ad

ಮಾಜಿ ಶಾಸಕರಿಗೆ ತಿವಿದ ಹೋರಿ ವಿಡಿಯೋ ವೈರಲ್-Video of bull taunting former MLA goes viral

 SUDDILIVE || SHIKARIPURA

ಮಾಜಿ ಶಾಸಕರಿಗೆ ತಿವಿದ ಹೋರಿ ವಿಡಿಯೋ ವೈರಲ್-Video of bull taunting former MLA goes viral

Bull, Taunting


ಹೋರಿ ಹಬ್ಬ ವೀಕ್ಷಿಸಲು ತೆರಳಿದ್ದ ಮಾಜಿ ಶಾಸಕ  ಮಹಲಿಂಗಪ್ಪ ಅವರಿಗೆ ಹೋರಿ ತಿವಿದಿದೆ. ಅದೃಷ್ಟವಶಾತ್‌ ಅವರು ಪಾರಾಗಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.

ಮಾಜಿ ಶಾಸಕ ಮಹಾಲಿಂಗಪ್ಪ ಶಿಕಾರಿಪುರದ ಬಳ್ಳಿಗಾವಿಯ ಹೋರಿ ಹಬ್ಬಕ್ಕೆ ತೆರಳಿದ್ದರು. ಹೋರಿಯೊಂದು ಜನರನ್ನು ಓಡಿಸಿಕೊಂಡು ಬಂದಿತ್ತು. ಕೂಡಲೆ ಮಹಾಲಿಂಗಪ್ಪ ಅವರು ಮನೆಯೊಂದರ ಬಾಗಿಲಿನ ಬಳಿ ತೆರಳಿ ನಿಂತಿದ್ದರು. ಅವರತ್ತ ನುಗ್ಗಿದ ಹೋರಿ ಕೊಂಬಿನಲ್ಲಿ ಮಹಾಲಿಂಗಪ್ಪ ಅವರ ಬಟ್ಟೆಗೆ ಚುಚ್ಚಿ ಮೇಲೆ ಎತ್ತಿ ಕೆಳಗೆ ಬೀಳಿಸಿತ್ತು. ಅದೃಷ್ಟವಶಾತ್‌ ಮಹಾಲಿಂಗಪ್ಪ ಪಾರಾಗಿದ್ದಾರೆ. ‌


ಅದರಂತೆ ನಿನ್ನೆ ಶಿಕಾರಿಪುರದಲ್ಲಿ ನಡೆದ ಹೋರಿಹಬ್ಬದಲ್ಲಿ ಹಬ್ಬ ಮುಗಿಸಿ ಹೋಗುತ್ತಿದ್ದ ಹೋರಿಯೊಂದು ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ಪ್ರಾಣಬಿಟ್ಟಿದೆ. ಶಿವಮೊಗ್ಗ ಕಡೆಯಿಂದ ಜಡೆಗೆ ಹೊರಟಿದ್ದ ಖಾಸಗಿ ಬಸ್ ಗಡ ಡಿಕ್ಕಿಹೊಡೆದು ಸಾವನ್ನಪ್ಪಿದೆ. 

ರೈತರು ತಮ್ಮ ಹೊಲಗಳನ್ನು ಉಳುವುದರ ಜೊತೆಗೆ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತದೆ.  ಆದರೆ ತಾಲೂಕಿನಲ್ಲಿ ಇದೀಗ ಹೊಸ ಪ್ರವೃತ್ತಿ ಆರಂಭಗೊಂಡಿದೆ. ಹೋರಿ ಬೆದರಿಸುವ ಹಬ್ಬಕ್ಕಾಗಿಯೇ ಹತ್ತಾರು ಯುವ ಕೃಷಿಕರು ಸೇರಿಕೊಂಡು ಹಣ ಹಾಕಿ ಎತ್ತನ್ನು ಖರೀದಿಸಿ ಅದನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಕೃಷಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸಂತೆ ವ್ಯಾಪಾರ ಮಾಡುವವರು, ಹಮಾಲಿಗಳು ಹಣ ಒಟ್ಟುಗೂಡಿಸಿ, ಎತ್ತನ್ನು ಖರೀದಿಸಿದ್ದಾರೆ. ಅಂತಹ ಹಲವು ಎತ್ತುಗಳು ಸ್ಪರ್ಧೆಶಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಹಾವೇರಿ, ರಾಣೇಬೆನ್ನೂರು, ಹೊನ್ನಾಳಿ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ ಈ ಜಾಗಗಳಲ್ಲಿ ಹೋರಿಬೆದರಿಸುವ ಸ್ಪರ್ಧೆ ನಡೆಯಲಿದೆ. ದುರಾದೃಷ್ಟವಶಾತ್ ಮಾಜಿ ಶಾಸಕರಿಗೆ ಈ ಹಬ್ಬದಲ್ಲಿ ಹೋರಿಯೊಂದು ತಿವಿದಿದೆ.  

Video of bull taunting former MLA goes viral


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close