SUDDILIVE || SHIVAMOGGA
ಇಎಸ್ಐ ಕಟ್ಟಡದ ಗುತ್ತಿಗೆದಾರನ ವಿರುದ್ಧ ಸಚಿವೆ ಗರಂ -Minister Garam against ESI building contractor
ಶಿವಮೊಗ್ಗದ ರಾಗಿಗುಡ್ಡದಲ್ಲಿ 100 ಬೆಡ್ ನ ಇಎಸ್ಐ ಆಸ್ಪತ್ರೆ ನಿರ್ಮಾಣದ ಹಂತದಲ್ಲಿದ್ದು ಕೇಂದ್ರ ಕಾರ್ಮಿಕ ಸಚಿವೆ ಶೋಭಕರಂದ್ಲಾಜೆ ಇಂದು ಭೇಟಿಯಾಗಿ ಗುತ್ತಿಗೆದಾರನನ್ನ ತರಾಟಗೆ ತೆಗೆದುಕೊಂಡಿದ್ದಾರೆ. ಕಟ್ಟಡ ತಡವಾಗಿ ನಿರ್ಮಾಣ ಆಗುತ್ತಿರುವ ಕಾರಣ ರಿಷಬ್ ಕನ್ ಸ್ಟ್ರಕ್ಷನ್ ನ ಮ್ಯಾನೇಜರ್ ಗೆ ತರಾಟಗೆ ತೆಗೆದುಕೊಂಡಿದ್ದಾರೆ.
2020 ರಿಂದ ಈ ಕಟ್ಟಡ ಆರಂಭವಾಗಿದ್ದು 2022 ರಲ್ಲಿ ಕಟ್ಟಡ ಪೂರ್ಣವಾಗಬೇಕಿತ್ತು. ಆದರೆ ಈ ಕಟ್ಟಡ 2025 ನೇ ಇಸವಿಗೆ ಕಾಲಿಟ್ಟರು 55 ಕೋಟಿ ವ್ಯಚ್ಚದ ಕಟ್ಟಡ ನಿರ್ಮಾಣ ಆಗದೆ ಇರುವ ಬಗ್ಗೆ ಸಚಿವಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದ್ದಾರೆ.
6 ತಿಂಗಳಿನಲ್ಲಿ ಕಟ್ಟಡ ಪೂರ್ಣಗೊಳ್ಳಬೇಕು. ಎರಡು ಕಟ್ಟಡಗಳಿಗೆ ಬೇರೆ ಬೇರೆ ಲೇಬರ್ ಗಳನ್ನ ನೇಮಿಸಬೆಕು. ನಿಮ್ಮ ಅಧಿಕಾರಿಯನ್ನ ಕಳುಹಿಸಿಕೊಡಿ. ಇಲ್ಲವಾದಲ್ಲಿ ಬ್ಲಾಕ್ ಲೀಸ್ಟ್ ಗೆ ಹಾಕುವುದಾಗಿ ಗುತ್ತಿಗೆದಾರನಿಗೆ ತರಾಟೆ ತೆಗೆದುಕೊಂಡರು. 40% ಕೆಲಸ ಸರಿಯಾದ ಸಮಯದಲ್ಲಿ ನಡೆಸುವಂತೆ ಸೂಚಿಸಿದರು.
ರಾಜಸ್ಥಾನ ಮತ್ತು ಇತರೆಕಡೆಯ ಕಟ್ಟಡವೂ ಸಹ ತಡವಾಗಿ ನಿರ್ಮಾಣವಾಗುತ್ತಿದೆ. ಇಲ್ಲಿ ಸಂಸದರನ್ನ ಭೇಟಿಯಾಗಿ ಯಾಕೆ ಸಲಹೆ ಸೂಚನೆ ಪಡೆದುಕೊಳ್ಳಲಿಲ್ಲ ಎಂದು ಗರಂ ಆದರು. ಈ ವೇಳೆ ಎಂಎಲ್ ಸಿ ಧನಂಜಯ ಸರ್ಜಿ, ಶಾಸಕ ಚೆನ್ನಿಬಸಪ್ಪ, ರುದ್ರೇಗೌಡ ಮೊದಲಾದವರು ಸಾಥ್ ನೀಡಿದ್ದಾರೆ.
Minister Garam against ESI building contractor
