SUDDILIVE ||SHIVAMOGGA
ಬೆಳಗಿನ ಜಾವ ಸುಮಾರು 3-50 ಕ್ಕೆ ಗಣಪನ ವಿಸರ್ಜನೆ-Ganapathi immersion took place at around 3:50 in the morning
ಶಿವಮೊಗ್ಗದ 81 ನೇ ಹಿಂದೂ ಮಹಾಮಂಡಳಿಯ ಗಣಪತಿ ರಾಜಬೀದಿ ಉತ್ಸವ ಕೊನೆಗೊಂಡಿದೆ. ಇಂದು ಬೆಳಗ್ಗಿನ ಜಾವ ಸುಮಾರು 3-50 ರ ಸಮಯದಲ್ಲಿ ತುಂಗ ನದಿಯ ಭೀಮನ ಮಡುವಿನಲ್ಲಿ ಗಣಪನ ಮಹಾಮಜ್ಜನ ನಡೆದಿದೆ.
ನಿನ್ನೆ ಅನಂತ ಚತುರ್ಥಿ ಹಿನ್ನಲೆಯಲ್ಲಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ನಡೆದಿದೆ. ನಗರದ ಪ್ರಮುಖ ಬೀದಿಯಲ್ಲಿ ಗಣಪನ ರಾಜಬೀದಿ ಉತ್ಸವ ನಡೆದಿದೆ. ನಿನ್ನೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕೋಟೆ ಭೀಮೇಶ್ವರ ದೇವಸ್ಥಾನದಿಂದ ಹೊರಟ ಗಣಪನ ಮೆರವಣಿಗೆ ಕೋಟೆ ಮಾರಿಕಾಂಬ, ರಾಮಣ್ಣ ಶ್ರೇಷ್ಠಿ ಪಾರ್ಕ್
ಗಾಂಧಿ ಬಜಾರ್, ಎಎ ವೃತ್ತ, ನೆಹರೂ ವೃತ್ತ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ವೃತ್ತ, ಕುವೆಂಪು ರಸ್ತೆ, ವೀರ ಶಿವಮೂರ್ತಿ ವೃತ್ತ, ಸವಳಂಗ ರಸ್ತೆ, ಮಹಾವೀರ ರಸ್ತೆ, ಡಿವಿಎಸ್ ವೃತ್ತ, ಕಾನ್ವೆಂಟ್ ರಸ್ತೆ, ಬಿಹೆಚ್ ರಸ್ತೆ, ಕೋಟೆ ದುರ್ಗಮ್ಮನ ದೇವಸ್ಥಾನ ರಸ್ತೆ, ಆಂಜನೇಯ ಸ್ವಾಮಿ ರಸ್ತೆ ಪಕ್ಕದ ರಸ್ತೆಯ ಭೀಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ತುಂಗ ನದಿಗೆ ಗಣಪತಿ ಮೂರ್ತಿಯನ್ನ ವಿಸರ್ಜಿಸಲಾಗಿದೆ.
ಹೀಗೆ ಸಡಗರ, ಸಂಭ್ರಮ, ಭಾರಿ ಜನಸ್ತೋಮದ ನಡುವೆ ಹೊರಟ ಗಣಪನ ಮಹಾಮಜ್ಜನ ಅಂತ್ಯಗೊಂಡಿದೆ. ಖುದ್ದು ಶಾಸಕ ಚೆನ್ನಬಸಪ್ಪನವರು ಗಣಪತಿ ಮಹಾಮಜ್ಜನ ಅಂತ್ಯದವರೆಗೂ ಹಾಜರಿದ್ದಿದ್ದು, ಗಣಪನ ವಿಸರ್ಜನಾ ಕಾರಗಯದಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು.
Ganapathi immersion took place at around 3:50 in the morning
