SUDDILIVE || SHIVAMOGGA
ವೈದ್ಯರಿಗೆ ಎರಡು ದಿನಗಳಕಾಲ ಶಿಬಿರ-ಡಾ.ಸರ್ಜಿ-Two-day camp for doctors - Dr. Sarji
ಇಂಟರ್ ನ್ಯಾಷನಲ್ ಲಿಂಗಾಯತ ಯುವ ಒಕ್ಕೂಟದಿಂದ ಸೆ.20 ಮತ್ತು 21 ರಂದು ವೈದ್ಯೋದ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಶಿಬಿರವನ್ನ ನಗರದ ಕನ್ವೆಷನಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸೆ21ರಂದು ಶಿಬಿರಾರ್ಥಿಗಳಿಗೆ ನೆಟ್ವರ್ಕ್ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಕಾನೂನು ಸಲಹೆ ಬಗ್ಗೆ ಹೇಗೆ ಮುನ್ನಡೆಯಬೇಕು. ಪಾರ್ಟ್ನಶಿಪ್ ಹೇಗಿರಬೇಕು. ಡಿಜಿಟಲ್ ಮಾರ್ಕೆಂಟಿಂಗ್ ನ್ನ ಬಳಕೆ ಹೇಗೆ? ಎಐ ಒಳನೋಟಗಳನ್ನ ಹಾಸ್ಪಿಟಲ್ ವಿಸ್ತರಣೆ, ಸಂಪನ್ಮೂಲ ಕ್ರೂಢೀಕರಣ, ಸಂಪತ್ತಿನ ಸೃಷ್ಠಿ, ಮತ್ತು ನೂತನ ಡಿಜಿಟಲ್ ಹೆಲ್ತ್ ಕೇರ್ ನ ಸಾಧಕ ಬಾದಕಗಳ ಬಗ್ಗೆ ವಿಶೇಷ ಚರ್ಚೆಗಳನ್ನ ಶಿಬಿರದಲ್ಲಿ ಮಾಡಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಶಿಬಿರ ಉದ್ಘಾಟಿಸಲಿದ್ದಾರೆ, ದಾವಣಗೆರೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ, ಶಿವಮೊಗ್ಗದ ಸಂಸದರು ಶಾಸಕ ಚೆನ್ನಬಸಪ್ಪ, ಚಿತ್ರದುರ್ಗದ ಎಂಲ್ ಸಿ ನವೋನ್ ಕೊಟ್ಟಿಗೆ, iLYF ಟ್ರಸ್ಟ್ ನ ಅಧ್ಯಕ್ಷ ಸಂತೋಷ ಕೆಂಚಾಂಬ ಮತ್ತಿತರರು ಭಾಗಿಯಾಗಲಿದ್ದಾರೆ.
ವೈದ್ಯರು ತಮ್ಮ ಕ್ಲಿನಿಕಲ್ ಪ್ರಾಕ್ಟಿಸ್ ಗಿಂತಲೂ ಮುಂದೆ ಹೋಗಿ ಉದ್ಯೋಮಿಗಳಾಗಲು ಹೊಸ ಕಾಲದ ವೈದ್ಯಕೀಯ ಸೇವಾ ಅಗತ್ಯಗಳು ಹಾಗೂ ಆರೋಗ್ಯ ಸೇವೆಗಳಲ್ಲಿ ಬೇಕಾದ ನೂತನ ತಂತ್ರಜ್ಞಾನಗಳನ್ನ ಸಂಶೋದನೆ ಮಾಡಿ ಹೆಚ್ಚಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನ ಒದಗಿಸುವಂತೆ ಮಾಡಲು ಹಾಗೂ ತಮ್ಮ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಜಿಗಿಯಲು ಈ ಕಾರ್ಯಕ್ರಮ ನೆರವಾಗಲಿದೆ ಎಂದರು.
Two-day camp for doctors - Dr. Sarji