ad

ಸಂಸದರಿಗೆ ನಾಚಿಕೆ ಆಗಬೇಕು, ಭೋವಿ ನಿಗಮದ ಅಧ್ಯಕ್ಷರ ರಾಜೀನಾಮೆ ವಿಚಾರ ಸಿಎಂಗೆ ಬಿಟ್ಟಿದ್ದು-ಸಚಿವ ಮಧು ಬಂಗಾರಪ್ಪ-The MPs should be ashamed

 SUDDILIVE || SHIVAMOGGA

ಸಂಸದರಿಗೆ ನಾಚಿಕೆ ಆಗಬೇಕು, ಭೋವಿ ನಿಗಮದ ಅಧ್ಯಕ್ಷರ ರಾಜೀನಾಮೆ ವಿಚಾರ ಸಿಎಂಗೆ ಬಿಟ್ಟಿದ್ದು-ಸಚಿವ ಮಧು ಬಂಗಾರಪ್ಪ-The MPs should be ashamed, the resignation of the Bhovi Corporation chairman is up to the CM - Minister Madhu Bangarappa

Mp, Madhu Bangarappa


ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ರಾಜಿನಾಮೆ ವಿಚಾರ, ಖೇಲೋ ಇಂಡಿಯಾ, ಮಳೆಹಾನಿ, ಧರ್ಮಸ್ಥಳದ ಕುರಿತು ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. 

ಇಂದು ತಮ್ಮ‌ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೊದಲಿಗೆ ಜಿಲ್ಲೆಯಲ್ಲಿ ಸುರಿದ ಮಳೆ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದೆನೆ. ಅಡಿಕೆ ಮತ್ತು ಜೋಳ ಬೆಳೆದ ರೈತರಿಗೆ ಸಹಕಾರ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೆನೆ ಎಂದರು. 

45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಿಕೆ ಬೆಳೆಗೆ ಹಾನಿಯಾಗಿದೆ. ಈ ಬಗ್ಗೆ ಕೃಷಿ ವಿವಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದ್ದೆನೆ. ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಳ್ಳಲಾಗಿದೆ. ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರದ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೆನೆ ಎಂದರು. 

ಕೋಕೋನಟ್ ಬೋರ್ಡ್ ಮಾದರಿಯಲ್ಲಿ ಹೆಕ್ಟೇರ್ ಗೆ 1 ವರೆ ಸಾವಿರ ರೂ. ಪರಿಹಾರ ನೀಡಲು ಯೋಜಿಸಲಾಗಿದೆ. ಆದರೆ ಈ ಸಹಾಯಧನ ಹೆಚ್ಚಿಸಿ ನೀಡುವಂತೆ ಪತ್ರ ಬರೆಯಲಿದ್ದೆನೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಗತಿ ಪಥ ಎಂಬ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು. 

ರಸ್ತೆ ರಿಪೇರಿಗೆ 50 ಕೋಟಿ

ಜಿಲ್ಲೆಯಲ್ಲಿ ಬಹಳಷ್ಟು ರಸ್ತೆಗಳು ಹಾಳಾಗಿವೆ.ಇದಕ್ಕಾಗಿ 50 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ಒಪ್ಪಿದೆ. ಕ್ರಿಯಾಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಲಾಗಿದೆ ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದೆ ಎಂದರು. 

800 ಕೆ.ಪಿ.ಎಸ್.ಸಿ‌. ಶಾಲೆ ಆರಂಭಕ್ಕೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆಯಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆಗಳ ಆರಂಭಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿಗಳಿಗೆ ಕರೆದು ಶಿವಮೊಗ್ಗದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸಲು ಯೋಜಿಸಿದ್ದೆವೆ. 

3-4 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಕರೆಸಿ ಈ ಕಾರ್ಯಕ್ರಮ ನಡೆಸಲು ಯೋಜಿಸಲಾಗುತ್ತಿದೆ ಎಂದ ಅವರು ಖೇಲೋ ಇಂಡಿಯಾ ಮೂಲಕ ಜನರನ್ನು ಸಂಸದರು ಮಂಗ ಮಾಡುತ್ತಿದ್ದಾರೆ. ಕಸ ನಿಮ್ಮದು, ಪೊರಕೆ ನಿಮ್ಮದು ಆದರೆ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಅವರದ್ದು ಎಂಬಂತಾಗಿದೆ ಎಂದರು. 

ಹಣ ನಮ್ಮದು ಕಾರ್ಯಕ್ರಮ ಕೇಂದ್ರದ್ದು

ಇದೂ ಸಹ ಕೂಡ ಹಾಗೆಯೇ ಆಗಿದೆ. ಮಕ್ಕಳು ನಿಮ್ಮದು, ಶಾಲೆಗೆ ಹಣ ನಿಮ್ಮದು ಆದ್ರೆ ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆ ಅವರದ್ದಾಗಿದೆ. ಅದೇರೀತಿ ಖೇಲೋ ಇಂಡಿಯಾ ಕೂಡ ಹಾಗೆಯೇ ಆಗಿದೆ. ಇದನ್ನು ಇಟ್ಟುಕೊಂಡು ಸಂಸದ ರಾಘವೇಂದ್ರ ಫೋಸ್ ಕೊಡುತ್ತಿದ್ದಾರೆ. 

