ಚೇತರಿಕೆಯತ್ತ ಬಾಲಣ್ಣ- Balanna on the road to recovery

SUDDILIVE || SHIVAMOGGA

ಚೇತರಿಕೆಯತ್ತ ಬಾಲಣ್ಣ- Balanna on the road to recovery 

Balanna, recovery


ನಗರದ ಸಕ್ರೆಬೈಲಿನಲ್ಲಿರುವ ಸಾಕಾನೆಗಳ ಆರೋಗ್ಯ ಹದಗೆಟ್ಟಿದೆ. ಒಂದು ಪೈನ್ ಕಿಲ್ಲರ್ ಇಂಜೆಕ್ಷನ್ ಬಾಲಣ್ಣನ ಸ್ಥಿತಿಯನ್ನ ಚಿಂತಾಜನಕವಾಗುವಂತೆ ಮಾಡಿದ್ದು ಈ ಬಗ್ಗೆ ಆನೆ ಈಗ ಗುಣಮುಖವಾಗುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. 

ಸಾಕಾನೆ ಬಾಲಣ್ಣ ಆನೆಗಳ ಕಾರ್ಯಾಚರಣೆ ನಡೆಸಲು ಯೋಗ್ಯ ಮತ್ತು ಅರ್ಹವಾದ ಆನೆಯಾಗಿದೆ. ಮೊನ್ನೆ ಶಿವಮೊಗ್ಗದ ದಸರಾಕ್ಕೆ ಈ ಆನೆಯನ್ನ ಕರೆತಂದು ಅಂಬಾರಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಮಾಡಲಾಗಿತ್ತು.  ಈ ಬಾರಿ ದಸರಾ ಮೆರವಣಿಗೆ ವೇಳೆ ಬಾಲಣ್ಣ ಎಂಬ ಆನೆಗೆ ಕಾಲು ನೋವು ಇತ್ತು. ಇದಕ್ಕಾಗಿ ನೀಡಿದ ಪೈನ್ ಕಿಲ್ಲರ್ ಇಂಜೆಂಕ್ಷನ್ ನ್ನ ಕಿವಿಗೆ ನೀಡಲಾಗಿದೆ. ಇದು ಕಿವಿ ಕೊಳೆತು ಹೋಗುತ್ತಿದೆ. ಬಾಲಣ್ಣನ ಸ್ಥಿತಿ ಗಂಭೀರವಾಗುವಂತೆ ಮಾಡಿದೆ. 


ಈ ಪ್ರಕರಣದ ಕುರಿತು ಮಾತನಾಡಿದ ಡಿಸಿಎಫ್ ಪ್ರಸನ್ನ ಪಟಾಗಾರ್ ಬಾಲಣ್ಣನಿಗೆ ಕಾಲು ನೋವಾಗಿದ್ದಾಗ ಇಂಜೆಕ್ಷನ್ ಕೊಡುವಾಗ ಸಡನ್ ಆಗಿ ಎದ್ದ ಪರಿಣಾಮ ಅಡ್ವರ್ಸ್ ಆಗಿ ಇನ್ಫೆಕ್ಷನ್ ಆಗಿತ್ತು. ಕಿವಿಕೊಳೆಯುತ್ತಿತ್ತು.‌ ಈಗ ಅದಕ್ಕೆ ಪರಿಣಿತರನ್ನೆಲ್ಲಾ ಕರೆಯಿಸಿ ಚಿಕಿತ್ಸೆ ಕೊಡಿಸಲಾಗಿದೆ. ರೇಡಿಯೋ ಥೆರಪಿಯೂ ಸಹ ಕೊಡಿಸಿದ ಪರಿಣಾಮ ನಿಧಾನವಾಗಿ ಚೇತರಿಕಯಾಗುತ್ತಿದೆ ಎಂದು ಹೇಳಿದ್ದಾರೆ. 

ಇದರಿಂದಾಗಿ ಅಧಿಕಾರಿಗಳ ಮಾಹಿತಿ ಪ್ರಕಾರ ಬಾಲಣ್ಣ ಗುಣಮುಖನಾಗುವ ಎಲ್ಲಾ ಸಂಭವನೀಯತೆ ಹೆಚ್ಚಾದಂತಾಗಿದೆ. ಈ ಆನೆ ಇಬ್ಬರು ಮಾವುತರ ಮಾತನ್ನ ಬಿಟ್ಟರೆ ಬೇರೆಯವರ ಮಾತುಕೇಳದ ಆನೆಯಾಗಿದೆ. ಒಟ್ಟಿನಲ್ಲಿ ಬಾಲಣ್ಣ ಬಲು ಬೇಗ ಗುಣಮುಖವಾಗಿ ಲವಲವಿಕೆಯಿಂದಾಗಲಿ ಎಂಬುದು ನಮ್ಮ ಆಶಯ.

Balanna on the road to recovery 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close