ad

ವ್ಯಕ್ತಿ ತೆಲಂಗಾಣವನು ವಂಚಿಸಿದ್ದು ವಿದ್ಯಾನಗರದ ಫ್ಲೈಓವರ್ ಬಳಿ-A man cheated a Telangana man near the flyover in Vidyanagar

SUDDILIVE || SHIVAMOGGA

 ವ್ಯಕ್ತಿ ತೆಲಂಗಾಣವನು ವಂಚಿಸಿದ್ದು ವಿದ್ಯಾನಗರದ ಫ್ಲೈಓವರ್ ಬಳಿ-A man cheated a Telangana man near the flyover in Vidyanagar

Fly, over

ವಿದ್ಯಾನಗರ ಫ್ಲೈಓವರ್‌ನ ಕೆಳಗೆ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ತೆಲಂಗಾಣ ರಾಜ್ಯದ ವ್ಯಕ್ತಿಯೊಬ್ಬರಿಗೆ ₹4 ಲಕ್ಷ ವಂಚಿಸಲಾಗಿದೆ.

ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಪಸ್ಪುಲಾ ವಂಶಿ ಎಂಬುವವರು ವಂಚನೆಗೊಳಗಾಗಿದ್ದಾರೆ. ಪಸ್ಪುಲಾ ವಂಶಿಗೆ ಉಡುಪಿಯ ಸುರೇಶ್‌ ಎಂಬಾತನ ಪರಿಚಯವಾಗಿತ್ತು. ಕೆಲವು ತಿಂಗಳ ಹಿಂದೆ ಸುರೇಶ ಕರೆ ಮಾಡಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ತಿಳಿಸಿದ್ದ. ಚಿತ್ರದುರ್ಗಕ್ಕೆ ಕರೆಯಿಸಿಕೊಂಡು ಎರಡು ನಾಣ್ಯಗಳನ್ನು ಕೊಟ್ಟು ಕಳುಹಿಸಿದ್ದ. ತಮ್ಮೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಆ ಎರಡು ನಾಣ್ಯಗಳು ಚಿನ್ನದ್ದು ಎಂದು ಖಚಿತವಾಗಿತ್ತು.

ಅ.16ರಂದು ಪಸ್ಪುಲಾ ವಂಶಿಯನ್ನು ಶಿವಮೊಗ್ಗಕ್ಕೆ ಕರೆಯಿಸಿಕೊಂಡ ಸುರೇಶ್‌ ಚಿನ್ನದ ನಾಣ್ಯಗಳಿರುವ ಚೀಲವನ್ನು ಹಸ್ತಾಂತರ ಮಾಡಿದ್ದ. ₹4 ಲಕ್ಷ ಹಣ ಪಡೆದು ಗಡಿಬಿಡಿಯಲ್ಲಿ ಸ್ಥಳದಿಂದ ತೆರಳಿದ್ದ. ಪಸ್ಪುಲಾ ವಂಶಿ ತಮ್ಮೂರಿಗೆ ಮರಳಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಕುಟುಂಬದವರ ಜೊತೆಗೆ ಚರ್ಚಿಸಿ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A man cheated a Telangana man near the flyover in Vidyanagar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close