SUDDILIVE || SHIVAMOGGA
ಸಡಗರ ಮತ್ತು ಸಂಭ್ರಮದ ಆಯುಧ ಪೂಜೆ- Weapon worship with pomp and celebration
![]() |
| ಮಹಾನಗರ ಪಾಲಿಕೆಯಲ್ಲಿ ಆಯುಧಪೂಜೆ ನಿಮಿತ್ತ ಹೂವಿನ ಅಲಂಕೃತಗೊಂಡ ವಾಹನಗಳು, ಆಯುಕ್ತ ಮಾಯಣ್ಣಗೌಡ ಮತ್ತು ಸಿಬ್ಬಂದಿಗಳೊಂದಿಗೆ ನಿಂತಿರುವ ಫೊಟೊ |
ಶಿವಮೊಗ್ಗದಲ್ಲಿ ದಸರಾ ಹಬ್ಬದ 9ನೇ ದಿನವಾದ ಆಯುಧ ಪೂಜೆ ದಿನದಂದು ನಗರದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಾಹನಗಳು ಅಲಂಕೃತಗೊಂಡು ಪೂಜೆ ಗೊಂಡಿವೆ.
ಜಿಲ್ಲಾಧಿಕಾರಿಗಳ ಕಚೇರಿ ಶಿವಮೊಗ್ಗದ ಒಂಬತ್ತು ಪೊಲೀಸ್ ಠಾಣೆಗಳು, ಜಿಲ್ಲಾ ಪಂ ಮಹಾನಗರ ಪಾಲಿಕೆ ಮೊದಲಾದ ಸರ್ಕಾರಿ ಕಚೇರಿಗಳಲ್ಲಿ ವಾಹನಗಳನ್ನು ಅಲಂಕ ಹೂವಿನಿಂದ ಅಲಂಕೃತಗೊಳಿಸಿ ಪೂಜೆಗೊಳಿಸಲಾಗಿದೆ.
ಮಹಾನಗರ ಪಾಲಿಕೆಯಲ್ಲಿ ಆಯುಕ್ತ ಮಾಯಣ್ಣ ಗೌಡ ಮತ್ತು ಅವರ ಸಿಬ್ಬಂದಿಗಳಿಂದ ಚಾಮುಂಡಿ ತಾಯಿಗೆ ಪೂಜಿಸಲಾಗಿದೆ. ನಂತರ ಪಾಲಿಕೆಯ ಕಸ ತೆಗೆಯುವ ವಾಹನ, ಅಧಿಕಾರಿಗಳು ಸಂಚರಿಸಲು ಬಳಸುವ ಕಾರುಗಳು ಹೀಗೆ ಹಲವಾರು ಸರ್ಕಾರಿ ವಾಹನಗಳನ್ನ ಪೂಜಿಸಲಾಗಿದೆ.
![]() |
| ತುಂಗನಗರ ಪೊಲೀಸ್ ಠಾಣೆಯಲ್ಲಿ ಚಾಮುಂಡಿ ದೇವಿಗೆ ಹೂವಿನ ಅಲಂಕಾರ |
ಹಾಗೆ ನಗರದಲ್ಲಿರುವ ಪೊಲೀಸ್ ಠಾಣೆಯಲ್ಲಿ ಗನ್, ಕೋವಿಗಳನ್ನ ಇಟ್ಟು ಪೂಜಿಸಲಾಗಿದೆ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ಚಾಮುಂಡೇಶ್ವರಿ ಫೊಟೊವಿಟ್ಟು ಅದರ ಜೊತೆ ಪೊಲೀಸರ ಗನ್ ಗಳನ್ನ ಇಟ್ಟು ಹೂವಿನ ಅಲಂಕಾರ ಮಾಡಲಾಗಿದೆ. ವಾಹನಗಳಿಗೂ ಹೂವಿನ ಅಲಂಕಾರ ಮಾಡಿ ಪೂಜಿಸಲಾಗಿದೆ.
Weapon worship with pomp and celebration


