ಡಿಜಿಟಲ್ ಅರೆಸ್ಟ್ ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಗೆ 19 ಲಕ್ಷ ರೂ ವಾಪಾಸ್!Digital arrest

SUDDILIVE || SHIVAMOGGA

ಡಿಜಿಟಲ್ ಅರೆಸ್ಟ್ ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಗೆ 19 ಲಕ್ಷ ರೂ ವಾಪಾಸ್!Rs 19 lakh returned to person caught in digital arrest!

Digital, arrest


ಸೈಬರ್ ಕ್ರೈಂ ಕಾರ್ಯಾಚರಣೆ ಡಿಜಿಟಲ್ ಅರೆಸ್ಟ್ ಮುಖಾಂತರ ವ್ಯಕ್ತಿಯೊಬ್ಬರನ್ನು ಹೆರದರಿಸಿ, 19,00,000/- ರೂ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡ ಪ್ರಕರಣದಲ್ಲಿ, ವಂಚಿಸಿದ ಹಣವನ್ನು ಫ್ರೀಸ್ ಮಾಡಿಸಿ, ವಾರಸುದಾರರಿಗೆ ಹಿಂದಿರುಗಿಸಲಾಗಿದೆ. 

ಶಿವಮೊಗ್ಗ, ನಗರದ 51 ವರ್ಷದ ವ್ಯಕ್ತಿಯೊಬ್ಬರಿಗೆ ದಿನಾಂಕ 17-09-2025 ರಂದು ಬೆಳಗ್ಗೆ, ಅಪರಿಚಿತ ಮೊಬೈಲ್ ನಿಂದ ವಾಟಾಪ್ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿಯು ತನ್ನನ್ನು ಮುಂಬೈ ಸಿಟಿಯ ಕೊಲಬಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸೆಕ್ಟರ್ ಎಂದು ಪರಿಚಯಿಸಿಕೊಂಡು ನಿಮ್ಮ ಆಧಾರ್ ಕಾರ್ಡನ್ನು ಬೆಳೆಸಿ, ಮುಂಬೈ ಸಿಟಿಯ ಕೆನರಾ ಬ್ಯಾಂಕ್ ನಲ್ಲಿ ಖಾತೆಯನ್ನು ಮಾಡಿಸಿ ಅದರಲ್ಲಿ ಸ್ಕ್ಯಾಮರ್ ಒಬ್ಬರಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುತ್ತೀರಿ ಆದ್ದರಿಂದ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುತ್ತದೆ ಈ ಸಂಬಂಧ ನೀವು ಮುಂಬೈಗೆ ಬರಬೇಕೆಂದು ಅವರಿಗೆ ತಿಳಿಸಿ, ಇದು ಇಂಟರ್ನ್ಯಾಷನಲ್ ಸೆಕ್ಯೂರಿಟಿ ಸಂಬಂಧಿಸಿದ ವಿಷಯವಾಗಿರುವುದರಿಂದ ಈ ಕರೆಯ ವಿಚಾರವನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದೆಂದು ಅವರಿಗೆ ಬೆದರಿಕೆ ಹಾಕಿರುತ್ತಾರೆ.

ನಂತರ ಮಾರನೆಯ ದಿನ ಆ ವ್ಯಕ್ತಿಯು ಇವರೊಂದಿಗೆ ವಿಡಿಯೋ ಕಾಲ್ ಮುಖಾಂತರ ಕರೆ ಮಾಡಿದ್ದು. ಕರೆ ಮಾಡಿದ ವ್ಯಕ್ತಿಯು ಪೊಲೀಸ್ ಯೂನಿಫಾರಂನಲಿದ್ದು ನಿಮ್ಮನ್ನು ಜಡ್ಜ್ ರವರ ಮುಂದೆ ವಿಡಿಯೋ ಕಾರೆನ್ಸ್ ಮುಖಾಂತರ ಹಾಜರುಪಡಿಸುತ್ತೇವೆ. ನಿಮಗೆ ಬೇಲ್ ತೆಗೆದುಕೊಳ್ಳು ತ್ತಿದ್ದೇವೆ ಎಂದು ತಿಳಿಸಿ ಕೋರ್ಟ್ ಹಾಲ್ ನಂತೆಯೇ ಇರುವ ಒಂದು ಹಾಲಿನಲ್ಲಿ ಜಡ್ಜ್ ನ ರೀತಿ ಒಬ್ಬರು ಕುಳಿತಿದ್ದು, ಅವರು ಪಿರ್ಯಾದುದಾರರಿಗೆ ನಿಮ್ಮ ಬ್ಯಾಂಕ್ ನ ಲಾಕರ್ ನಲ್ಲಿರುವ ಬಂಗಾರವನ್ನು ತೂಕ ಮಾಡಿಸಿ ಅದರ ಮೇಲೆ ಎಷ್ಟು ಸಾಲ ತೆಗೆಯಬಹುದೆಂದು ತಿಳಿದುಕೊಂಡು ಅದರಲಿ. ಅರ್ಧದಷ್ಟು ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕಿಸಿಕೊಳ್ಳಿ ಎಂದು ತಿಳಿಸಿದ ಮೇರೆಗೆ ಇವರು ಬ್ಯಾಂಕಿಗೆ ಹೋಗಿ ಒಟ್ಟು 19 ಲಕ್ಷ ಸಾಲ. ಮಾಡಿಸಿ ಆಕೌಂಟ್ ಗೆ ಹಾಕಿದ್ದರು. 

