ad

ಸಿಎಂ ಡಿಸಿಎಂ ಸೂಚಿಸಿದರೆ ರಾಜೀನಾಮೆ-ಭೋವಿ ರಾಜ್ಯಾಧ್ಯಕ್ಷ ರವಿ ಕುಮಾರ್- Will resign if CM or DCM suggests it - Bhovi State President Ravi Kumar

SUDDILIVE || SHIVAMOGGA

ಸಿಎಂ ಡಿಸಿಎಂ ಸೂಚಿಸಿದರೆ ರಾಜೀನಾಮೆ-ಭೋವಿ ರಾಜ್ಯಾಧ್ಯಕ್ಷ ರವಿ ಕುಮಾರ್-Will resign if CM or DCM suggests it - Bhovi State President Ravi Kumar

Bhovi, president


ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಸೂಚಿಸಿದರೆ ಅಥವಾ ಸರ್ಕಾರಕ್ಕೆ ಮುಜುಗರವಾಗುವುದಿದ್ದಾರೆ ರಾಜೀನಾಮೆ ನೀಡುವುದಾಗಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿ ಕುಮಾರ್ ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಷಡ್ಯಂತರ ನಡೆದಿದೆ.  AI ಆಡಿಯೋ ಮೂಲಕ ನನ್ನ ವಿರುದ್ಧ ಷಡ್ಯಂತರ ನಡೆದಿದೆ. ತನಿಖೆಯಾದ ನಂತರ ಎಲ್ಲವೂ ಸತ್ಯ ಹೊರಬೇಕಿದೆ. ಎಫ್ ಎಸ್ ಎಲ್ ಗೆ ಆಡಿಯೋ ಕೊಡಬೇಕು. ಸಿಎಂಗೆ ವಾಸ್ತವಾಂಶ ಹೇಳಿದ್ದೇನೆ. ಅನವಶ್ಯಕವಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತದೆ. ನಾಳೆ ನಾಡಿದ್ದು ಬೆಂಗಳೂರಿಗೆ ಹೋಗುವೆ. ಸಿಎಂ ಭೇಟಿಯಾಗಿ ಮಾತನಾಡಿ ದಾಖಲಾತಿ ಕೊಡುವೆ ನಂತರ ಅವರ ಸೂಚನೆ ಮೇರೆಗೆ ಮುಂದಿನ ನಡೆ ಇಡುವೆ ಎಂದರು. 

ನಾನು ಭೋವಿ ನಿಗಮಕ್ಕೆ ಬಂದ ನಂತರ ಭೋವಿ ನಿಗಮಕ್ಕೆ 2024-25 ಕ್ಕೆ ಉದ್ಯೋಗ ಸಿರಿ, ರೈತರ ಫೈನಾನ್ಸ್, ಭೂ ಒಡೆತನ, ಸೇರಿದಂತೆ 68 ಕೋಟಿ ಹಣ ಬಂದಿದೆ. ಫಲಾನುಭವಿಗಳಿಗೆ ನೇರವಾಗಿ ಹಣ ಬಂದಿದೆ. ಈ ಹಣ ಖರ್ಚಾಗಿದೆ ಎಂದರು. 

ಕರ್ನಾಟಕ ರಾಜ್ಯ ಭೋವಿ ಅಭಿವೃದ್ದಿ ನಿಗಮದಲ್ಲಿ ಭ್ರಷ್ಟ ನಡೆದಿದೆ ಎನ್ನುವ ಆರೋಪ ಮಾದ್ಯಮಗಳಲ್ಲಿ ಬಂದ ವಿಡಿಯೋ ಕುರಿತು ಸ್ಪಷ್ಟನೆ , ಹಾಗೆಯೇ ಮುಖ್ಯಮಂತ್ರಿ ಗಳು ನನಗೆ ರಾಜೀನಾಮೆ‌ನೀಡಲು ಸೂಚಿಸಿದ್ದಾರೆನ್ನುವ ಸಂಗತಿಗಳು ಸತ್ಯಕ್ಕೆ ದೂರವಾಗಿದೆ ಎಂದರು. 


