SUDDILIVE || ANANDAPURAM
ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ...!!!Young woman commits suicide by hanging herself
ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಂಜಿತಾ (28) ನೇಣು ಬಿಗಿದುಕೊಂಡ ದುರ್ದೈವಿಯಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಯ ಜಗುಲಿಯಲ್ಲಿ ರಂಜಿತಾ ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಯಕ್ತಿಕ ವಿಚಾರವಾಗಿ ಮನನೊಂದು ಸಾವಿಗೆ ಶರಣಾಗಿರುವುದಾಗಿ ಮೃತರ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 9 ವರ್ಷದ ಹಿಂದೆ ರಂಜಿತಾ ಅರುಣ್ ಎಂಬುವರನ್ನ ಮದುವೆಯಾಗಿ ವಿಚ್ಚೇದನಪಡೆದಿದ್ದರು. ಈಗ ಸಾಗರದ ನಿವಾಸಿಯನ್ನ ಮದುವೆಯಾಗಿ ನಾಲ್ಕು ತಿಂಗಳು ಕಳೆದಿತ್ತು.
ಗಣೇಶ ಹಬ್ಬಕ್ಕೆ ತವರು ಮನೆಗೆ ಬಂದಿದ್ದ ರಂಜಿತಾ ಮನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Young woman commits suicide by hanging herself
