್ತಿದ್ದಾರೆ. ಅದೇ ರೀತಿ ನಾನು ಮಾತನಾಡಬೇಕು ಎಂಬ ಬಾಯಿ ಚಪಲದಿಂದ ಕಾಂಗ್ರೆಸ್ ಹಿರಿಯ ನಾಯಕರ ಬಗ್ಗೆ ಮಾತನಾಡಿದರೆ ಪ್ರಚಾರ ಪಡೆಯಲು ಹೆಚ್ಚು ಪ್ರಚೋದನಕಾರಿ ಹೇಳಿಕೆ ನೀಡಿದರೆ ನನ್ನ ಹೇಳಿಕೆ ಮುಂಚೂಣಿಯಲ್ಲಿರುತ್ತದೆ ದುರಾಲೋಚನೆಯಿಂದ ಸಿಟಿ ರವಿ ಅವರು ತನ್ನ ನಾಲಿಗೆಯಿಂದ ಮನಸ್ಸು ಇಚ್ಛೆ ಮಾತನಾಡುತ್ತಿದ್ದಾರೆ.
ಸಿಟಿ ರವಿ ಅವರು ತಮ್ಮ ಇಬ್ಬರು ಮಕ್ಕಳನ್ನು ಹಿಂದುತ್ವಕ್ಕಾಗಿ ಬಳಸಿಕೊಳ್ಳಲಿ. ಆ ಮಕ್ಕಳನ್ನು ಹಿಂದುತ್ವ ಉಳಿಸಲು ತಯಾರು ಮಾಡಿ ಯುದ್ಧಕ್ಕೆ ಬಿಡಿ. ನಿಮ್ಮಿಂದಲೇ ಈ ಕೆಲಸ ಪ್ರಾರಂಭವಾಗಲಿ ಯಾರ ಕೈ ಕಾಲು ಕಡಿಯುತ್ತೀರಿ ತಲೆ ಕಡಿಯುತ್ತೀರಿ ನೋಡೋಣ. ನೀವು ನಿಮ್ಮ ಮಕ್ಕಳು ಎಷ್ಟು ಯುದ್ಧ ಮಾಡುತ್ತೀರಿ ಎಂದು ಕಾದು ನೋಡುತ್ತೇವೆ ಕೂಡಲೇ ಮಕ್ಕಳನ್ನು ವಿದೇಶದಿಂದ ಕರೆತಂದು ಅವರನ್ನ ಹಿಂದುತ್ವಕ್ಕಾಗಿ ಬಳಸಿಕೊಳ್ಳಿ ಎಂದು ದೇವೇಂದ್ರಪ್ಪ ಸಲಹೆ ನೀಡಿದ್ದಾರೆ.
ಇದು ನಮ್ಮ ಕಿವಿಮಾತು. ಎಂಎಲ್ ಸಿ ಅವರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಿಸಿ ಇಲ್ಲಿ ಬೇರೆಯವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡುವ ಪ್ರವೃತ್ತಿ ಅವರಿಗೆ ಹಿಂದಿನಿಂದಲೂ ಬಂದಿದೆ. ಹಾಗಾಗಿ ಹಿಂದುತ್ವ ಉಳಿಸಲು ತಮ್ಮ ಮಕ್ಕಳನ್ನೇ ಬಳಸಿಕೊಂಡು ಹೋರಾಡಿ ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಪಾಕಿಸ್ತಾನದ ಜೊತೆ ಆಟ ಆಡುವ ನಿಮ್ಮಂತ ಗೋಸುಂಬೆ ರಾಜಕೀಯ ಪಕ್ಷಕ್ಕೂ ಕೇಂದ್ರ ಸರ್ಕಾರದ ಇಬ್ಬರ ನೀತಿ ದೇಶದ ಜನರಿಗೆ ಅರ್ಥವಾಗುತ್ತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಳಾರ್ಗೆ ಅವಹೇನಕರವಾಗಿ ಮಾತನಾಡಿ ಸರಿಯಾದ ತಕ್ಕ ಶಾಸ್ತಿ ಮಾಡಿಕೊಂಡಿದ್ದೀರಿ ಜ್ಞಾಪಕವಿರಲಿ ಅಂತಹ ಘಟನೆಗಳನ್ನು ಮತ್ತೆ ಮತ್ತೆ ಮರುಕಳಿಸದಿರಲಿ ಎಂದು ತಿಳಿಸಲು ವಿಷಾಧಿಸುತ್ತೇವೆ ಎಂದು ಎಚ್ಚರಿಸಿದರು.
Devendrappa suggests that C.T. Ravi should use his children to save Hindutva