SUDDILIVE || SHIVAMOGGA
ಭ್ರಷ್ಠರ ವಿರುದ್ಧ ಕ್ರಮಕೈಗೊಳ್ಳದ ಶಿವಮೊಗ್ಗ ಸಿಇಒಗೆ ಸನ್ಮಾನ-Shivamogga CEO felicitated for failing to take action against corrupt officials
ಭ್ರಷ್ಠಾಚಾರದ ಆರೋಪವಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸಿಇಒ ಹೇಮಂತ್ ಅವರನ್ನ ಸನ್ಮಾನಿಸಲಾಗುತ್ತಿದೆ ಎಂದು ಕೆಆರ್ ಎಸ್ ಪಕ್ಷದ ಮಂಜುನಾಥ ಹಿರೇಚೌಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊರಬ ಹುರಳಿ ಗ್ರಾಮದಲ್ಲಿ ಮನರೇಗಾದಲ್ಲಿ ಕಮಿಷನ್ ಕೊಡಬೇಕು ಎಂದು ದೂರು ಬಂದ್ವು, ನಮ್ಮ ಪಕ್ಷ ಸೋಶಿಯಲ್ ಆಡಿಟ್ ಮಾಡುದ್ವಿ, ಗುರುನಾಥ ಎಂಬ ಅಲ್ಲಿನ ಅಧಿಕಾರಿ ಹಣ ಕಲೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿತ್ತು ಅದರ ಬಗ್ಗೆ ಮೆನರೆಗಾ ಒಂಬಡ್ಸ್ ಮನ್ ಗೆ ದೂರು ನೀಡಲಾಗಿತ್ತು. ಒಂಬಡ್ಸ್ ಮನ್ ಅವರು ಮನೆಗಳಿಗೆ ಭೇಟಿ ನೀಡಿದ್ದರು.
ಗುರುನಾಥ್ ಪತ್ನಿಯ ಹೆಸರಿನಲ್ಲಿ ನಕಲಿ ಜಾಬ್ ಕಾರ್ಸ್ ಹೊಂದಿದ್ದು, ಖಾತೆ ಸೃಷ್ಠಿಸಿ ಹಣ ಸಂದಾಯ ಮಾಡುತ್ತಿದ್ದರು. 71 ಸಾವಿರ ಕೊಡಲು ಗುರುನಾಥ್ ಮತ್ತು ಪಿಡಿಒ ಮಂಜುನಾಥ್ ಕೊಡಬೇಕು ಎಂದು ಒಂಬಡ್ಸ್ ಮನ್ ವರದಿ ನೀಡಿದ್ದರು. ಇದನ್ನ ಅಪೀಲ್ ಹೋಗಿದ್ದಾರೆ ಎಂದು ತಿಳಿಸಿದರು.
ಮುಡಿದೋಡಿಕೊಪ್ಪಗೆ ಗುರುನಾಥ್ ವರ್ಗಾವಣೆ ಆಗಿದೆ. ವರ್ಗಾವಣೆ ಮಾಡಿರುವ ಸಿಇಒ ಕ್ರಮಕೈಗೊಳ್ಳದೆ ವರ್ಗಾವಣೆ ಮಾಡಿದ್ದು, ಸಿಇಒ ವಿರುದ್ಧವೇ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಈಗ ಲೋಕಾಯುಕ್ತ ದೂರು ನೀಡಲಾಗಿದೆ. ಶೀಘ್ರದಲ್ಲಿಯೇ ಸಿಇಒಗೆ ಸನ್ಮಾನ ಕಾರ್ಯಕ್ರಮ ಮಾಡುವ ಮೂಲಕ ಪ್ರತಿಭಟಿಸಲಾಗುವುದು ಎಂದರು.
Shivamogga CEO felicitated