ನಾನು ನಿಗಮದ ಸೌಲಭ್ಯ ನೀಡಲು‌ ಫಲಾನುಭವಿಗಳಿಂದ ಕಮೀಷನ್ ಕೇಳಿದ್ದೇನೆನ್ನುವ ಆ ವಿಡಿಯೋದಲ್ಲಿ ‌ಇರುವುದು ನಾನು ನಿಜ, ಆದರೆ ಅಲ್ಲಿ ಮಾತನಾಡಿದ್ದು ನಾನಲ್ಲ.‌‌ ಆ ಧ್ಚನಿ‌‌ ನಂದಲ್ಲ, ಆ ವಿಡಿಯೋದಲ್ಲಿನ ಇಡೀ ಸಂಭಾಷಣೆಗೆ  ಬೇರೆ ಧ್ವನಿ‌ ನೀಡಲಾಗಿದೆ.‌ ಅಂದ್ರೆ ಎಐ ( ಕೃತಕ ಬುದ್ದಿಮತ್ತೆ) ಮೂಲಕ ಅದನ್ನು ತಿರುಚಲಾಗಿದೆ. ಅಂದ್ರೆ ವಿಡಿಯೋದಲ್ಲಿನ‌ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಬೇಕಾದರೆ ಇದನ್ನು ಯಾವುದೇ ತನಿಖೆಗೆ ಒಳಪಡಿಸಬಹುದು.

ಅಲ್ಲಿ ಸಂಭಾಷಣೆ ನಡೆದಂತೆ ನಾನು ಆ ವಿಡಿಯೋ ಮಾಡಿದವರೊಂದಿಗೆ  ಯಾವುದೇ ಹಣಕಾಸಿನ ಕೊಡುಕೊಳ್ಳುವಿಕೆಯ ಸಂಭಾಷಣೆ ಮಾಡಿಲ್ಲ.‌ನಾನು‌ಕೂಡ ಸಾರ್ವಜನಿಕ ಜೀವನದಲ್ಲಿ ಹಲವಾರು ವರ್ಷಗಳಿಂದ ಇದ್ದವನು, ತುಂಬಾ ಎಚ್ವರಿಕೆದಿಂದಲೇ ಕೆಲಸ ನಿರ್ವಹಿಸುತ್ತ ಬಂದಿದ್ದೇನೆ.‌ಆಫೀಸ್ ನಲ್ಲಿ ಕುಳಿತುಕೊಂಡು ವ್ಯವಹಾರ ಮಾಡುವಷ್ಟು ದಡ್ಡನಲ್ಲ.‌ ಹಾಗೆ ಕಮಿಷನ್ ಪಡೆದು ನಮ್ಮದೇ ಸಮಾಜಕ್ಕೆ ಅನ್ಯಾಯ ಮಾಡುವಷ್ಟು ಕ್ರೂರಿ ನಾನಲ್ಲ.

ಅಲ್ಲಿ ವಿಡಿಯೋ ದಲ್ಲಿ ಪರ್ಸೆಂಟೇಜ್ ವ್ಯವಹಾರ ಮಾತನಾಡಲಾಗಿದೆ.  5ಪರ್ಸೆಂಟ್ ‌ಕಮೀಷನ್ ಕೇಳಿದೆ ಅಂತ ಹೇಳಲಾಗಿದೆ. ಆದರೆ ಅಲ್ಲಿ‌ ನಾವು ಮಾತನಾಡಿದ್ದು ಫಲಾನುಭವಿಗಳ ಕೋಟಾ ಪರ್ಸೆಂಟೇಜ್ ಕುರಿತು. ಅಂದ್ರೆ ನಿಗಮದ ಸೌಲಭ್ಯ ಗಳನ್ನು ಹಂಚಿಕೆ‌ ಮಾಡುವಾಗ ಸಚಿವರಿಗೆ ಇಷ್ಟು ,ಅಧ್ಯಕ್ಣರಿಗಿಷ್ಟು ಅಂತ ಕೋಟಾ ಇರುತ್ತೆ

 ನನಗೆ ಇದ್ದಿದ್ದು ೫ ಪರ್ಸೆಂಟ್ ಕೋಟಾ,‌ಆ ಪ್ರಕಾರ ನಾನು ಹಂಚಿಕೆ ಮಾಡುತ್ತೇನೆ. ಅದನ್ನು ಕೊಡಿ ಎಂದು ನಾನು ಅಧಿಕಾರಿಗಳಿಗೆ ಹೇಳುತ್ತೇನೆ. ಅದನ್ಬೇ ರೆಕಾರ್ಡ್ ಮಾಡಿ, ತಿರುಚುವ‌‌ ಮೂಲಕ  ಪರ್ಸೆಂಟೇಜ್ ಹಣ ಕೊಡಿ ಎಂದು ಕೇಳಿದರೂ ಎನ್ನಲಾಗಿದೆ.‌ಇದನ್ನೇ ಈಘ ಎಫ್ ಎಸ್ ಎಲ್ ಗೆ ವಹಿಸಬೇಕೆನ್ನುವುದು ನಾನೇ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.ಅಲ್ಲದೆ ಇದರ ವಿರುದ್ದ ದೂರು‌ಕೊಡಲು ನಿರ್ಧರಿಸಿದ್ದೇನೆ‌.

