ಗ್ರಹಣ ಕಾಲದಲ್ಲೂ ಶಿವಮೊಗ್ಗದ ಕೆಲ ದೇವಸ್ಥಾನದ ಬಾಗಿಲುಗಳು ತೆರೆಯಲಿವೆ- The doors of some temples in Shivamogga will be open even during the eclipse

SUDDILIVE || SHIVAMOGGA

ಗ್ರಹಣ ಕಾಲದಲ್ಲೂ ಶಿವಮೊಗ್ಗದ ಕೆಲ ದೇವಸ್ಥಾನದ ಬಾಗಿಲುಗಳು ತೆರೆಯಲಿವೆ-The doors of some temples in Shivamogga will be open even during the eclipse.

Eclipse, temple


ಗ್ರಹಣದ ಹಿನ್ನಲೆಯಲ್ಲಿ ಇಂದು ಶಿವಮೊಗ್ಗದ ಎಲ್ಲಾ ದೇವಸ್ಥಾನಗಳು ಬಂದ್ ಆಗಲಿವೆ. ಆದರೆ ಕೆಲ ದೇವಸ್ಥಾನಗಳ ಬಾಗಿಲು ಸಂಜೆಯ ನಂತರ ತೆರೆಯಲಾಗುತ್ತಿದೆ. 

ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಇಂದು ರಾತ್ರಿ 9 ಗಂಟೆಯ ವರೆಗೆ ದೇವಿಯ ದರ್ಶನಕ್ಕೆ ಅವಕಾಶ ನಿಡಲಾಗಿದೆ. 9-50 ರ ನಂತರ ದೇವಿಗೆ ಅಭಿಷೇಕ ಹಮ್ಮಿಕೊಳ್ಳಲಾಗಿದೆ. ತಡರಾತ್ರಿ 1-50 ರ ವರೆಗೆ ಈ ಅಭಿಷೇಕ ನಡೆಯಲಿದ್ದು ನಂತರ ಶುದ್ದೀಕರಣ ನಡೆಯಲಿದೆ.

ಮರುದಿನ ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದೆ. ಅದರಂತೆ ರವೀಂದ  ನಗರ ಗಣಪತಿ ದೇವಸ್ಥಾನದಲ್ಲಿ ಸಂಜೆಯಿಂದಲೇ ದೇವರ ದರ್ಶನ ಆರಂಭವಾಗಲಿದೆ. ರಾತ್ರಿ 9 ಗಂಟೆಯ ವರೆಗೆ ದರ್ಶನ ನಡೆಯಲಿದ್ದು ನಂತರ ಗ್ರಹಣ ಪ್ರಯುಕ್ತ ವಿವಿಧಕಾರ್ಯಕ್ರಮಗಳು ನಡೆಯಲಿದೆ 

ತಡರಾತ್ರಿ 1-50 ದವರೆಗೆ ಗ್ರಹಣ ಪೂಜೆ ಪುನಸ್ಕಾರಗಳು ಜರುಗಲಿದ್ದು ನಾಳೆ ಬೆಳಗ್ಗಿನ‌ಜಾವ ದೇವಸ್ಥಾನದ ಬಾಗಿಲುಗಳು ತೆರಯಲಿದೆ. ಹೀಗೆ ಕೆಲ ದೇವಸ್ಥಾನಗಳಲ್ಲಿ ಗ್ತಹಣ ಪೂಜೆಗಳಲ್ಲಿ ನಡೆಯಲಿದೆ. ಇನ್ನೂ ಕೋಟೆ ಆಂಜನೇಯ ಸ್ವಾಮಿ ಮತ್ತು ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ಗ್ರಹಣಕಾಲದಲ್ಲಿ ಬಾಗಿಲು ತೆರಯಲಿವೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

The doors of some temples in Shivamogga will be open even during the eclipse.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close