ಇಂದು ಓಂ ಗಣಪತಿ ರಾಜಬೀದಿ ಉತ್ಸವ-Today is Om Ganapati Rajabeedi utsav

 SUDDILIVE || SHIVAMOGGA

ಇಂದು ಓಂ ಗಣಪತಿ ರಾಜಬೀದಿ ಉತ್ಸವ-Today is Om Ganapati Rajabeedi utsav


ಶಿವಮೊಗ್ಗದ ಪ್ರತಿಷ್ಠಿತ ಗಣಪತಿ ಮೆರವಣಿಗೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಓಂ ಗಣಪತಿಯ ರಾಜಬೀದಿ ಉತ್ಸವ ನಡೆಯಲಿದೆ. ಇದಕ್ಕಾಗಿ ಅಶೋಕ ರಸ್ತೆಯಲ್ಲಿ ಸಿದ್ದತೆಗಳು ನಡೆಯುತ್ತಿವೆ.  ಕಳೆದ ಬಾರಿ ತಹಶೀಲ್ದಾರ್ ಅವರಿಂದ ಚಾಲನೆ ದೊರೆತಿದ್ದ ರಾಜಬೀದಿ ಉತ್ಸವಕ್ಕೆ ಈ ಬಾರಿ ಶಾಸಕ ಚೆನ್ನಬಸಪ್ಪನವರಿಂದ ಚಾಲನೆ ದೊರೆಯುವ ಸಾಧ್ಯತೆಯಿದೆ. 

ಅಶೋಕ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಬಿಹೆಚ್ ರಸ್ತೆ, ಕೃಷ್ಣಕೆಫೆಯ ಕೆಳಭಾಗದ ರಸ್ತೆ ಮೂಲಕ ಭೀಮನ ಮಡುವಿನಲ್ಲಿ ಓಂ ಗಣಪತಿ ವಿಸರ್ಜನೆಯಾಗಲಿದೆ. ಗಣಪತಿ ಪ್ರತಿಷ್ಠಾಪನೆಗೊಂಡು 12 ನೇ ದಿನವಾದ ಇಂದು ವಿಸರ್ಜನೆ ಮಾಡಲಾಗುತ್ತಿದೆ. 

ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯನ್ನ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಓಂ ಗಣಪತಿ ಮುನ್ನಾಲೆಗೆ ಬಂದಿತ್ತು. 1997 ರಿಂದ 2003 ರವರೆಗೆ ಹಿಂದೂ ಮಹಾಸಭಾ ಗಣಪತಿ ಮೆರವಣೆಗೆಯನ್ನ ಸಮಿತಿಯವರೆ ರದ್ದುಗೊಳಿಸಿದ್ದರು. ಯಾವಾಗ ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ಬಳೆ ಕುಂಕುಮವನ್ನ ಕಳುಹಿಸಲಾಗುತ್ತದೆಯೋ ಆಗ ಓಂ ಗಣಪತಿ ವಿಸರ್ಜನಾ ಮೆರವಣಿಗೆಯನ್ನ ವಿಜೃಂಭಣೆಯಾಗಿ ಆಚರಿಸಲಾಗಿತ್ತು.

Today is Om Ganapati Rajabeedi utsav

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close