ad

ದನ ಕದಿಯುತ್ತಿದ್ದ ಗ್ಯಾಂಗ್ ದರೋಡೆಗಿಳಿದಿತ್ತು, ನಾಲ್ವರು ಪೊಲೀಸರ ಅತಿಥಿ- A gang of cattle thieves had gone on a robbery spree, and four were guests of the police

 SUDDILIVE || BHADRAVATHI

ದನಕದಿಯುತ್ತಿದ್ದ ಗ್ಯಾಂಗ್ ದರೋಡೆಗಿಳಿದಿತ್ತು,  ನಾಲ್ವರು ಪೊಲೀಸರ ಅತಿಥಿ-A gang of cattle thieves had gone on a robbery spree, and four were guests of the police

Cattle, robbery

ದನಕದಿಯುತ್ತಿದ್ದ ಯುವಕರು ದರೋಡೆಗೆ ಇಳಿದು ಭದ್ರಾವತಿ ನ್ಯೂಟೌನ್ ಪೊಲೀಸರ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ. ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ಕವಿತಾ ಅವರ ನೇತೃತ್ವದಲ್ಲಿ ನಡೆದ ಖಡಕ್ ಕಾರ್ಯಾಚರಣೆಯಲ್ಲಿ ಐವರು ಪತ್ತೆಯಾಗಿದ್ದು ಓರ್ವ ಪರಾರಿಯಾಗಿದ್ಸಾನೆ. 

ಐವರಿಂದ 7 ಮಾರಕಾಸ್ತ್ರಗಳನ್ನ ಮತ್ತು ಝಾರದ ಪೊಟ್ಟಣ ಪತ್ತೆಯಾಗಿದೆ. 27 ಇಂಚಿನ ಲಾಂಗು, 19 ಇಂಚಿನ ಕಬ್ಬಿಣದ ಚಾಕು, ಒಂದು ಮರದ ವಿಕೆಟ್, ಎರಡು ಪ್ಲಾಸ್ಟಿಕ್ ಹಗ್ಗ, 28 ಇಂಚಿನ ಮರದ ದೊಣ್ಣೆ, 9 ಇಂಚಿನ ಚಾಕು, ಹಾಗೂ ಕೃತ್ಯಕ್ಕೆ ಬಳಸಿದ ಕೆಎ 36 ಎಂ 9466 ಮಾರುತಿ ಓಮ್ನಿಯನ್ನ ವಶಕ್ಕೆ ಪಡೆಯಲಾಗಿದೆ. 

ಮಾಚೇನಹಳ್ಳಿ ಇಂಡಿಸ್ಡ್ರೀಯಲ್ ಏರಿಯಾದ ಶ್ರೀರಾಮ ನಗರದಲ್ಲಿ ಆಯುಧ ಹಿಡಿದು ದರೋಡೆಗೆ ನಿಂತಿದ್ದ ಐವರಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸರನ್ನ ಕಂಡ ದಿಲೀಪ ಯಾನೆ ಕರೆಯಾ ಎಂಬಾತ ತನ್ನ‌ಕೈಯಲ್ಲಿದ್ದ ಲಾಂಗನ್ನ ಬಿಸಾಡಿ ಪರಾರಯಾಗಿದ್ದಾನೆ. ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ. 

ನಾಲ್ವರಲ್ಲಿ ಭದ್ರಾವತಿಯ ವೇಲೂರು ಶೆಡ್ ನ ಲೋಕೇಶ (32), ಜನ್ನಾಪುರದ ಆಕಾಶ್(21), ಅಪ್ಪರ್ ಹುತ್ತಾದ ಸುಂದರ್(22), ಜನ್ನಾಪುರದ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿವಾಸಿಯಾದ ಸುಜಿತ್(23) ಪೊಲೀಸರ ಬಳಿ ಸಿಕ್ಕಿಕೊಂಡಿದ್ದಾರೆ. ಇವರೆಲ್ಲರೂ  ಮೊದಲು ದನ ಕದ್ದು ಮಾರಾಟ ಮಾಡುತ್ತಿದ್ದು, ಹಸುಕದಿಯುತ್ತಿದ್ದ ಈ ಗ್ಯಾಂಗ್ ಪೊಲೀಸರಿಗೆ ಅನುಮಾನ ಬರಲಿದೆ ಎಂಬ ಕಾರಣಕ್ಕೆ ಮತ್ತು ಮಜಾಮಾಡಲು ಹಣಕ್ಕಾಗಿ ದರೋಡೆಗೆ ಸ್ಕೆಚ್ ಹಾಕಿದ್ದರು. 

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬರುವ ಸಾರ್ವಜನಿಕರನ್ನ ಅಡ್ಡಕಟ್ಟಿ ಸುಲಿಗೆ ನಡೆಸುವ ಪ್ಲಾನ್ ಮಾಡಿಕೊಂಡಿರುವುದಾಗಿ ಈ ನಾಲ್ವರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯ ಮೇಲೆ ಪೊಲೀಸರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 13 ಹಸುಗಳು ಕಳ್ಳತನವಾಗಿತ್ತು. ಕೊಟ್ಟಿಗೆಯಲ್ಲಿ ಕಟ್ಟಿದ ಹಸುಗಳನ್ನೇ ಕದಿಯಲಾಗಿತ್ತು. 

A gang of cattle thieves had gone on a robbery spree, and four were guests of the police

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close