ನನ್ನ ಪ್ರಕಾರ ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದರ ಹಿಂದೆ ಕೆಲವು ಕಾಣದ ಕೈವಾಡಗಳಿವೆ. ದಲಿತ ವಿರೋದಿಗಳು, ಶೋಷಿತ ಸಮುದಾಯದ ವಿರೋಧಿಗಳು ಕೆಲಸ ಮಾಡಿವೆ. ಆ ಕಾರಣದಿಂದಲೇ ನಾನು ಈ ಪ್ರಕರಣದ. ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸುತ್ತಿದ್ದೇನೆ.

ವಿಪಕ್ಷಗಳು ಈಗ ಬಹ್ಮಾಂಡ ಭ್ರಷ್ಟಚಾರ ಎಂದು ಆರೋಪಿಸುತ್ತಿವೆ. ವಾಸ್ತವದಲ್ಲಿ ‌ನಾನು ನಿಗಮಕ್ಕೆ ಅಧ್ಯಕ್ಷನಾದ ನಂತರ ಶಿಸ್ತು ತಂದಿದ್ದೇನೆ.‌ದಲ್ಲಾಗಳಿಗಳ ವ್ಯವಹಾರ ನಿಂತಿದೆ.‌ಎಲ್ಲವೂ ಆನ್ ಲೈನ್ ವ್ಯವಸ್ಥೆಯ‌ ಮೂಲಕ ‌ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತದೆ. ಇದರಲ್ಲಿ ಭ್ರಷ್ಟಚಾರದ ಪ್ರಶ್ನೆಯೇ ಬರುವುದಿಲ್ಲ, ಇದೆಲ್ಲ ಆರೋಪ‌ ಶುದ್ದು ಸುಳ್ಳು. ಬೇಕಾದರೆ ನಿಗಮಕ್ಕೆ ನಾನು ಅಧ್ಯಕ್ಷ ನಾದ ಬಳಿಕ ಎಷ್ಟು ಹಣ ಬಂತು, ಅದರಲ್ಲಿ ಎಷ್ಠು ಹಣ ಫಲಾನುಭವಿಗಳಿಗೆ ಹೋಯಿತು ,‌ಎಷ್ಟು ಉಳಿದಿದೆ ಎಲ್ಲವೂ ಸಮಗ್ರವಾಗಿ ತನಿಖೆಯಾಗಲಿ.

ಸರ್ಕಾರದ ಯಾವುದೇ ಯೋಜನೆಗಳ ಹಣ ದುರುಪಯೋಗ ಅಥವಾ ಭ್ರಷ್ಠಚಾರದ ಬಗ್ಗೆ ಯಾರು ಮಾತನಾಡಬಾರದು ಅಂತ‌ ನಾನು ಹೇಳುವುದಿಲ್ಲ, ಆದರೆ ಭ್ರಷ್ಟಚಾರ ಮಾಡದೆ, ಹಣ ದುರುಪಯೋಗ ಮಾಡದೆ ಒಬ್ಬ ಪ್ರಮಾಣಿಕ ಕೆಲಸಗಾರರನನ್ನು  ಹಿಡನ್ ಕ್ಯಾಮೆರಾ ಮೂಲಕ ಚಿತ್ರಿಕರಿಸಿ, ಅದಕ್ಕೆ ಇನ್ನೂ ಬ್ಬರ ಧ್ವನಿ ಜೋಡಿಸಿ ಕಮೀಷನ್ ಕೇಳಿದೆ ಎನ್ನುವುದು ಎಷ್ಟು ಸರಿ? ವ್ಯವಸ್ಥೆಬರೀ ಹೀಗಾದರೆ ಹೇಗೆ?

ನಿಮಗದಲ್ಲೀಗ ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತವೆ. ಯಾವುದೇ ಯೋಜನೆಗೂ ಆನ್ ಲೈನ್ ಮೂಲಕವೇ ಅರ್ಜಿ‌ಸಲ್ಲಿಸಬೇಕು. ಆಯ್ಕೆ ಕೂಡ ಅನ್ ಲೈನ್ ಮೂಲಕವೇ ನಡೆಯತತ್ತದೆ. ಫಲಾನುಭವಿಗಳು ನಿಗಮಕ್ಕೆ‌ಬರುವ ಅವಶ್ಯಕತೆಯೇ ಇಲ್ಲ. ಆಯ್ಕೆಯಾದವರಿಗೆ ಅವರ ಅಕೌಂಟ್ ಗೆ ನೇರವಾಗಿ ಸಬ್ಸಿಡಿ ಹಣ ಸಂದಾಯವಾಗುತ್ತದೆ.‌ನಾನು ಅಧ್ಯಕ್ಷನಾದ ಬಳಿಕ ಎಲ್ಲವೂ ಪಾರದರ್ಶಕ ವಾಗಿಯೇ ನಡೆದಿವೆ. ಒಬ್ಬೇ ಒಬ್ಬ ಫಲಾನುಭವಿ‌ ಒಂದೇ ಒಂದು ದೂರು ಕೊಟ್ಟಿಲ್ಲ. ಇದು ನಿಗಮದ ಕಾರ್ಯವೈಖರಿಗೆ ಸಾಕ್ಷಿ.

