SUDDILIVE || SHIVAMOGGA
ಉಕ್ಕಡದಲ್ಲಿ ತೆರಳುವಾಗ ಯುವಕ ನೀರುಪಾಲು, ಸರ್ಕಾರದ ವಿರುದ್ಧ ಆಕ್ರೋಶ-Youth drowns while sailing in Ukkada, anger against government
ಉಕ್ಕಡ ಮಗುಚಿ ಯುವಕ ನೀರು ಪಾಲಾಗಿರುವ ಘಟನೆ ಹೊಸನಗರ ತಾಲೂಕು ಹೊಸೂರು ಗ್ರಾಪಂನ ಕಟ್ಟಿನಹೊಳೆ- ಬಂಟೋಡಿಯಲ್ಲಿ ನಡೆದಿದೆ.
ಶನಿವಾರ ಮದ್ಯಾಹ್ನ ಉಕ್ಕಡದಲ್ಲಿ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಉಕ್ಕಡದಲ್ಲಿ ಮೂವರು ಯುವಕರು ತೆರಳುತ್ತಿದ್ದರು. ಮೂವರಲ್ಲಿ ಪೂರ್ಣೇಶ (22) ಎಂಬ ಯುವಕ ನೀರುಪಾಲಾಗಿದ್ದಾನೆ.ಯುವಕರಾದ ಶರತ್, ರಂಜನ್ ಬಚಾವ್ ಆಗಿದ್ದಾರೆ.
ನೀರುಪಾಲಾದ ಯುವಕನ ಶೋಧನೆಗೆ ಧಾವಿಸಿದ ಅಗ್ನಿ ಶಾಮಕದಳ ಮತ್ತು ಪೊಲೀಸರು ಸತತ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ದುರ್ಘಟನೆಗೆ ಗ್ರಾಮಸ್ಥರು ಆಕ್ರೋಶ ಭುಗಿಲೆದ್ದಿದೆ. ಚಿಂಚನೂರು ಮತ್ತು ಬಂಟೋಡಿ ನಡುವೆ ಕಾಲುಸಂಕಕ್ಕಾಗಿ ಹಲವು ವರ್ಷಗಳ ಬೇಡಿಕೆಯಿದೆ.
ಮುಳುಗಡೆ ಯಾದಾಗಿನಿಂದ ಈ ಗ್ರಾಮಸ್ಥರಿಗೆ ಉಕ್ಕಡದ ಸಂಪರ್ಕವೇ ಗತಿಯಾಗಿದ್ದು, ಹಲವು ದಶಕಗಳ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಆಕ್ರೋಶ ಬುಗಿಲೆದ್ದಿದೆ. ಯುವಕನ ಸಾವಿಗೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಲಾಗುತ್ತಿದೆ.
Youth drowns while sailing in Ukkada, anger against government
