SUDDILIVE || SHIVAMOGGA
ಲೂಟಿ ಮಾಡುತ್ತಿರುವವರು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರೊಲ್ಲ-ಈಶ್ವರಪ್ಪ-Those who are looting will not come to power in the next election - Eshwarappa
ಧರ್ಮ ರಕ್ಷ ಜಾಥಾಕ್ಕೆ ಮಾಜಿ ಡಿಸಿಎಂ ಈಶ್ವರಪ್ಪನವರ ಮನೆಯಿಂದ ಚಾಲನೆ ದೊರೆತಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತರ ನಡೆಯುತ್ತಿರುವುದನ್ನ ಖಂಡಿಸಿ ಇಂದು ರಾಷ್ಟ್ರಭಕ್ತರ ಬಳಗದಿಂದ ಧರ್ಮಸ್ಥಳ ಚಲೋ ಜಾಥಾಕ್ಕೆ ಚಾಲನೆ ದೊರೆತಿದೆ.
ಇನ್ನೂರಕ್ಕೂ ಹೆಚ್ಚು ವಾಹನದಲ್ಲಿ ತರೀಕೆರೆ, ಕಡೂರು, ಚಿಕ್ಕಮಗಳೂರ ಮೂಲಕ ಧರ್ಮಸ್ಥಳಕ್ಕೆ ತೆರಳುವ ರಾಷ್ಟ್ರಭಕ್ತರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಇಂದು ರಾತ್ರಿಗೆ ವಾಪಾಸ್ ಶಿವಮೊಗ್ಗಕ್ಕೆ ಬರಲಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಅಯೋಧ್ಯ ರಾಮ ಮಂದಿರದಂತೆ ಇಂದು ಧರ್ಮಸ್ಥಳದ ಬಗ್ಗೆ ಚರ್ಚೆ ನಡೆಯುತ್ತಿದೆ. ಅಯೋಧ್ಯ ಮಂದಿರವನ್ನ ಬಾಬರ್ ಒಡೆದು ಹಾಕಿದ್ದ. ನಂತರದ ದಿನಗಳಲ್ಲಿ ಹಿಂದುಗಳ ಅಪೇಕ್ಷೆಯಂತೆ ದೇವಸ್ಥಾನ ಕೆಡವಿದ ಜಾಗದಲ್ಲಿಯೇ ಮಂದಿರ ನಿರ್ಮಾಣವಾಗಿದೆ. ಅದೇ ರೀತಿ ಖಾವಂದರರಿಗೆ ಮತ್ತು ಧರ್ಮಸ್ಥಳದ ಬಗ್ಗೆ ಕಳಂಕ ತರುವವರ ಉದ್ದೇಶದಿಂದ ಷಡ್ಯಂತರ ನಡೆದಿದೆ. ಧರ್ಮಸ್ಥಳ ಮತ್ತು ಖಾವಂದರ ಜೊತೆ ನಾವಿದ್ದೇವೆ ಎಂದು ಹೇಳಲು ನಾವು ಧರ್ಮಸ್ಥಳ ಚಲೋ ಜಾಥ ನಡೆಸುತ್ತಿರುವುದಾಗಿ ಹೇಳಿದರು.
ಧರ್ಮಸ್ಥಳಧಲ್ಲಿ ಷಡ್ಯಂತರ ನಡೆದಿದೆ. ಹೆಗಡೆ ಮತ್ತು ದೇವಸ್ಞಳಕ್ಕೆ ನ್ಯಾಯ ಸಿಗುತ್ತೆ. ಅಯೋದ್ಯ ದಲ್ಲಿ ರಾಮ ಮಂದಿರಕ್ಕೆ ಸಿಕ್ಕ ನ್ಯಾಯದಂತೆ ಧರ್ಮಸ್ಥಳದಲ್ಲಿ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಅನ್ಯಾಯವಾಗಲು ಬಿಡಲ್ಲ ಎಂದರು.
ಈ ಪ್ರಕರಣದಲ್ಲಿ ದೇಶ ವಿದೇಶದಿಂದ ಹಣ ಬಂದಿದೆ ಎಂಬ ಅನುಮಾನವಿದೆ. ಭಾರತ ವಿರೋಧಿಗಳು ಈ ಪ್ರಕರಣದಲ್ಲಿ ಹಣ ಹರಿಸಿರುವ ಶಂಕೆಯಿರುವುದರಿಂದ ಪ್ರಕರಣವನ್ನ ಎನ್ಐಎಗೆ ಒಪ್ಪಿಸಬೇಕು ಎಂಬುದು ನಮ್ಮಒತ್ತಾಯವಾಗಿದೆ. ಈ ಹಿನ್ನಲೆಯಲ್ಲಿ ನಾವು ಮೂರು ನಾಲ್ಕು ಟಿಟಿಗಳಲ್ಲಿ, 224 ಕ್ಕೂ ಹೆಚ್ಚಿನ ಕಾರಿನಲ್ಲಿ ಕನಿಷ್ಠ 600 ಜನ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರ ಭ್ರಷ್ಠಾಚಾರದಲ್ಲಿ ಮುಳುಗಿದೆ ವಾಲ್ಮೀಕಿ ಹಗರಣ ನಡೆಸಿ ಅಧಿಕಾರಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮಗನಿಗೆ ಕೆಲಸ ಕೊಡಿಸಲು ನಾವೆಲ್ಲರೂ ಹೋರಾಟ ನಡೆಸಿದ ಪರಿಣಾಮ ಇಂದು ಆತನಿಗೆ ಕೆಲಸ ಸಿಕ್ಕಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ಹಣದ ಅವ್ಯವಹಾರಹಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ನನ್ನ ತಪ್ಪಿಲ್ಲ ಎಂದು ಅಧ್ಯಕ್ಷರು ಹೇಳುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.
ಗುತ್ತಿಗೆ ಸಂಘದ ಅಧ್ಯಕ್ಷರು ರಾಜ್ಯ ಸರ್ಕಾರದ ಭ್ರಷ್ಠಾಚಾರದ ಬಗ್ಗೆ ಹೇಳಿದ್ದರು. ಮುಖ್ಯಮಂತ್ರಿ ಮತ್ತು ಡಿಸಿಎಂಗೆ ಈ ಆರೋಪಗಳ ಬಗ್ಗೆ ಗಮನ ಇಲ್ಲದಂತೆ ನಟಿಸುತ್ತಿದ್ದಾರೆ. ಎಷ್ಟು ದಿನವಾಗುತ್ತೆ ಅಷ್ಟುದಿನ ಲೂಟಿ ಮಾಡಲು ನಿಂತಿದ್ದಾರೆ. ನಂತರದ ಚುನಾವಣೆಯಲ್ಲಿ ಇವರು ಮತ್ತೆ ಅಧಿಕಾರಕ್ಕೆ ಬರೋದಿಲ್ಲ ಎಂದರು.
Those who are looting will not come to power