SUDDILIVE || SHIVAMOGGA
ಮನೆಯ ಮುಂದೆ ಕಟ್ಟಿದ ನಾಯಿಗೆ ಚಿರತೆಯಿಟ್ಟ ಹಾವಳಿ- A leopard attacks a dog tied to a fence at home
ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮುಳುಕೊಪ್ಪ ತಾಂಡದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆಯೊಂದು ದಾಳಿ ಮಾಡಿದೆ.
ನಾಯಿಗೆ ನಾಲ್ಕೈದು ಕಡೆ ಚಿರತೆ ಪರಚಿದೆ. ನಾಯಿ ಕೂಗುತ್ತಿದಂತೆ ಮನೆಯಿಂದ ಹೊರ ಬಂದ ಮಾಲೀಕರು ಲೈಟ್ ಹಾಕುತ್ತಿದಂತೆ ಚಿರತೆ ಪರಾರಿಯಾಗಿದೆ. ಚಿರತೆ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.
A leopard attacks a dog tied to a fence at home
