ad

ಬಂಜಾರ ಸಮುದಾಯದ ಪ್ರತಿಭಟನೆ ಗೋಪಿವೃತ್ತಕ್ಕೆ ಶಿಫ್ಟ್- Banjara community protest shifts to Gopi Circle

 SUDDILIVE || SHIVAMOGGA

ಬಂಜಾರ ಸಮುದಾಯದ ಪ್ರತಿಭಟನೆ ಗೋಪಿವೃತ್ತಕ್ಕೆ ಶಿಫ್ಟ್-Banjara community protest shifts to Gopi Circle

Banjara, protest

ಡಿಸಿ ಕಚೇರಿ ಎದುರು ನಡೆಯುತ್ತಿದ್ದ ಬಂಜಾರ ಸಮುದಾಯದ ಪ್ರತಿಭಟನೆ ಇಂದು ದಿಡೀರ್ ಎಂದು ಮಹವೀರ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದೆ.

ಮೀಸಲಾತಿ ವರ್ಗೀಕರಣ ವಿರೋಧಿಸಿ ಕಳೆದ ನಾಲ್ಕೈದು ದಿನಗಳಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಜಾರ ಸಮುದಾಯ ಇಂದು ಗೋಪಿವೃತ್ತದಲ್ಲಿ  ಸುಮಾರು ಒಂದು ಗಂಟೆಗಳ ಕಾಲ  ವಿವಿಧ ಸಾಂಸ್ಕೃತಿಕ ಉಡುಪುಗಳನ್ನ ಧರಿಸಿ, ಡೊಳ್ಳು ಡಕ್ಕೆಗಳನ್ನ ಬಳಸಿ ಪ್ರತಿಭಟನೆ ನಡೆಸಿತು

ನಾಲ್ಕೈದು ದಿನಗಳಿಂದ ಪ್ರತಿಭಟನೆ ನಡೆಸಿದರೂ ಯಾರೂ ಕೇಳಲು ಸಿದ್ದರಿರದ ಹಿನ್ನಲೆಯಲ್ಲಿ ಗೋಪಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಮುದಾಯ ಒಳಮೀಸಲಾತಿಯನ್ನ‌ ವಿರೋಧಿಸಿದೆ ಎನ್ನಲಾಗಿದೆ.


ಈ ವೇಳೆ ಮಾತನಾಡಿದ ಶಾಸಕ ಚೆನ್ನಬಸಪ್ಪ ಬಿಜೆಪಿ ಸರ್ಕಾರ ಇದ್ದಾಗ ಮೀಸಲಾತಿ ವರ್ಗೀಕರಿಸಿದಾಗ ಆಕ್ರೋಶ ವ್ಯಕ್ತಪಡಿಸಲಾಯಿತು. ಇಂದು ಕಾಂಗ್ರೆಸ್ ಅತಿರೇಕವಾಗಿ ನಡೆದುಕೊಂಎಇದೆ ಮುಙದಿನ ಚುನಾವಣೆಗೆ ಇವರಿಗೆ ಬುದ್ದಿಕಲಿಸಬೇಕಿದೆ ಎಂದು ಕರೆ ನೀಡಿದರು. ಈ ದಿಡೀರ್ ಮಾನವ ಸರಪಳಿ ಪ್ರತಿಭಟನೆಯಿಂದಾಗಿ ಗೋಪಿವೃತ್ತದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥೆಗೊಂಡಿತ್ತು. ವಾಹನ ಸವಾರರು ಪರದಾಡುವಂತಾಗಿತ್ತು. 

Banjara community protest shifts to Gopi Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close