SUDDILIVE || SHIVAMOGGA
ತಜ್ಞರ ತಂಡ ಭೇಟಿ, ಬಾಲಣ್ಣನಿಗೆ ಸೂಕ್ತ ಚಿಕಿತ್ಸೆ-Expert team visits, provides appropriate treatment to Balanna
ಸಕ್ರಬೈಲಿನ ಆನೆಯಾದ ಬಾಲಣ್ಣನ ಚಿಕಿತ್ಸೆಗಾಗಿ ಬೆಂಗಳೂರಿನಿಂದ ಮೆಡಿಕಲ್ ತಂಡ ಶಿವಮೊಗ್ಗಕ್ಕೆ ಬಂದಿಳಿದಿದ್ದು ಬಾಲಣ್ಷನ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ.
ಶಿವಮೊಗ್ಗದ ಸಕ್ರೆಬೈಲಿನಲ್ಲಿರುವ ಬಾಲಣ್ಣನಿಗೆ ಕಾಲು ನೋವಿಗಾಗಿ ನೀಡಲಾದ ಪೈಯ್ನ್ ಕಿಲ್ಲರ್ ಚುಚ್ಚುಮದ್ದು ನೀಡಿದ ಕಾರಣ ಕಿವಿಯಲ್ಲಿ ಪಸ್ ಆಗಿತ್ತು. ಪರಿಣಾಮ ಕೊಳೆತವೂ ಸಹ ಆರಂಭವಾಗಿತ್ತು.
ಮಾಧ್ಯಮಗಳ ಖಡಕ್ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಕ್ತ ಚಿಕಿತ್ಸೆ ನೀಡಿ ಅಗತ್ಯ ಕ್ರಮ ಜರುಗಿಸಲು ಆದೇಶಿಸಿದ್ದರು. ಸಚಿವರ ಆದೇಶದ ಮೇರೆಗೆ ಸಿಸಿಎಫ್ ಹನುಮಂತಪ್ಪನವರು ಬೆಂಗಳೂರಿನಿಂದ ತಜ್ಞರ ತಂಡವನ್ನೇ ಆಹ್ವಾನಿಸಿದ್ದಾರೆ.
ಡಾ. ಜಟ್ಟಿಯಪ್ಪ, ಡಾ.ಆನಂದ್, ಡಾ.ಜಗದೀಶ ಹಾಗೂ ಡಾ.ವಾಸಿಂ ಅವರ ನೇತೃತ್ವದಲ್ಲಿ ಮೆಡಿಕಲ್ ಟೀಂ ಚಿಕಿತ್ಸೆಗೆ ಮುಂದಾಗಿದೆ. ಈ ತಂಡ ಎಷ್ಟುದಿನ ಇಲ್ಲೇ ಇರಲಿದೆ ಎಂಬ ಮಾಹಿತಿ ಅಲಭ್ಯವಾಗಿದೆ. ಒಟ್ಟಿನಲ್ಲಿ ಬಾಲಣ್ಣನ ಆರೋಗ್ಯವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸುತ್ತಿದೆ.
Expert team visits, provides appropriate treatment to Balanna
