SUDDILIVE || SHIVAMOGGA
ಬಜಾರ್ ನ ಮಹಾದ್ವಾರದಲ್ಲಿ ಪ್ರತಿಷ್ಠಾಪನೆಗೊಂಡ ಪ್ರತಿಮೆ-Statue installed at the main gate of the bazaar
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸೆ.6 ರಂದು ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ನಗರವನ್ನ ಕೇಸರಿಯ ಬಂಟಿಂಗ್ಸ್ ನಿಂದ ಅಲಂಕಾರಿಸಲಾಗಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜಾರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರದ ಪ್ರತಿಮೆ ಸ್ಥಾಪಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನವಾದ ಮಹಾದ್ವಾರ ನಿರ್ಮಿಸಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕತೆಯನ್ನು ಈ ಬಾರಿಯ ಮಹಾದ್ವಾರ ಸ್ಥಾಪಿಸಲಾಗಿದೆ.
ಒಂದೆಡೆ ದೇವತೆಗಳು, ಮತ್ತೊಂದೆಡೆ ರಾಕ್ಷಕರು, ಸಮುದ್ರವನ್ನು ಕಡೆಯಲು ಬಳಸಿದ್ದ ಹಾವು, ಈಶ್ವರನು ವಿಷ ಕುಡಿದು ನೀಲಕಂಠನಾದದ್ದನ್ನು ಮಹಾದ್ವಾರದಲ್ಲಿ ರೂಪಿಸಲಾಗಿದೆ.
ಜೀವನ್ ಕಲಾಕೇಂದ್ರದ ಕಲಾವಿದರು ಮಹಾದ್ವಾರ ನಿರ್ಮಿಸಿದ್ದಾರೆ. ಕಳೆದ ರಾತ್ರಿ ಮಹಾದ್ವಾರ ಸ್ಥಾಪಿಸಲಾಗಿದೆ. ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಜನರು ಗಾಂಧಿ ಬಜಾರ್ ಮುಂಭಾಗ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
Statue installed at the main gate of the bazaar