ಬಿಜೆಪಿಯವರ ಡೋಂಗಿತನ ಜನರು ನೋಡುತ್ತಿದ್ದಾರೆ. ರಾಹುಲ್ ಗಾಂಧಿ ತನ್ನ ಅಜ್ಜಿಯನ್ನು ಕಳೆದುಕೊಂಡರು. ರಾಹುಲ್ ಗಾಂಧಿಯಂತಹ ವಿಚಾರವಂತನನ್ನು ಪಪ್ಪು ಎಂದು ಬಿಜೆಪಿಯವರು ಜರಿಯುತ್ತಾರೆ.ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ಪಲ್ಟಿ ಹೊಡೆಯುತ್ತಾರೆ. ಜನರು ಧರ್ಮಸ್ಥಳಕ್ಕೆ ಭಕ್ತಿಪೂರ್ವಕವಾಗಿ ತೆರಳುತ್ತಾರೆ. ಆದರೆ ಇದನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. 

ಸಂಸದರಿಗೆ ನಾಚಿಕೆ ಆಗಬೇಕು

ಧರ್ಮ, ಧರ್ಮ ಎಂದು ಹೇಳಿ ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾಚಿಕೆಯಾಗಲ್ವಾ ಇವರಿಗೆ !? ಮತದಾನ ಕಳ್ಳತನ ವಿಚಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡಿದ್ದೆ ಬಿಜೆಪಿ.ಇದರಿಂದ ನಾವು ಹಾಳಾಗೋದಿಲ್ಲ, ಅವರೇ ಹಾಳಾಗೋದು ಎಂದ ಸಚಿವರು ಕಲ್ಯಾಣ ಕರ್ನಾಟಕದ ವಿಚಾರದಲ್ಲಿ ಕಲ್ಯಾಣಕ್ಕೆ ಉಪನ್ಯಾಸಕರ ಕೊರತೆ ಎಂದು ಟೀಕೆ ಮಾನಾಚಿಕೆಯಾಗಬೇಕು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ವೈರಲ್ ಮಾಡಲು ನಿಮಗೆ ನಾಚಿಕೆಯಾಗಬೇಕು ಸಂಸದ ರಾಘವೇಂದ್ರ ವಿರುದ್ಧ ಕಿಡಿಕಾರಿದ ಸಚಿವ ಮಧು ಬಂಗಾರಪ್ಪ ಈ ರೀತಿ ಪೋಸ್ಟ್ ಗಳನ್ನು ಬಿಜೆಪಿಯವರು ಹಾಕಿಕೊಳ್ಳುತ್ತಾರೆ ನಾಚಿಕೆಯಾಗಬೇಕು ಎಂದರು. 

ಸಿಂಧೂರ್ ಬಗ್ಗೆ ಪಾಠದಲ್ಲಿ ಅಳವಡಿಸಬೇಕಂತೆ ಎಂದು ಬಿಜೆಪಿ ಆಗ್ರಹಿಸಿದೆ. ಈ ರೀತಿ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಸಿಂಧೂರ್ ಯಾಕೆ ಆಯ್ತು ಅನ್ನೋದನ್ನ ಇವರು ಹೇಳಬೇಕು. ಇಂತಹ ರಾಜಕೀಯ ಮಾಡುವುದಕ್ಕೆ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು. 


ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ರಾಜಿನಾಮೆ ವಿಚಾರ


ನಾನು ಅಧ್ಯಕ್ಷ ಭೋವಿ ನಿಮಗದ ಅಧ್ಯಕ್ಷ ರವಿಕುಮಾರ್ ಜೊತೆಗೆ ಘಟನೆ ಕುರಿತು ಮಾತನಾಡಿಲ್ಲ. ಆದರೆ ಕಾನೂನು ಗೆಲ್ಲಬೇಕು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಗಳು ಅವರ ಜೊತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಏನು ಮಾಡ್ತಾರೋ ತಿಳಿಯಬೇಕಿದೆ. ಇನ್ನೂ ಈ ಬಗ್ಗೆ ವಿಚಾರ ತಿಳಿದು ಮಾತನಾಡುತ್ತೆನೆ ಎಂದರು. 

ತನಿಖೆ ಬೇಗ ಮುಗಿಯಬೇಕು

ಸೌಜನ್ಯ ಪ್ರಕರಣ ಮರು ತನಿಖೆಗೆ ಸಿಎಂ ಸಿದ್ಧರಾಮಯ್ಯ ಆದೇಶಕ್ಕೆ ಚಿಂತನೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಏನೇ ತನಿಖೆಯಾದರೂ ಫಾಸ್ಟ್ ಆಗಬೇಕು ಬೇಗ ಮುಗಿಬೇಕು. ಸೌಜನ್ಯ ಪ್ರಕರಣ ತನಿಖೆಗೆ ಹತ್ತು ಹದಿನೈದು ವರ್ಷ ಹಿಡಿಯಬಾರದು. ತನಿಖೆ ಬೇಗ ಮುಗಿದು ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂಬುದೇ ನನ್ನ ಆಶಯ ಎಂದರು. 

ಧರ್ಮಸ್ಥಳದಲ್ಲಿ ಎಲ್ಲರೂ ಹೋಗಿ ಗೊಂದಲ ಆಗಬಾರದು. ತನಿಖೆಗಳು ಬೇಗ ಮುಗಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ತಿಳಿಸಿದರು. 

The MPs should be ashamed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close