ನಾನು ನಿಗಮದ ಅಧ್ಯಕ್ಣನಾದ ಬಳಿಕ ಎಲ್ಲವೂ ಒಂದು ಶಿಸ್ತಿಗೆ ಬಂದಿದೆ. ದಲ್ಲಾಳಿಗಳು ಇಲ್ಲ, ಅಧಿಕಾರಿಗಳಿಗೂ ಭ್ರಷ್ಟಚಾರ ಮಾಡಲು ಅವಕಾಶ ಇಲ್ಲ. ಎಲ್ಲವೂ ಪಾರದರ್ಶಕ ಮತ್ತು ಶಿಸ್ತಿನಿಂದ‌ನಡೆಯತ್ತಿರುವುದೇ ಈಗ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿಯೇ ನನ್ನ ವಿರುದ್ದ ಷಡ್ಯಂತ್ರ ನಡೆದಿದೆ.‌ಇದರಲ್ಲಿ‌ಕಚೇರಿಯ ಕೆಲವು ಗುತ್ತಿಗೆ ನೌಕರರ ಕೈವಾಡವೂ ಇದೆ. ಇದು ತನಿಖೆಯಾಗಲಿ. ನಾನು‌ಕೂಡ ಸರ್ಕಾರವನ್ನು ಒತ್ತಾಯಿಸಲಿದ್ದೇನೆ.

ರಾಜೀನಾಮೆ ಮತ್ತೊಂದು ಮಗದೊಂದು ಎಲ್ಲವೂ ಸರ್ಕಾರದ ನಿರ್ದಾರ.ನಾನು ಮುಖ್ಯ ಮಂತ್ರಿಗಳನ್ನು, ಉಪ ಮುಖ್ಯಮಂತ್ರಿಗಳನ್ನು, ಸಂಬಂದಪಟ್ಟ ಇಲಾಖೆ ಸಚಿವರನ್ನು ಭೇಟಿ ಮಾಡಬೇಕಿದೆ. ಬಹು‌ಮುಖ್ಯವಾಗಿ‌ಇಲ್ಲಿ ಆಗಿದ್ದೇನು ಎನ್ನುವುದನ್ನು ತಿಳಿಸಬೇಕಿದೆ. ಮುಂದೆ ಅವರೇನು‌ನಿರ್ಧಾರ, ಸೂಚನೆ ನೀಡುತ್ತಾರೋ ಆ ಪ್ರಕಾರ ಮುಂದುವರೆಯುತ್ತೇನೆ. 

ಇಲ್ಲಿ ನನಗೆ ಅಧಿಕಾರ ಮುಖ್ಯವಲ್ಲ,‌ನನ್ನ ಸಮಾಜ‌ ಮತ್ತು  ಪಕ್ಷಕ್ಕೆ ಮುಜುಗರ ಆಗಬಾರದು. ನಾನು ಒಂದು ಹಂತಕ್ಕೆ ಬೆಳೆಯಲು ಪಕ್ಷ‌ಮತ್ತು ಸಮಾಜ‌ಕಾರಣ. ಅವರೆಡ ರ ಘನತೆಗೆ ಧಕ್ಕೆ ಮುಖ್ಯ. ಆದೃಷ್ಟಿಯಲ್ಲಿ ನಾಯಕರು‌ ಏನೇ ಹೇಳಿದರೂ ಅವರ ತೀರ್ಮಾನಕ್ಕೆ‌ ಬದ್ದನಾಗಿರುತ್ತೇನೆ. ಹಾಗೆಯೇ ಈಗ ನನ್ನ ವಿರುದ್ದದ ಷಡ್ಯಂತ ವಿಡಿಯೋ ಬಿತ್ತರಿಸುವ ಎಲ್ಲಾ ಮಾಧ್ಯಮಗಳ ವಿರುದ್ದ ಕೋರ್ಟ್ ಗೆ ಹೋಗುವೆ. ವಿಡಿಯೋ ತಿರುಚಿದವರ ವಿರುದ್ದವೂ ದೂರು ದಾಖಲಿಸಿ, ಸೂಕ್ತ ತನಿಖೆಗೂ ಒತ್ತಾಯಿಸುವೆ.

Will resign if CM or DCM suggests it - Bhovi State President Ravi Kumar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close