ರೈತ ಸಂಘದಿಂದ ಭದ್ರೆಗೆ ಬಾಗಿನ- Bagina From the Farmers' Association to Bhadre

 SUDDILIVE || SHIVAMOGGA

ರೈತ ಸಂಘದಿಂದ ಭದ್ರೆಗೆ ಬಾಗಿನ-Bagina From the Farmers' Association to Bhadre

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹೆಚ್‌.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರು ಭದ್ರಾ ನದಿಗೆ ಭಾನುವಾರ ಬಾಗಿನ ಅರ್ಪಿಸಿದರು. 

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹಿಟ್ಟೂರು ರಾಜು, ಪ್ರಮುಖರಾದ ಟಿ.ಎಂ. ಚಂದ್ರಪ್ಪ, ಮುನಿಯಪ್ಪ, ಚಿಕ್ಕಬ್ಬಿಗೆರೆ ನಾಗರಾಜ್, ಭಾಗ್ಯಾ ರಾಘವೇಂದ್ರ, ಮರುಳಸಿದ್ದಯ್ಯ, ಮಲ್ಲಿಕಾರ್ಜುನ, ಕುಮಾರಯ್ಯ, ಪುಷ್ಪಾ, ಕೆ. ರಾಘವೇಂದ್ರ, ಹುಲಿಮಟ್ಟಿ ಜಯಣ್ಣ, ಪಿ.ಶೇಖರಪ್ಪ, ಎಂ.ಡಿ. ನಾಗರಾಜ್, ಜಿ.ಎನ್. ಪಂಚಾಕ್ಷರಿ, ಉಪಾಧ್ಯಕ್ಷ ಬಿ.ಆರ್.ಪಿ ಹಾಲಪ್ಪ, ರಾಜಶೇಖರ್, ಅಕ್ಕಿ ರಾಜು, ಮೂರ್ತಿ ಭಾಗವಹಿಸಿದ್ದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಮಾತನಾಡಿ ಉತ್ತಮ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಈ ವರ್ಷವೂ ಬೇಸಿಗೆ ಬೆಳೆ ಬೆಳೆಯಲು ರೈತರು ಆತಂಕಪಡುವ ಅಗತ್ಯವಿಲ್ಲ.

ನೀರನ್ನು ಸದ್ಬಳಕೆ ಮಾಡಿಕೊಂಡು ಅಚ್ಚುಕಟ್ಟು ಭಾಗದ ಕೊನೆ ಭಾಗದ ರೈತರಿಗೂ ನೆರವಾಗಬೇಕು. ಎರಡೂವರೆ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಅಡಿಕೆ, ತೆಂಗು, ಭತ್ತ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಭದ್ರಾ ಅಚ್ಚಕಟ್ಟು ವ್ಯಾಪ್ತಿಯ ನಾಲಾ, ಗೇಟ್‌ಗಳ ದುರಸ್ತಿ ಮಾಡದೇ ನೀರು ವ್ಯರ್ಥವಾಗುತ್ತಿದೆ. ಈ ನೀರನ್ನು ತಡೆಯಲು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದರು‌.

Bagina From the Farmers' Association to Bhadre

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close