ನಂತರ ನಿಮ್ಮ ಖಾತೆಯಲಿರುವ 19 ಲಕ್ಷ ರೂ ಹಣವನ್ನು ನಾವು ಹೇಳುವ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಮಾಡಬೇಕು ಎಂದು ಹೇಳಿದ ಮೇರೆಗೆ ಇವರು 19 ಲಕ್ಷ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ನಂತರ ಈ ವಿಚಾರವನ್ನು ಪಿರ್ಯಾದಿಯು ತನ್ನ ಮಗಳಿಗೆ ತಿಳಿಸಿದ ಮೇರೆಗೆ, ಇದು ವಂಚಕರ ಜಾಲವೆಂದು, ಮೋಸವಾಗಿರುವ ಬಗ್ಗೆ ತಿಳಿಸಿರುತ್ತಾರೆ. ಈ ರೀತಿ ಸೈಬರ್ ವಂಚಕರು ಸದರಿ ವ್ಯಕ್ತಿಯನ್ನು ವಂಚಿಸಿ 19 ಲಕ್ಷ ಹಣವನ್ನು ಆಕ್ರಮವಾಗಿ ವರ್ಗಾವಣೆ ಮಾಡಿಸಿಕೊಂಡಿದ್ದು ಈ ಸಂಬಂಧ ಶಿವಮೊಗ್ಗ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಸದರಿ ಪ್ರಕರಣದಲ್ಲಿ ಆರೋಪಿತರು ಹಾಗೂ ವಂಚಿಸಿದ ಹಣವನ್ನು ಪತ್ತೆ ಮಾಡುವ ಸಂಬಂಧ ಶ್ರೀ ಮಿಥುನ್ ಕುಮಾರ್ ಜಿ ಕೆ ಮಾನ್ಯ ಪೋಲಿಸ್ ಅಧೀಕ್ಷಕರು, ಶಿವಮೊಗ್ಗ, ಜಿಲ್ಲೆ,, ಹಾಗೂ ಶ್ರೀ ಎ, ಜಿ, ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1, ಶಿವಮೊಗ್ಗ ಜಿಲ್ಲೆ., ಮತ್ತು ಶ್ರೀ ರಮೇಶ್ ಕುಮಾರ್ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2, ಶಿವಮೊಗ್ಗ, ಜಿಲೆ. ರವರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣಮೂರ್ತಿ ಪೊಲೀಸ್ ಉಪಾಧೀಕ್ಷರು ಸೈಬರ್ ಕ್ರೈಂ ಪೊಲೀಸ್ ಠಾಣೆ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಮಂಜುನಾಥ ಪೊಲೀಸ್ ನಿರೀಕ್ಷಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಕೂಡಲೇ ಕಾರ್ಯಪ್ರೌವೃತ್ತರಾಗಿ ಪ್ರಕರಣದಲಿ. ಪಿರ್ಯಾದುದಾರರಿಗೆ ವಂಚಿಸಿದ 19 ಲಕ್ಷ ರೂ ಹಣವನ್ನು ಫ್ರೀಸ್ ಮಾಡಿಸಿ, ನಂತರ ಸದರಿ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿ ನೀಡಿ ಉತ್ತಮ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.  ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ನ ಪೋಲಿಸ್ ಅಧೀಕ್ಷಕರು ಶಿವಮೊಗ್ಗ, ಜಿಲೆ..ಯವರು ಪ್ರಶಂಶಿಸಿ ಅಭಿನಂದಿಸಿರುತ್ತಾರೆ,

Digital arrest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close