SUDDILIVE || RIPPONPETE
ಅತ್ಯಾಚಾರಿ ಆರೋಪಿ ಬಂಧನ-rapist accused arrest
ಅವಿವಾಹಿತ ಮಹಿಳೆ ಮೇಲೆ ದೂರದ ಸಂಬಂಧಿ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನ ಕೇವಲ ಒಂದು ಗಂಟೆಯೊಳಗೆ ರಿಪ್ಪನ್ ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಎಸೈ ರಾಜುರೆಡ್ಡಿ ನೇತ್ರತ್ವದ ತಂಡ ಆರೋಪಿ ಬೆಳ್ಳೂರು ನಿವಾಸಿ ಪ್ರಕಾಶ್ (40) ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪ್ಱ್ಂ ವ್ಯಾಪ್ತಿಯ ಕಳಸೆ ಗ್ರಾಮದ 40 ವರ್ಷದ ಅವಿವಾಹಿತ ಮಹಿಳೆಯೊಬ್ಬರ ಮೇಲೆ ದೂರದ ಸಂಬಂಧಿ ಮಂಗಳವಾರ ಮಧ್ಯಾಹ್ನ ಅತ್ಯಚಾರಕ್ಕೆ ಯತ್ನಿಸಿರುವ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರು ದಾಖಲಾಗುತಿದ್ದಂತೆ ಡಿವೈಸ್ಪಿ ಅರವಿಂದ್ ಕಲಗುಜ್ಜಿ , ಸಿಪಿಐ ಗುರಣ್ಣ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸೈ ರಾಜುರೆಡ್ಡಿ ನೇತ್ರತ್ವದಲ್ಲಿ ಒಂದು ಗಂಟೆಯೊಳಗೆ ಆರೋಪಿ ಬೆಳ್ಳೂರು ಗ್ರಾಮದ ನಿವಾಸಿ ಪ್ರಕಾಶ್ (48) ಎಂಬಾತನನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ರಿಪ್ಪನ್ ಪೇಟೆ ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ ಆರ್ , ಸಂತೋಷ್ ಕೊರವರ , ಉಮೇಶ್ ಹಾಗೂ ಅವಿನಾಶ್ ಇದ್ದರು.
rapist accused arrest
